ತಮ್ಮದೇ ಸಿನಿಮಾ ಹೆಸರು ಮರೆತ ಪವನ್ ಕಲ್ಯಾಣ್; ವೇದಿಕೆ ಮೇಲೆ ತಡಬಡಾಯಿಸಿದ ಹೀರೋ
ಮಹಾ ಮ್ಯಾಕ್ಸ್ ಎಂಟರ್ಟೇನ್ಮೆಂಟ್ ಚಾನೆಲ್ನ ಲಾಂಚ್ ಮಾಡಲು ಬಂದಿದ್ದರು ಪವನ್ ಕಲ್ಯಾಣ್. ಈ ವೇಳೆ ಅವರು ತಮ್ಮ ಸಿನಿಮಾ ಹೆಸರು ಹೇಳಲು ಹೋದರು. ಆದರೆ, ಅದು ನೆನಪಿಗೆ ಬರಲೇ ಇಲ್ಲ. ಅಷ್ಟಕ್ಕೂ ಅವರು ಹೇಳಲು ಹೊರಟಿದ್ದ ಸಿನಿಮಾದ ಹೆಸರು ‘ಉಸ್ತಾದ್ ಭಗತ್ ಸಿಂಗ್’.

ಪವನ್ ಕಲ್ಯಾಣ್ (Pawan Kalyan) ಅವರಿಗೆ ಇತ್ತೀಚೆಗೆ ಸಿನಿಮಾ ಮೇಲೆ ಇರುವ ಆಸಕ್ತಿ ಕೊಂಚ ಕಡಿಮೆ ಆದಂತೆ ಇದೆ. ಅವರು ತಮ್ಮ ಗಮನವನ್ನೆಲ್ಲ ರಾಜಕೀಯದ ಮೇಲೆ ತೋರಿಸುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಪವನ್ ಅವರು ತಮ್ಮದೇ ಸಿನಿಮಾದ ಹೆಸರನ್ನು ಮರೆತಿದ್ದಾರೆ. ಹಾಗಂತ ಅದೆಷ್ಟೋ ವರ್ಷಗಳ ಹಿಂದೆ ಮಾಡಿದ ಸಿನಿಮಾದ ಟೈಟಲ್ನ ಅವರು ಮರೆತಿದ್ದಲ್ಲ. ಸದ್ಯ ಕೆಲಸ ಪ್ರಗತಿಯಲ್ಲಿರುವ ಸಿನಿಮಾ ಹೆಸರೇ ನೆನಪಿಗೆ ಬಂದಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಹಾ ಮ್ಯಾಕ್ಸ್ ಎಂಟರ್ಟೇನ್ಮೆಂಟ್ ಚಾನೆಲ್ನ ಲಾಂಚ್ ಮಾಡಲು ಬಂದಿದ್ದರು ಪವನ್ ಕಲ್ಯಾಣ್. ಈ ವೇಳೆ ಅವರು ತಮ್ಮ ಸಿನಿಮಾ ಹೆಸರು ಹೇಳಲು ಹೋದರು. ಆದರೆ, ಅದು ನೆನಪಿಗೆ ಬರಲೇ ಇಲ್ಲ. ಅಷ್ಟಕ್ಕೂ ಅವರು ಹೇಳಲು ಹೊರಟಿದ್ದ ಸಿನಿಮಾದ ಹೆಸರು ‘ಉಸ್ತಾದ್ ಭಗತ್ ಸಿಂಗ್’. ಆದರೆ, ಅವರು ಉಸ್ತಾದ್ ಎನ್ನುವ ಬದಲು ‘ಸರ್ದಾರ್ ಭಗತ್ ಸಿಂಗ್’ ಎಂದು ಹೇಳಿದರು. ಆ ಬಳಿಕ ಸರ್ದಾರ್ ಅಲ್ಲ ಅನ್ನೋದು ಅವರಿಗೂ ಗೊತ್ತಾಯಿತು. ಸಿನಿಮಾದ ನಿಜವಾದ ಟೈಟಲ್ ನೆನಪಿಸಿಕೊಳ್ಳಲು ಪ್ರಯತ್ನಿಸಿದರು. ಅಲ್ಲಿದ್ದವರು ಪವನ್ಗೆ ಶೀರ್ಷಿಕೆ ಯಾವುದು ಎಂಬುದನ್ನು ನೆನಪಿಸಿದರು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಚರ್ಚೆ ಆಗುತ್ತಿದೆ. ಅನೇಕರು ಇದು ಪವನ್ ಕಲ್ಯಾಣ್ಗೆ ಆದ ಅವಮಾನ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಈ ರೀತಿಯ ತಪ್ಪುಗಳು ಎಲ್ಲರಿಂದಲೂ ಆಗುತ್ತವೆ ಎಂದಿದ್ದಾರೆ. ‘ಕೆಲವೊಮ್ಮೆ ಕೆಲವು ವಿಚಾರಗಳು ಮರೆತು ಹೋಗುತ್ತವೆ. ಅದನ್ನು ಇಷ್ಟು ದೊಡ್ಡ ವಿಚಾರವನ್ನಾಗಿ ಮಾಡುವ ಅವಶ್ಯಕತೆ ಇಲ್ಲ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
#UstaadBhagathSingh . pic.twitter.com/KGzcMi50Lm
— Rusthum (@RusthumlHere) October 24, 2023
ಇದನ್ನೂ ಓದಿ: 20 ವರ್ಷಗಳ ಬಳಿಕ ನಟನೆಗೆ ಮರಳಿದ ಪವನ್ ಕಲ್ಯಾಣ್ ಮಾಜಿ ಪತ್ನಿ
ಸದ್ಯ ಪವನ್ ಕಲ್ಯಾಣ್ ಅವರು ‘ಉಸ್ತಾದ್ ಭಗತ್ ಸಿಂಗ್’, ‘ಒಜಿ’ ಹಾಗೂ ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹರೀಶ್ ಶಂಕರ್ ಅವರು ‘ಉಸ್ತಾದ್ ಭಗತ್ ಸಿಂಗ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2016ರಲ್ಲಿ ರಿಲೀಸ್ ಆದ ತಮಿಳಿನ ‘ತೇರಿ’ ಚಿತ್ರವನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ರಾಜಕೀಯದಲ್ಲಿ ಪವನ್ ಬ್ಯುಸಿ ಇರುವುದರಿಂದ ಚಿತ್ರದ ಕೆಲಸ ವಿಳಂಬ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:06 am, Wed, 25 October 23