Pawan kalyan: ಪವನ್​ ಕಲ್ಯಾಣ್​ ಜೊತೆ ಶ್ರೀರೆಡ್ಡಿ ಫೋಟೋ ವೈರಲ್​; ಇದು ಅಸಲಿಯೋ ನಕಲಿಯೋ?

|

Updated on: Apr 18, 2021 | 8:11 AM

Sri Reddy: ಕೊವಿಡ್​ ಸೋಂಕಿತರಾಗಿರುವ ಪವನ್​ ಅವರನ್ನು ಸದ್ಯ ಶ್ರೀರೆಡ್ಡಿ ನೋಡಿಕೊಳ್ಳುತ್ತಿದ್ದಾರಂತೆ! ಅದಕ್ಕೆ ಸಾಕ್ಷಿ ಎಂಬಂತೆ ಅವರು ಫೇಸ್​ಬುಕ್​ನಲ್ಲಿ ಒಂದು ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

Pawan kalyan: ಪವನ್​ ಕಲ್ಯಾಣ್​ ಜೊತೆ ಶ್ರೀರೆಡ್ಡಿ ಫೋಟೋ ವೈರಲ್​; ಇದು ಅಸಲಿಯೋ ನಕಲಿಯೋ?
ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಪವನ್​ ಕಲ್ಯಾಣ್​ ಮತ್ತು ಶ್ರೀರೆಡ್ಡಿ ಫೋಟೋ
Follow us on

ಟಾಲಿವುಡ್​ನ ಸ್ಟಾರ್​ ನಟ ಪವನ್​ ಕಲ್ಯಾಣ್​ ಅವರಿಗೆ ಕೊರೊನಾ ವೈರಸ್​ ತಗುಲಿರುವುದು ಧೃಡವಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಪವನ್​ ಬಗ್ಗೆ ಬೇರೆ ಬೇರೆ ರೀತಿಯ ಕೀಟಲೆಗಳನ್ನು ಮಾಡಲಾಗುತ್ತಿದೆ. ಪವನ್​ ಕಲ್ಯಾಣ್​ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವುದೇ ಫೇಕ್​ ಎಂದು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಹೇಳಿದ್ದರು. ಅದರ ಬೆನ್ನಲ್ಲೇ ನಟಿ ಶ್ರೀರೆಡ್ಡಿ ಇನ್ನೊಂದು ವಿಚಾರಕ್ಕೆ ಪವನ್​ ಕಲ್ಯಾಣ್​ ಅವರನ್ನು ಎಳೆದು ತಂದಿದ್ದಾರೆ.

ಕೊವಿಡ್​ ಸೋಂಕಿತರಾಗಿರುವ ಪವನ್​ ಅವರನ್ನು ಸದ್ಯ ಶ್ರೀರೆಡ್ಡಿ ನೋಡಿಕೊಳ್ಳುತ್ತಿದ್ದಾರಂತೆ! ಅದಕ್ಕೆ ಸಾಕ್ಷಿ ಎಂಬಂತೆ ಅವರು ಫೇಸ್​ಬುಕ್​ನಲ್ಲಿ ಒಂದು ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಪವನ್​ ಮಲಗಿರುವ ಬೆಡ್​ ಪಕ್ಕದಲ್ಲೇ ಶ್ರೀರೆಡ್ಡಿ ಕುಳಿತುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಇದು ಅಸಲಿಯೋ ನಕಲಿಯೋ ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ಪವನ್​ ಕಲ್ಯಾಣ್ ಅವರನ್ನು ನೋಡಿಕೊಳ್ಳುವ ಈ ಕೆಲಸವನ್ನು ರಾಮ್​ ಗೋಪಾಲ್​ ವರ್ಮಾ ನನಗೆ ನೀಡಿದ್ದಾರೆ. ನಾನು ಇವರ ಸೇವೆ ಮಾಡುತ್ತೇನೆ’ ಎಂದು ಆ ಫೋಟೋ ಜೊತೆ ಶ್ರೀರೆಡ್ಡಿ ಬರೆದುಕೊಂಡಿದ್ದಾರೆ. ಸರಿಯಾಗಿ ಗಮನಿಸಿದರೆ ಇದು ಫೇಕ್​ ಫೋಟೋ ಎಂಬುದು ಗೊತ್ತಾಗುತ್ತದೆ. ಪವನ್​ ಕಲ್ಯಾಣ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಎಡಿಟ್​ ಮಾಡಲಾಗಿದೆ. ಅದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.

ಶ್ರೀರೆಡ್ಡಿ ಇಷ್ಟಕ್ಕೇ ಸುಮ್ಮನಾಗಿಲ್ಲ. ಇನ್ನೊಂದು ವಿಡಿಯೋ ಕೂಡ ಮಾಡಿದ್ದಾರೆ. ಅದರಲ್ಲಿ ಏನೇನೋ ಕಥೆ ಕಟ್ಟಿ ಹೇಳಿದ್ದಾರೆ. ಒಟ್ಟಿನಲ್ಲಿ ಪವನ್​ ಕಲ್ಯಾಣ್​ ಅವರ ಅನಾರೋಗ್ಯವನ್ನು ಹಾಸ್ಯದ ವಿಷಯವಾಗಿ ಅವರು ಪರಿಗಣಿಸಿದ್ದಾರೆ. ಇದು ಪವನ್​ ಕಲ್ಯಾಣ್​ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಅಂದಹಾಗೆ, ಶ್ರೀರೆಡ್ಡಿ ಈ ರೀತಿ ವಿಲಕ್ಷಣವಾಗಿ ಗಮನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ. ಆಗಾಗ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ವಿಚಿತ್ರವಾದ ಪೋಸ್ಟ್​ಗಳನ್ನು ಹಾಕುತ್ತಿರುತ್ತಾರೆ.

ಪವನ್​ ಕಲ್ಯಾಣ್​ ಅವರಿಗೆ ಕೊವಿಡ್​ ಬಂದಿರುವುದನ್ನು ಶುಕ್ರವಾರ (ಏ.16) ಜನಸೇನಾ ಪಾರ್ಟಿ ಖಚಿತಗೊಳಸಿತ್ತು. ತಿರುಪತಿಯಲ್ಲಿ ಚುನಾವಣಾ ಪ್ರಚಾರ ಮುಗಿಸಿ ಬಂದ ಬಳಿಕ ಪವನ್​ ಆರೋಗ್ಯದಲ್ಲಿ ಏರುಪೇರಾಯಿತು. ‘ನನ್ನ ಆರೋಗ್ಯ ಸ್ಥಿರವಾಗಿದೆ. ನಾನು ಚೆನ್ನಾಗಿದ್ದೇನೆ. ಇದನ್ನು ಎದುರಿಸಿ ಆದಷ್ಟು ಬೇಗ ಗುಣಮುಖನಾಗುತ್ತೇನೆ’ ಎಂದು ಪವನ್​ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: ಪವನ್​ ಕಲ್ಯಾಣ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಫೇಕ್​

ಪವನ್​ ಕಲ್ಯಾಣ್​ ಭವಿಷ್ಯದ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗಪಡಿಸಿದ ಜ್ಯೋತಿಷಿಗಳು