‘ಓಜಿ’ ಶೂಟಿಂಗ್ ಪ್ರಾರಂಭಿಸಿದ ಪವನ್ ಕಲ್ಯಾಣ್, ಸಾಕಷ್ಟು ಬದಲಾವಣೆ
Pawan Kalyan: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳ ಚಿತ್ರೀಕರಣ ಮುಂದುವರೆಸಿದ್ದಾರೆ. ಈಗಾಗಲೇ ‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣ ಮುಗಿಸಿರುವ ಪವನ್, ಇದೀಗ ‘ಓಜಿ’ ಸಿನಿಮಾ ಕೈಗೆತ್ತುಕೊಂಡಿದ್ದಾರೆ. ಡಿಸಿಎಂ ಆಗಿರುವ ಕಾರಣ ಅವರ ಇಮೇಜಿಗೆ ತಕ್ಕಂತೆ ಕತೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರಂತೆ ನಿರ್ದೇಶಕರು.

ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ ಆದ ಬಳಿಕ ಪವನ್ ಕಲ್ಯಾಣ್ (Pawan Kalyan) ಚಿತ್ರರಂಗದಿಂದ ವಿರಾಮ ಪಡೆದಿದ್ದರು. ತಾವಿನ್ನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸಹ ಹೇಳಿದ್ದರು. ಆದರೆ ಅವರು ಚಿತ್ರರಂಗವನ್ನು ಬಿಟ್ಟರೂ, ಚಿತ್ರರಂಗ ಅವರನ್ನು ಬಿಡುತ್ತಿಲ್ಲ. ಪವನ್ ಕಲ್ಯಾಣ್, ಆಂಧ್ರ ವಿಧಾನಸಭೆ ಚುನಾವಣೆಗೆ ಮುಂಚೆ ಪವನ್ ಕಲ್ಯಾಣ್ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅವುಗಳನ್ನು ಅರ್ಧಕ್ಕೆ ಬಿಟ್ಟು ಚುನಾವಣೆಗೆ ಧುಮುಕಿದ್ದರು. ಈಗ ನಿರ್ಮಾಪಕರ ಒತ್ತಡದ ಕಾರಣಕ್ಕೆ ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಪುನಃ ಪ್ರಾರಂಭಿಸಿದ್ದಾರೆ ಪವನ್ ಕಲ್ಯಾಣ್.
‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣ ಮೊದಲು ಆರಂಭಿಸಿದ್ದ ಪವನ್ ಕಲ್ಯಾಣ್ ಆ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಅದರ ಬೆನ್ನಲ್ಲೆ ಈಗ ‘ಓಜಿ’ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣ ನಡೆಸಿದ ಸೆಟ್ನಲ್ಲಿಯೇ ‘ಓಜಿ’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಪವನ್ ಕಲ್ಯಾಣ್ಗಾಗಿ ‘ಓಜಿ’ ಸಿನಿಮಾದ ಕತೆ, ಪ್ರೊಡಕ್ಷನ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆಯಂತೆ.
ಇದನ್ನೂ ಓದಿ:ಒಟಿಟಿಗಳಿಂದ ಪವನ್ ಕಲ್ಯಾಣ್ ಸಿನಿಮಾಗಳ ಮೇಲೆ ಒತ್ತಡ, ಸಂಕಷ್ಟದಲ್ಲಿ ನಿರ್ಮಾಪಕರು
ಸಿನಿಮಾದ ಚಿತ್ರೀಕರಣವನ್ನು ಹಲವು ಕಡೆಗಳಲ್ಲಿ ಮಾಡಲು ಚಿತ್ರತಂಡ ಈ ಮೊದಲು ಯೋಜಿಸಿತ್ತು. ಹೈದರಾಬಾದ್, ಕಲ್ಕತ್ತ ಸೇರಿದಂತೆ ವಿದೇಶಗಳಲ್ಲಿಯೂ ಸಿನಿಮಾದ ಚಿತ್ರೀಕರಣ ಮಾಡಲು ಯೋಜನೆ ಹಾಕಲಾಗಿತ್ತು. ಆದರೆ ಈಗ ಪವನ್ ಕಲ್ಯಾಣ್ ಅನುಕೂಲಕ್ಕಾಗಿ ಸೆಟ್ನಲ್ಲಿಯೇ ಇಡೀ ಸಿನಿಮಾದ ಚಿತ್ರೀಕರಣ ಮಾಡಲು ಮುಂದಾಗಿದೆ ಚಿತ್ರತಂಡ. ಅದು ಮಾತ್ರವೇ ಕತೆಯಲ್ಲಿ ಸಹ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆಯಂತೆ. ಪವನ್ರ ಈಗಿನ ರಾಜಕಾರಣಿ ಇಮೇಜಿಗೆ ಹೊಂದುವಂತೆ ಕತೆ ಹಾಗೂ ಸಂಭಾಷಣೆಗಳನ್ನು ಬದಲಾವಣೆ ಮಾಡಲಾಗಿದೆಯಂತೆ.
ಸಿನಿಮಾದ ತಾಂತ್ರಿಕ ವರ್ಗದಲ್ಲಿ ಸಹ ಕೆಲ ಬದಲಾವಣೆಗಳು ಆಗಿವೆ. ಸಿನಿಮಾಟೊಗ್ರಾಫರ್ ರವಿ ಚಂದ್ರನ್ ಅವರಿಗಿದ್ದರು. ಆದರೆ ಈಗ ಆ ಸ್ಥಾನಕ್ಕೆ ಮನೋಜ್ ಪರಮಹಂಸ ಬಂದಿದ್ದಾರೆ. ಇದು ಮಾತ್ರವೇ ಅಲ್ಲದೆ ಇತರೆ ಕೆಲವು ವಿಭಾಗದಲ್ಲಿಯೂ ತಂತ್ರಜ್ಞರನ್ನು ಬದಲಾವಣೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಕೆಲವು ವಿದೇಶಿ ನಟರು ಸಹ ನಟಿಸುತ್ತಿದ್ದಾರೆ. ಜಪಾನಿನ ಸೂಪರ್ ಸ್ಟಾರ್ ಕಜುಕಿ ಕಿಟಾಮುರಾ ನಟಿಸಲಿದ್ದಾರೆ. ಅವರ ಜೊತೆಗೆ ಥಾಯ್ ನಟ ಥಾಯಾ ಪನ್ಸ್ರಿಗನ್ ಅವರು ಸಹ ನಟಿಸುತ್ತಿದ್ದಾರೆ. ಇದೇ ಸಿನಿಮಾ ಮೂಲಕ ಪವನ್ ಕಲ್ಯಾಣ್ ಅವರ ಪುತ್ರ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




