AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಾರ್ಲಿಂಗ್’ ಸಿನಿಮಾ ರೀ ರಿಲೀಸ್​​ನಲ್ಲಿ ಅಭಿಮಾನಿಗಳ ಹೊಡೆದಾಟ

Prabhas Fans: ಪ್ರಭಾಸ್ ಸಿನಿಮಾ ‘ಡಾರ್ಲಿಂಗ್’ ಮರು ಬಿಡುಗಡೆ ಆಗಿದೆ. ಈ ಸಿನಿಮಾದ ಬಳಿಕವೇ ಪ್ರಭಾಸ್​​ಗೆ ‘ಡಾರ್ಲಿಂಗ್’ ಎಂಬ ಉಪನಾಮ ಸಹ ಸೇರಿಕೊಂಡಿತು. ಇತ್ತೀಚೆಗಷ್ಟೆ ಈ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರಭಾಸ್ ಅಭಿಮಾನಿಗಳು ಪ್ರತಿಬಾರಿಯಂತೆ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಆದರೆ ಒಂದು ಚಿತ್ರಮಂದಿರದಲ್ಲಿ ‘ಡಾರ್ಲಿಂಗ್’ ಸಿನಿಮಾ ಪ್ರದರ್ಶನದ ವೇಳೆ ಜಗಳ ನಡೆದಿದ್ದು, ಪ್ರಭಾಸ್ ಅಭಿಮಾನಿಗಳ ಮೇಲೆ ಹಲ್ಲೆ ಸಹ ನಡೆದಿದೆ.

‘ಡಾರ್ಲಿಂಗ್’ ಸಿನಿಮಾ ರೀ ರಿಲೀಸ್​​ನಲ್ಲಿ ಅಭಿಮಾನಿಗಳ ಹೊಡೆದಾಟ
Darling Movie
ಮಂಜುನಾಥ ಸಿ.
|

Updated on: Apr 24, 2026 | 11:18 AM

Share

ಪ್ರಭಾಸ್ (Prabhas) ನಟನೆಯ ‘ಡಾರ್ಲಿಂಗ್’ ಸಿನಿಮಾ 2010 ರಲ್ಲಿ ಬಿಡುಗಡೆ ಆಗಿತ್ತು. ಕಾಜೊಲ್ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾ ಆಗ ಭಾರಿ ದೊಡ್ಡ ಹಿಟ್ ಆಗಿತ್ತು. ಕಾಮಿಡಿ, ರೊಮ್ಯಾನ್ಸ್, ಸೆಂಟಿಮೆಂಟ್, ಗೆಳೆತನ ಜೊತೆಗೆ ಆಕ್ಷನ್ ಸಹ ಸಿನಿಮಾನಲ್ಲಿತ್ತು. ಈ ಸಿನಿಮಾದ ಬಳಿಕವೇ ಪ್ರಭಾಸ್​​ಗೆ ‘ಡಾರ್ಲಿಂಗ್’ ಎಂಬ ಉಪನಾಮ ಸಹ ಸೇರಿಕೊಂಡಿತು. ಇತ್ತೀಚೆಗಷ್ಟೆ ಈ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರಭಾಸ್ ಅಭಿಮಾನಿಗಳು ಪ್ರತಿಬಾರಿಯಂತೆ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಆದರೆ ಒಂದು ಚಿತ್ರಮಂದಿರದಲ್ಲಿ ‘ಡಾರ್ಲಿಂಗ್’ ಸಿನಿಮಾ ಪ್ರದರ್ಶನದ ವೇಳೆ ಜಗಳ ನಡೆದಿದ್ದು, ಪ್ರಭಾಸ್ ಅಭಿಮಾನಿಗಳ ಮೇಲೆ ಹಲ್ಲೆ ಸಹ ನಡೆದಿದೆ.

ನಿನ್ನೆ (ಏಪ್ರಿಲ್ 23) ಹೈದರಾಬಾದ್​​ನ ಜನಪ್ರಿಯ ಸುದರ್ಶನ್ ಚಿತ್ರಮಂದಿರದಲ್ಲಿ ಪ್ರಭಾಸ್ ಅವರ ‘ಡಾರ್ಲಿಂಗ್’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಸಹಜವಾಗಿಯೇ ಪ್ರಭಾಸ್ ಅಭಿಮಾನಿಗಳು, ಕೂಗಾಡುತ್ತಾ, ಕಿರುಚಾಡುತ್ತಾ ಸಿನಿಮಾ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಚಿತ್ರಮಂದಿರದಲ್ಲಿ ಗಲಾಟೆ ನಡೆದಿದ್ದು ಕೆಲ ಪ್ರಭಾಸ್ ಅಭಿಮಾನಿಗಳ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪ್ರಭಾಸ್​ ಅವರ ಅಭಿಮಾನಿಗಳ ಮೇಲೆ ಚಿತ್ರಮಂದಿರದ ಸಿಬ್ಬಂದಿಯೇ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ‘ಡಾರ್ಲಿಂಗ್’ ಸಿನಿಮಾದ ಹಿಂದಿನ ಶೋಗಳಲ್ಲಿ ಪ್ರದರ್ಶನ ಮಾಡಲಾಗಿದ್ದ ಹಾಡುಗಳನ್ನು ಈ ಶೋನಲ್ಲಿ ಏಕೆ ಪ್ರಸಾರ ಮಾಡಿಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದು, ಇದರಿಂದಾಗಿ ಚಿತ್ರಮಂದಿರ ಸಿಬ್ಬಂದಿ ಮತ್ತು ಅಭಿಮಾನಿಗಳ ನಡುವೆ ವಾಗ್ವಾದ ನಡೆದು ಅದು ತಾರಕಕ್ಕೇರಿ, ಪ್ರಭಾಸ್ ಅಭಿಮಾನಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಸ್ಪಿರಿಟ್’ ಕೆಲಸ ಬಿಟ್ಟು ‘ಧುರಂಧರ್ 2’ ನೋಡಲು ಬಂದ ಪ್ರಭಾಸ್, ಸಂದೀಪ್ ರೆಡ್ಡಿ ವಂಗಾ

ಇನ್ನು ಚಿತ್ರಮಂದಿರ ಸಿಬ್ಬಂದಿ ಹೇಳಿರುವಂತೆ ಕೆಲವು ಅಭಿಮಾನಿಗಳು ಕುಡಿದುಕೊಂಡು ಬಂದು ಚಿತ್ರಮಂದಿರದಲ್ಲಿ ಗಲಾಟೆ ಮಾಡುತ್ತಾ, ಇತರೆ ಪ್ರೇಕ್ಷಕರಿಗೆ ತೊಂದರೆ ನೀಡುತ್ತಿದ್ದರು. ಮಹಿಳೆಯರೊಟ್ಟಿಗೆ ಅನುಚಿತವಾಗಿ ವರ್ತಿಸಿದರು. ಅವರನ್ನು ಹೊರಹೋಗುವಂತೆ ಹೇಳಿದಾಗ ಜಗಳ ನಡೆದಿದೆ, ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂದಿದ್ದಾರೆ. ಒಟ್ಟಾರೆಯಾಗಿ ಅಭಿಮಾನಿಯ ಮೇಲೆ ನಡೆದ ಈ ಹಲ್ಲೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರಭಾಸ್ ನಟನೆಯ ‘ಡಾರ್ಲಿಂಗ್’ ಸಿನಿಮಾ 2010ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾವನ್ನು ಎ ಕರುಣಾಕರನ್ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಜಿವಿ ಪ್ರಕಾಶ್ ಸಂಗೀತ ನೀಡಿದ್ದರು. ಸಿನಿಮಾನಲ್ಲಿ ಪ್ರಭಾಸ್, ಕಾಜೊಲ್ ಜೊತೆಗೆ ಶ್ರದ್ಧಾ ದಾಸ್, ಪ್ರಭು ಇನ್ನೂ ಹಲವರು ನಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us