AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pawan Kalyan: ಒಂದು ದಿನದ ಕಾಲ್​ಶೀಟ್​ಗೆ ಪವನ್ ಕಲ್ಯಾಣ್ ಪಡೆಯೋದು ಎಷ್ಟು ಕೋಟಿ ರೂಪಾಯಿ?

ತಮಿಳಿನ ‘ವಿನೋದಯಾ ಸೀತಂ’ ಚಿತ್ರದ ತೆಲುಗು ರಿಮೇಕ್​ನಲ್ಲಿ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಕೂಡ ಇತ್ತೀಚೆಗೆ ರಿಲೀಸ್ ಆಗಿದೆ.

Pawan Kalyan: ಒಂದು ದಿನದ ಕಾಲ್​ಶೀಟ್​ಗೆ ಪವನ್ ಕಲ್ಯಾಣ್ ಪಡೆಯೋದು ಎಷ್ಟು ಕೋಟಿ ರೂಪಾಯಿ?
ಪವನ್ ಕಲ್ಯಾಣ್
ರಾಜೇಶ್ ದುಗ್ಗುಮನೆ
|

Updated on:Mar 01, 2023 | 11:46 AM

Share

ಪವನ್ ಕಲ್ಯಾಣ್ (Pawan Kalyan) ಅವರು ಟಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇತ್ತೀಚೆಗೆ ರಾಜಕೀಯದಲ್ಲಿ ಅವರು ಆ್ಯಕ್ಟೀವ್ ಆಗಿರುವುದರಿಂದ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸೋಕೆ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ಆರಂಭದಲ್ಲಿ ತೆರೆಗೆ ಬಂದ ‘ಭೀಮ್ಲಾ ನಾಯಕ್’ (Bheemla Nayak) ಚಿತ್ರವೇ ಕೊನೆ. ಆ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಈಗ ಅವರ ಕಾಲ್​ಶೀಟ್​ ಮೊತ್ತ ಕೇಳಿ ಅನೇಕರು​ ಅಚ್ಚರಿಗೊಂಡಿದ್ದಾರೆ. ಬಾಲಿವುಡ್ ಸ್ಟಾರ್ ಹೀರೋಗಿಂತ ಹೆಚ್ಚಿನ ಸಂಭಾವನೆಯನ್ನು ಪವನ್ ಕಲ್ಯಾಣ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ತಮಿಳಿನ ‘ವಿನೋದಯಾ ಸೀತಂ’ ಚಿತ್ರದ ತೆಲುಗು ರಿಮೇಕ್​ನಲ್ಲಿ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಕೂಡ ಇತ್ತೀಚೆಗೆ ರಿಲೀಸ್ ಆಗಿದೆ. ಈ ಪೋಸ್ಟರ್​ನಲ್ಲಿ ಸಾಯಿ ಧರಮ್ ತೇಜ್ ಅವರು ಕುರ್ಚಿ ಮೇಲೆ ಕುಳಿತಿದ್ದು, ಅವರ ಹೆಗಲಮೇಲೆ ಪವನ್ ಕಲ್ಯಾಣ್ ಕೈ ಹಾಕಿ ನಿಂತಿದ್ದಾರೆ. ಈ ಚಿತ್ರದಲ್ಲಿ ನಟಿಸೋಕೆ ಪವನ್ ಕಲ್ಯಾಣ್ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಆರಂಭದಲ್ಲಿ ಈ ಚಿತ್ರಕ್ಕಾಗಿ ಪವನ್ ಕಲ್ಯಾಣ್ ಅವರು 100 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು. ಇದನ್ನು ಕೊಡಲು ನಿರ್ಮಾಪಕರು ಕೂಡ ಒಪ್ಪಿದ್ದರು. ಆದರೆ, ಪವನ್ ಕಲ್ಯಾಣ್​ಗೆ ಸಮಯ ಸಿಗುತ್ತಿಲ್ಲ. ಇತರ ಚಿತ್ರದ ಕೆಲಸಗಳು ಹಾಗೂ ರಾಜಕೀಯ ಕೆಲಸಗಳಲ್ಲಿ ಪವನ್ ಕಲ್ಯಾಣ್ ಬ್ಯುಸಿ ಇದ್ದಾರೆ. ಹೀಗಾಗಿ, ಅವರು ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ತೆಲುಗು ನಟ ಪವನ್ ಕಲ್ಯಾಣ್ ಕಾರ್ ಹಿಂಬಾಲಿಸಿದ ಅನುಮಾನಾಸ್ಪದ ವ್ಯಕ್ತಿಗಳು: ಸ್ಟಾರ್ ಮನೆ ಎದುರು ನಡುರಸ್ತೆಯಲ್ಲಿ ಮಧ್ಯರಾತ್ರಿ ಜಗಳ

ಪವನ್ ಕಲ್ಯಾಣ್ ಅವರು ಈ ಚಿತ್ರಕ್ಕಾಗಿ 20 ದಿನದ ಕಾಲ್​ಶೀಟ್ ನೀಡಿದ್ದಾರೆ. ಇದಕ್ಕಿಂತ ಹೆಚ್ಚಿನ ಸಮಯ ಹೊಂದಿಸೋಕೆ ಅವರಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 50 ಕೋಟಿ ರೂಪಾಯಿ. ಅಂದರೆ ಒಂದು ದಿನದ ಸಂಭಾವನೆ 3.3 ಕೋಟಿ ರೂಪಾಯಿ. ಒಂದು ದಿನದ ಕಾಲ್​ಶೀಟ್​ಗೆ ಪವನ್ ಕಲ್ಯಾಣ್ ಇಷ್ಟೊಂದು ಹಣ ಪಡೆಯುತ್ತಿದ್ದಾರೆ ಎನ್ನುವ ವಿಚಾರ ಫ್ಯಾನ್ಸ್​​ಗೆ ಅಚ್ಚರಿ ಮೂಡಿಸಿದೆ. ಬಾಲಿವುಡ್ ಸ್ಟಾರ್ ಕಲಾವಿದರೂ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವುದಿಲ್ಲ ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:44 am, Wed, 1 March 23