AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗಳ ಆಡಿ ಖ್ಯಾತ ನಿರ್ದೇಶಕನ ಸಿನಿಮಾದಿಂದ ಹೊರ ನಡೆದ ಪ್ರಕಾಶ್ ರಾಜ್?

ನಟ ಪ್ರಕಾಶ್ ರಾಜ್ ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದಿಂದ ಹೊರಬಂದಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆ ಕಥೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿದ್ದು, ಪ್ರಕಾಶ್ ರಾಜ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪ್ರಕಾಶ್ ರಾಜ್ ಅವರ ಈ ನಡೆ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.

ಜಗಳ ಆಡಿ ಖ್ಯಾತ ನಿರ್ದೇಶಕನ ಸಿನಿಮಾದಿಂದ ಹೊರ ನಡೆದ ಪ್ರಕಾಶ್ ರಾಜ್?
ಪ್ರಕಾಶ್ ರಾಜ್
ರಾಜೇಶ್ ದುಗ್ಗುಮನೆ
|

Updated on: Feb 09, 2026 | 11:10 AM

Share

ಕನ್ನಡದ ಪ್ರಕಾಶ್ ರಾಜ್ (Prakash Raj) ಬಹುಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ. ಅವರು ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರದ ಮೂಲಕವೇ ಮಿಂಚಿದ್ದಾರೆ. ಈಗ ಪ್ರಕಾಶ್ ರಾಜ್ ಅವರು ಒಂದು ದೊಡ್ಡ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ವಿಷಯದ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಸಂದೀಪ್ ರೆಡ್ಡಿ ವಂಗ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಬಗ್ಗೆ ತಂಡ ಕೂಡ ಮಾಹಿತಿ ನೀಡಿತ್ತು. ಆದರೆ, ಅಲ್ಲಾಗಿದ್ದೇ ಬೇರೆ ಎನ್ನುವ ಮಾತು ಕೇಳಿ ಬಂದಿದೆ. ಪ್ರಕಾಶ್ ರಾಜ್ ಹಾಗೂ ಸಂದೀಪ್ ರೆಡ್ಡಿ ವಂಗ ಮಧ್ಯೆ ದೊಡ್ಡ ಜಗಳವೇ ಏರ್ಪಟ್ಟಿದೆಯಂತೆ. ಈ ಕಾರಣದಿಂದ ಪ್ರಕಾಶ್ ರಾಜ್ ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ ಎಂಬ ಗುಲ್ಲು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ.

ನಿರ್ದೇಶಕರು ಹಾಗೂ ಪ್ರಕಾಶ್ ರಾಜ್ ಮಧ್ಯೆ ಕಥೆಯ ವಿಷಯವಾಗಿ ಕಿರಿಕ್ ಆಗಿದೆ. ಈ ಕಿರಿಕ್​ನ ಬಗ್ಗೆ ಯಾರೂ ಓಪನ್ ಆಗಿ ಮಾತನಾಡಿಲ್ಲ. ಆದರೆ, ಚಿತ್ರರಂಗದಲ್ಲಿ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಸೈದ್ಧಾಂತಿಕವಾಗಿ ಪ್ರಕಾಶ್ ರಾಜ್ ಅವರನ್ನು ಕೆಲವರು ಒಪ್ಪಿಕೊಳ್ಳದೆ ಇರಬಹುದು. ಆದರೆ, ನಟನಾಗಿ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅವರು ‘ಸ್ಪಿರಿಟ್’ ಚಿತ್ರದ ಹೊರ ನಡೆದಿದ್ದು ಅಭಿಮಾನಿಗಳಿಗೆ ಬಹಳ ಬೇಸರ ಮೂಡಿಸಿದೆ.

ಪ್ರಕಾಶ್ ರಾಜ್ ಹೆಸರು ಇತ್ತೀಚೆಗೆ ಚರ್ಚೆ ಆಗಿತ್ತು. ಇದಕ್ಕೆ ಕಾರಣ ಜಗ್ಗೇಶ್ ಮಾಡಿದ ಟ್ವೀಟ್. ಜಗ್ಗೇಶ್ ಅವರು ಇತ್ತೀಚೆಗೆ ಸಂಘದ ಶಾಖೆಗೆ ಭೇಟಿ ನೀಡಿ, ಅದರ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಿಕೊಳ್ಳಲು ಕರೆ ನೀಡಿದ್ದರು.

ಇದನ್ನೂ ಓದಿ: ‘ಸಂಘಕ್ಕೆ ಭೇಟಿ ಕೋಡಿ’; ಪ್ರಕಾಶ್ ರಾಜ್​​​ಗೆ ಜಗ್ಗೇಶ್ ಆಹ್ವಾನ

ಪ್ರಕಾಶ್ ರಾಜ್ ಅವರು ಟಾಲಿವುಡ್, ಕಾಲಿವುಡ್, ಸ್ಯಾಂಡಲ್​​ವುಡ್​​ನ ಹಲವು ಸೂಪರ್ ಸ್ಟಾರ್​ಗಳ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದು, ಹೊಸಬರಿಗೆ ಬೆಂಬಲ ಕೊಡ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್
ರಾಜಕೀಯ ಸ್ವರೂಪ ಪಡೆದ ಸತೀಶ್​​ ಜಾರಕಿಹೊಳಿ ಮನೆ ಮೇಲಿನ ಇಡಿ ದಾಳಿ
ರಾಜಕೀಯ ಸ್ವರೂಪ ಪಡೆದ ಸತೀಶ್​​ ಜಾರಕಿಹೊಳಿ ಮನೆ ಮೇಲಿನ ಇಡಿ ದಾಳಿ
ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಎಂಸಿಡಿ ಸಮರ
ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಎಂಸಿಡಿ ಸಮರ
ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ರುವಾಂಡಾ ಅಧಿಕಾರಿಗಳು
ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ರುವಾಂಡಾ ಅಧಿಕಾರಿಗಳು
8 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿರುವ ಬೀದರ್ ಕಲಾವಿದ!
8 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿರುವ ಬೀದರ್ ಕಲಾವಿದ!
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ