‘ಡೈಮಂಡ್ ನೆಕ್ಲೆಸ್​ ನಂದೇ, ನಾನೇ ಖರೀದಿ ಮಾಡಿದ್ದೇನೆ’; ರಮ್ಯಾ ರಘುಪತಿಗೆ ಪವಿತ್ರಾ ಲೋಕೇಶ್ ತಿರುಗೇಟು

ನನ್ನ ಅತ್ತೆಯ ಬಳಿ ಒಂದಷ್ಟು ಜ್ಯುವೆಲರಿ ಇದೆ. ನಮ್ಮ ಅತ್ತೆ ಆ ನೆಕ್ಲೆಸ್​ಅನ್ನು ಯಾರಿಗೂ ಕೊಟ್ಟಿಲ್ಲ. ಆದರೆ, ಅದು ಹೇಗೆ ಪವಿತ್ರಾ ಕೈಗೆ ಹೋಯಿತೋ ಎಂಬುದು ಗೊತ್ತಿಲ್ಲ ಎಂದು ರಮ್ಯಾ ರಘುಪತಿ ಆರೋಪಿಸಿದ್ದರು.

‘ಡೈಮಂಡ್ ನೆಕ್ಲೆಸ್​ ನಂದೇ, ನಾನೇ ಖರೀದಿ ಮಾಡಿದ್ದೇನೆ’; ರಮ್ಯಾ ರಘುಪತಿಗೆ ಪವಿತ್ರಾ ಲೋಕೇಶ್ ತಿರುಗೇಟು
Updated By: ರಾಜೇಶ್ ದುಗ್ಗುಮನೆ

Updated on: Jul 02, 2022 | 1:05 PM

ನಟಿ ಪವಿತ್ರಾ ಲೋಕೇಶ್ (Pavitra Lokesh) ಹಾಗು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಅವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ‘ಪವಿತ್ರಾ ಅವರಿಂದಲೇ ನಮ್ಮ ಸಂಸಾರ ಹಾಳಾಯಿತು’ ಎಂದು ರಮ್ಯಾ ರಘುಪತಿ ಆರೋಪಿಸಿದ್ದರು. ಆದರೆ, ಇದನ್ನು ಪವಿತ್ರಾ ಲೋಕೇಶ್​ ಹಾಗೂ ನರೇಶ್ ಅಲ್ಲಗಳೆದಿದ್ದರು. ಈಗ ರಮ್ಯಾ ಅವರು ಹೊಸ ಆರೋಪ ಮಾಡಿದ್ದಾರೆ. ‘ಪವಿತ್ರಾ ಲೋಕೇಶ್​ ಅವರ ಕತ್ತಿನಲ್ಲಿರುವ ಡೈಮಂಡ್ ನೆಕ್ಲೆಸ್ ನನ್ನ ಅತ್ತೆಯದು’ ಎಂದು ರಮ್ಯಾ ಹೇಳಿದ್ದರು. ಇದನ್ನು ಪವಿತ್ರಾ ಅಲ್ಲಗಳೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಮ್ಯಾ ರಘುಪತಿ ಅವರು, ‘ನನ್ನ ಅತ್ತೆಯ ಬಳಿ ಒಂದಷ್ಟು ಜ್ಯುವೆಲರಿ ಇದೆ. ಅವರು ಇದನ್ನು ಯಾರಿಗೂ ಕೊಡುವುದಿಲ್ಲ. ಆ ಜ್ಯುವೆಲರಿ ಮನೆ ಮಕ್ಕಳಿಗೆ ಸೇರಬೇಕು. ನಮ್ಮ ಅತ್ತೆ ಆ ನೆಕ್ಲೆಸ್​ಅನ್ನು ಯಾರಿಗೂ ಕೊಟ್ಟಿಲ್ಲ. ಆದರೆ, ಅದು ಹೇಗೆ ಪವಿತ್ರಾ ಕೈಗೆ ಹೋಯಿತೋ ಎಂಬುದು ಗೊತ್ತಿಲ್ಲ’ ಎಂದಿದ್ದಾರೆ.

ರಮ್ಯಾ ರಘುಪತಿ ಭಟ್​ ಆರೋಪಕ್ಕೆ ನಟಿ ಪವಿತ್ರಾ ತಿರುಗೇಟು ನೀಡಿದ್ದಾರೆ. ‘ಡೈಮಂಡ್​ ನೆಕ್ಲೆಸ್​ ಖರೀದಿಸಲು ನನಗೂ ಶಕ್ತಿಯಿದೆ. ಡೈಮಂಡ್ ನೆಕ್ಲೆಸ್​ ನನ್ನದೇ. ಅದನ್ನು ನಾನೇ ಖರೀದಿ ಮಾಡಿದ್ದೇನೆ. ಒಂದೇ ರೀತಿಯ ನೆಕ್ಲೆಸ್​ ಬೇರೆಯವರ ಬಳಿ ಇರಬಾರದಾ? ಐಶ್ವರ್ಯಾ ರೈ ಹಾಕುವ ನೆಕ್ಲೆಸ್​ ನಾನು ಹಾಕಬಾರದು ಅಂದ್ರೆ ಹೇಗೆ? ರಮ್ಯಾ ರಘುಪತಿ ಭಟ್​ ಆರೋಪಗಳಿಗೆ ನಾನು ಉತ್ತರಿಸುವುದಿಲ್ಲ. ನನಗೆ ನನ್ನದನ್ನು ನೋಡಿಕೊಳ್ಳಬೇಕು, ಮಕ್ಕಳನ್ನು ನೋಡಿಕೊಳ್ಳಬೇಕು’ ಎಂದಿದ್ದಾರೆ ಪವಿತ್ರಾ.

ಇದನ್ನೂ ಓದಿ
Ramya Raghupathi: ‘ಮಹಿಳೆಯರ ಜತೆ ನರೇಶ್​ ಕೆಟ್ಟದಾಗಿ ಮಾತಾಡಿದ 400 ಕಾಲ್​ ರೆಕಾರ್ಡಿಂಗ್​ ಇದೆ’: ಗಂಡನಿಗೆ ರಮ್ಯಾ ರಘುಪತಿ ತಿರುಗೇಟು
‘200 ನಟಿಯರ ಜತೆ ನಟಿಸಿದ್ದೇನೆ, ಒಬ್ಬರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರಾ ಕೇಳಿ’; ನರೇಶ್ ಚಾಲೆಂಜ್
‘ನನಗೂ-ನರೇಶ್​​ಗೂ ಡಿವೋರ್ಸ್ ಆಗಿಲ್ಲ’; ಮೂರನೇ ಹೆಂಡತಿ ರಮ್ಯಾ ರಘುಪತಿ ಮಾತು
ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ವಿ; ನರೇಶ್ ಹೆಂಡತಿಯ ಮಾತು

ಪವಿತ್ರಾ ಲೋಕೇಶ್​ ಅವರು ದುಡ್ಡಿಗಾಗಿ ನರೇಶ್​ ಜೊತೆ ಇದ್ದಾರೆ ಎಂದು ಸುಚೇಂದ್ರ ಪ್ರಸಾದ್​ ಹೇಳಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಅದಕ್ಕೆ ಪವಿತ್ರಾ ಲೋಕೇಶ್​ ತಿರುಗೇಟು ನೀಡಿದ್ದರು. ‘ನಾನು ಸುಚೇಂದ್ರ ಪ್ರಸಾದ್​ ಜೊತೆ 11 ವರ್ಷ ಒಟ್ಟಿಗೆ ಇದ್ದೆ. ಈಗ 5 ವರ್ಷದಿಂದ ಅವರ ಜೊತೆ ಇಲ್ಲ. 11 ವರ್ಷ ನಾನು-ಅವರು ಜೊತೆಗಿದ್ದಾಗ ಅವರ ಬಳಿ ಏನೂ ಇರಲಿಲ್ಲ. ದುಡ್ಡು, ಕಾರು, ಮನೆ ಕೂಡ ಇರಲಿಲ್ಲ. ದುಡ್ಡಿಗಾಗಿ ಇರೋದಾಗಿದ್ದರೆ ಕೇವಲ ಒಂದು ವರ್ಷ ಆ ಸಂಬಂಧ ಉಳಿಯುತ್ತಿತ್ತು 11 ವರ್ಷ ಇರುತ್ತಿರಲಿಲ್ಲ’ ಎಂದು ಪವಿತ್ರಾ ಲೋಕೇಶ್​ ಹೇಳಿದ್ದರು.

ಇದನ್ನೂ ಓದಿ: ನರೇಶ್ ಪತ್ನಿಯನ್ನು ಭೇಟಿ ಮಾಡಿಯೇ ಇಲ್ಲ; ಬೆಳ್ಳಿ ಬಟ್ಟಲಲ್ಲಿ ಊಟ ಹಾಕಿದ ಹೇಳಿಕೆಗೆ ಪವಿತ್ರಾ ಲೋಕೇಶ್ ತಿರುಗೇಟು

ಪವಿತ್ರಾ ಲೋಕೇಶ್ ವಿಚಾರದಲ್ಲಿ ಸ್ವಚ್ಛ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ ಸುಚೇಂದ್ರ ಪ್ರಸಾದ್​