AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವಿತ್ರಾ ಮನೆಯೂಟಕ್ಕೆ ತಡೆ ಒಡ್ಡಲು ಮುಂದಾದ ಪೊಲೀಸರು: ಜೈಲೂಟವೇ ಗತಿ?

Pavithra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಪರಪ್ಪನ ಅಗ್ರಹಾರದಲ್ಲಿ ದಿನ ದೂಡುತ್ತಿದ್ದು, ಇತ್ತೀಚೆಗಷ್ಟೆ ನ್ಯಾಯಾಲಯದ ಆದೇಶದಂತೆ ಮನೆಯೂಟದ ಸವಲತ್ತು ಪಡೆದಿದ್ದಾರೆ. ಅದಕ್ಕೆ ಮುಂಚೆ ಟಿವಿ ಸಹ ಪಡೆದಿದ್ದರು. ಆದರೆ ಇದೀಗ ಪೊಲೀಸರು ಆದೇಶ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಪವಿತ್ರಾ ಗೌಡಗೆ ಜೈಲೂಟವೇ ಫಿಕ್ಸ್ ಆಗುತ್ತಾ?

ಪವಿತ್ರಾ ಮನೆಯೂಟಕ್ಕೆ ತಡೆ ಒಡ್ಡಲು ಮುಂದಾದ ಪೊಲೀಸರು: ಜೈಲೂಟವೇ ಗತಿ?
Parappana Agrahara
ಮಂಜುನಾಥ ಸಿ.
|

Updated on:Jan 04, 2026 | 3:01 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಸುಪ್ರೀಂಕೋರ್ಟ್​​ನಲ್ಲಿ ಕೊಲೆ ಆರೋಪಿಗಳ ಜಾಮೀನು ರದ್ದಾದ ಬಳಿಕ ಪವಿತ್ರಾ ಗೌಡ ಸತತವಾಗಿ ಜಾಮೀನಿಗಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಜಾಮೀನು ಸಿಕ್ಕಿಲ್ಲ. ಆದರೆ ಈಗ ಜೈಲಿನಲ್ಲಿಯೇ ಕೆಲವು ಸವಲತ್ತುಗಳನ್ನು ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದರು. ಅದರಲ್ಲಿ ಮನೆಯೂಟವೂ ಒಂದಾಗಿತ್ತು. ಪವಿತ್ರಾ ಗೌಡ ಅವರ ಮನೆ ಊಟದ ಬೇಡಿಕೆಯನ್ನು ಇತ್ತೀಚೆಗಷ್ಟೆ ನ್ಯಾಯಾಲಯ ಒಪ್ಪಿತ್ತು. ಅದರಂತೆ ಜನವರಿ 2 ರಿಂದ ಪವಿತ್ರಾಗೆ ಜೈಲಿನಲ್ಲಿ ಮನೆ ಊಟ ಲಭ್ಯವಾಗುತ್ತಿದೆ. ಆದರೆ ಇದಕ್ಕೆ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದು, ಪವಿತ್ರಾಗೆ ಸರಬರಾಜಾಗುತ್ತಿರುವ ಮನೆ ಊಟ ತಡೆಯಲು ಪೊಲೀಸರು ಮೇಲ್ಮನವಿ ಸಲ್ಲಿಸಿಕೆಗೆ ಮುಂದಾಗಿದ್ದಾರೆ.

ಪವಿತ್ರಾ ಗೌಡಗೆ ನೀಡಲಾಗಿರುವ ವಿಶೇಷ ಸೌಲಭ್ಯದ ವಿರುದ್ಧ ಜೈಲಧಿಕಾರಿಗಳು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಈ ಬಗ್ಗೆ ಎಸ್​ಎಸ್​​ಪಿ ಜೊತೆಗೆ ಚರ್ಚೆ ನಡೆಸಿರುವ ಜೈಲಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಪವಿತ್ರಾ ಗೌಡಗೆ ಜೈಲಿನಲ್ಲಿ ಮನೆ ಊಟ ನೀಡಿದರೆ ಇತರೆ ಕೈದಿಗಳು ಮತ್ತು ನ್ಯಾಯಾಂಗ ಬಂಧಿತರ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಎಲ್ಲರೂ ಬೇಡಿಕೆ ಇಡುವ ಸಾಧ್ಯತೆ ಇದೆ ಎಂಬುದು ಪೊಲೀಸರ ವಾದ.

ಇದನ್ನೂ ಓದಿ:ರೇಣುಕಾಸ್ವಾಮಿ ಕೇಸ್: ಎ1 ಪವಿತ್ರಾ ಗೌಡ ಇರುವ ಸೆಲ್​ಗೆ ಟಿವಿ ನೀಡಲು ಕೋರ್ಟ್ ಸೂಚನೆ

ಮಾತ್ರವಲ್ಲದೆ ಜೈಲಿನ ಊಟ ಉತ್ತಮವಾಗಿ, ಶುಚಿಯಾಗಿ, ರುಚಿಯಾಗಿಯೇ ಇದ್ದು, ಈ ವರೆಗೆ ಜೈಲಿನಲ್ಲಿ ಊಟ ತಿಂದು ಪವಿತ್ರಾ ಸೇರಿದಂತೆ ಇನ್ಯಾರೂ ಸಹ ಅಸ್ತವ್ಯಸ್ತಗೊಂಡಿಲ್ಲ ಹೀಗಿರುವಾಗ ಪ್ರತ್ಯೇಕವಾಗಿ ಮನೆ ಊಟದ ಅವಶ್ಯಕತೆ ಇಲ್ಲ ಎಂದು ಪೊಲೀಸರು ವಾದಿಸಲಿದ್ದಾರೆ. ಜೈಲಿನಲ್ಲಿ 4700 ಕೈದಿಗಳು, ನ್ಯಾಯಾಂಗ ಬಂಧಿತರು ಎಲ್ಲರಿಗೂ ಒಂದೇ ರೀತಿಯ ಆಹಾರ ನೀಡಲಾಗುತ್ತಿದೆ. ಈಗ ಪವಿತ್ರಾಗೆ ಮನೆ ಊಟ ನೀಡಿದರೆ ಇತರೆ ಕೈದಿಗಳು ಸಹ ತಮಗೆ ಮನೆ ಊಟ ಬೇಕು ಎಂದು ಬೇಡಿಕೆ ಇಟ್ಟರೆ ಜೈಲಿನ ವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮನದಟ್ಟು ಮಾಡುವ ಪ್ರಯತ್ನ ಮಾಡಲಿದ್ದಾರೆ.

ಪವಿತ್ರಾ ಗೌಡ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆರೋಪಿ ಆಗಿದ್ದಾರೆ. ಈ ಹಿಂದೆ ದರ್ಶನ್ ಸಹ ತಮಗೆ ಜೈಲಿನಲ್ಲಿ ಕೆಲವು ಸವಲತ್ತುಗಳು ಬೇಕು ಎಂದು ಮನವಿ ಮಾಡಿ ನ್ಯಾಯಾಲಯಕ್ಕೆ ಹೋಗಿದ್ದಾಗಲೂ ಸಹ ಪೊಲೀಸರು ಸೌಲಭ್ಯಗಳನ್ನು ನೀಡಲು ನಿರಾಕರಿಸಿದ್ದರು. ಹಾಸಿಗೆ, ದಿಂಬಿಗಾಗಿ ಸಾಕಷ್ಟು ಹೋರಾಟವನ್ನು ದರ್ಶನ್, ನ್ಯಾಯಾಲಯದಲ್ಲಿ ಮಾಡಬೇಕಾಗಿ ಬಂತು. ಈಗ ಪವಿತ್ರಾ ಗೌಡ ಸಹ ವಿಶೇಷ ಸವಲತ್ತುಗಳಿಗಾಗಿ ನ್ಯಾಯಾಲಯದ ಮೂಲಕ ಹೋರಾಟ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Sun, 4 January 26