‘ನೀವು ಪವನ್ ಅಲ್ಲ, ಬಿರುಗಾಳಿ’; ಪ್ರಧಾನಿ ಮೋದಿ ಹೊಗಳಿಕೆಗೆ ಪವನ್ ರಿಯಾಕ್ಷನ್ ನೋಡಿ

‘ಜನಸೇನಾ ಪರವಾಗಿ ನನ್ನ ಧನ್ಯವಾದ. ಇಲ್ಲಿಗೆ ಬರೋಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದ. 2014ರಲ್ಲಿ ಇಲ್ಲಿಂದಲೇ ಆರಂಭ ಆಗಿತ್ತು. 15 ವರ್ಷ ಪ್ರಧಾನಿ ನಮ್ಮ ದೇಶದಲ್ಲಿ ಪ್ರಧಾನಿ ಆಗಿರಬೇಕು ಎಂದು ನಾನು ಹಾಗೂ ಚಂದ್ರಬಾಬು ನಾಯ್ಡು ಮಾತನಾಡಿಕೊಂಡಿದ್ದೆವು’ ಎಂದಿದ್ದಾರೆ ಪವನ್.

‘ನೀವು ಪವನ್ ಅಲ್ಲ, ಬಿರುಗಾಳಿ’; ಪ್ರಧಾನಿ ಮೋದಿ ಹೊಗಳಿಕೆಗೆ ಪವನ್ ರಿಯಾಕ್ಷನ್ ನೋಡಿ
ಪವನ್-ಮೋದಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Jun 08, 2024 | 8:00 AM

ಪವನ್ ಕಲ್ಯಾಣ್ (Pawan Kalyan) ಅವರ ಜನಸೇನಾ ಪಕ್ಷ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿದೆ. ಈ ಗೆಲುವಿನಿಂದ ಅವರು ರಾಜಕೀಯದಲ್ಲಿ ಮೊದಲ ಬಾರಿಗೆ ನಗು ಬೀರುವಂತೆ ಆಗಿದೆ. ವಿಧಾನಸಭೆಯಲ್ಲಿ ಸ್ಪರ್ಧಿಸಿದ 17 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಅವರು ಗೆದ್ದಿದ್ದಾರೆ. ಲೋಕಸಭೆಯಲ್ಲಿ ಸಿಕ್ಕ ಎರಡೂ ಕ್ಷೇತ್ರದಲ್ಲಿ ಅವರ ಪಕ್ಷ ಗೆಲುವು ಕಂಡಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಎನ್​​ಡಿಎ ಸಭೆಯಲ್ಲಿ ಮೋದಿ ಅವರು ಪವನ್ ಕಲ್ಯಾಣ್ ಅವರನ್ನು ಹೊಗಳಿದ್ದಾರೆ.

ಪವನ್ ಕಲ್ಯಾಣ್ ಅವರ ಆಂಧ್ರ ಪ್ರದೇಶದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದಾರೆ. ಈ ಕಾರಣಕ್ಕೆ ಪ್ರಧಾನಿ ಮೋದಿಗೆ ಅವರ ಬಗ್ಗೆ ಹೆಮ್ಮೆ ಬಂದಿದೆ. ಹೀಗಾಗಿ, ಪವನ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಪವನ ಎಂದರೆ ಗಾಳಿ ಎಂಬರ್ಥ ಇದೆ. ‘ಇವರು ಪವನ (ಗಾಳಿ) ಅಲ್ಲ ಬಿರುಗಾಳಿ’ ಎಂದು ಪವನ್​ ಅವರನ್ನು ಹೊಗಳಿದ್ದಾರೆ ಮೋದಿ. ಇದರಿಂದ ಅವರು ಖುಷಿ ಪಟ್ಟಿದ್ದಾರೆ.

ಪವನ್ ಕಲ್ಯಾಣ್ ಅವರು ಮೋದಿ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಜನಸೇನಾ ಪರವಾಗಿ ನನ್ನ ಧನ್ಯವಾದ. ಇಲ್ಲಿಗೆ ಬರೋಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದ. 2014ರಲ್ಲಿ ಇಲ್ಲಿಂದಲೇ ಆರಂಭ ಆಗಿತ್ತು. 15 ವರ್ಷ ಪ್ರಧಾನಿ ನಮ್ಮ ದೇಶದಲ್ಲಿ ಪ್ರಧಾನಿ ಆಗಿರಬೇಕು ಎಂದು ನಾನು ಹಾಗೂ ಚಂದ್ರಬಾಬು ನಾಯ್ಡು ಮಾತನಾಡಿಕೊಂಡಿದ್ದೆವು. ಅದು ಸಂಭವಿಸುತ್ತಿದೆ. ನೀವು ಇಡೀ ದೇಶಕ್ಕೆ ಸ್ಫೂರ್ತಿ’ ಎಂದು ಮೋದಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಪವನ್.

2008ರಲ್ಲಿ ಪವನ್ ಕಲ್ಯಾಣ್ ಅವರು ರಾಜಕೀಯಕ್ಕೆ ಬಂದರು. ‘ಪ್ರಜಾ ರಾಜ್ಯಂ ಪಕ್ಷದ’ ಯುವ ಪಡೆಗೆ ಅವರು ಮುಖ್ಯಸ್ಥರಾಗಿದ್ದರು. ಆದರೆ, ಅನಾರೋಗ್ಯ ಕಾರಣದಿಂದ ಅವರು ಚುನಾವಣೆಯಿಂದ ಹಿಂದೆ ಸರಿದರು. 2014ರಲ್ಲಿ ಅವರು ಜನಸೇನಾ ಪಕ್ಷಕ್ಕೆ ಮರಳಿದರು.

ಇದನ್ನೂ ಓದಿ: ಪವನ್ ಕಲ್ಯಾಣ್​ಗೆ ತುಚ್ಛ ಪದ ಬಳಸಿದ್ದ ಪೋಸಾನಿ ಕೃಷ್ಣ ಸಿನಿಮಾ ಬದುಕು ಅಂತ್ಯ?

ಪವನ್ ಕಲ್ಯಾಣ್ ಅವರಿಗೆ ಈಗ 55 ವರ್ಷ ವಯಸ್ಸು. ಚಿರಂಜೀವಿ, ನಾಗೇಂದ್ರ ಬಾಬು ಇವರ ಸಹೋದರರು. ಪವನ್ ಕಲ್ಯಾಣ್ ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.  ಅವರು ಇತ್ತೀಚೆಗೆ ಸಿನಿಮಾ ರಂಗದಲ್ಲಿ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು