ಪ್ರಶಾಂತ್ ನೀಲ್ ಚಿತ್ರಕ್ಕಾಗಿ ನಿರ್ಮಾಣ ಆಗ್ತಿದೆ ದೊಡ್ಡ ಸೆಟ್; ಈ ಹಣದಲ್ಲೇ ಒಂದು ಸಿನಿಮಾ ಮಾಡಬಹುದು
Prashanth Neel: ನಿರ್ದೇಶಕ ಪ್ರಶಾಂತ್ ನೀಲ್ ಸ್ಟಾರ್ ನಟ ಜೂ ಎನ್ಟಿಆರ್ ಅವರಿಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಈ ಸಿನಿಮಾಕ್ಕಾಗಿ ಭಾರಿ ದೊಡ್ಡ ಸೆಟ್ ಒಂದನ್ನು ಪ್ರಶಾಂತ್ ನೀಲ್ ನಿರ್ಮಾಣ ಮಾಡಿಸುತ್ತಿದ್ದಾರೆ. ಏನಿದರ ವಿಶೇಷತೆ?

ಪ್ರಶಾಂತ್ ನೀಲ್ (Prashanth Neel) ಅವರ ಸಿನಿಮಾಗಳು ಯಾವಾಗಲೂ ದೊಡ್ಡ ಮಟ್ಟದಲ್ಲಿ ಇರುತ್ತವೆ. ಅವರು ಕಪ್ಪು ಥೀಮ್ನಲ್ಲೇ ಸಿನಿಮಾ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಜೂನಿಯರ್ ಎನ್ಟಿಆರ್ ಜೊತೆ ಪ್ರಶಾಂತ್ ನೀಲ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕೂಡ ಕಾದಿದ್ದಾರೆ ಎನ್ನಬಹುದು. ಈ ಚಿತ್ರಕ್ಕಾಗಿ ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಸೆಟ್ ನಿರ್ಮಾಣ ಆಗುತ್ತಿದೆ. ಈ ಬಜೆಟ್ನಲ್ಲಿ ‘ಕಾಂತಾರ’ ರೀತಿಯ ಸಿನಿಮಾ ನಿರ್ಮಾಣ ಮಾಡಬಹುದು ಎಂದು ಅನೇಕರು ಹೇಳಿದ್ದಾರೆ. ‘ಕಾಂತಾರ’ ಚಿತ್ರದ ಬಜೆಟ್ ಕೂಡ 15 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇತ್ತು.
‘ವಾರ್ 2’ ಸಿನಿಮಾ ಪ್ರಮೋಷನ್ ಆರಂಭಿಸೋ ಮೊದಲೇ ಜೂನಿಯರ್ ಎನ್ಟಿಆರ್ ಅವರು ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಕೆಲಸ ಆರಂಭಿಸಿದರು. ಬಿಡುವು ಪಡೆದು ‘ವಾರ್ 2’ ಸಿನಿಮಾ ಪ್ರಮೋಟ್ ಮಾಡಿದರು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಇದ್ದರು. ಆದರೆ, ಈಗ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೀಗಾಗಿ, ಜೂನಿಯರ್ ಎನ್ಟಿಆರ್ ಮುಂದಿನ ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.
ಮೂಲಗಳ ಪ್ರಕಾರ ಈ ಚಿತ್ರದ ಶೂಟ್ ಉತ್ತರ ಕನ್ನಡದ ಕುಮಟಾದಲ್ಲಿ ನಡೆದಿದೆ. ಇಲ್ಲಿ ಫ್ಯಾಕ್ಟರಿ ಸೆಟ್ ನಿರ್ಮಾಣ ಆಗಿತ್ತು. 10 ದಿನಕ್ಕೂ ಅಧಿಕ ಕಾಲ ಇಲ್ಲಿ ಶೂಟ್ ಮಾಡಲಾಗಿದೆ. ಈ ಭಾಗದಲ್ಲಿ ಔಟ್ಡೋರ್ ಶೂಟ್ ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಈಗ ಜೂನಿಯರ್ ಎನ್ಟಿಆರ್ ಅವರು ಹೈದರಾಬಾದ್ನಲ್ಲಿ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ಇದನ್ನೂ ಓದಿ:ರಾಜ್ ಬಿ. ಶೆಟ್ಟಿ ಸಿನಿಮಾ ಮೇಕಿಂಗ್ನ ಮೊದಲೇ ಹೊಗಳಿದ್ದ ಪ್ರಶಾಂತ್ ನೀಲ್
ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 15 ಕೋಟಿ ರೂಪಾಯಿ ಬೆಲೆಯಲ್ಲಿ ಮನೆಯ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಇದು ಸಿನಿಮಾದಲ್ಲಿ ಅವರ ಮನೆ ಆಗಿರಲಿದೆ. ಈ ಬೆಲೆಯಲ್ಲಿ ನಿಜಕ್ಕೂ ಒಂದು ಐಷಾರಾಮಿ ಮನೆ ಬರುತ್ತದೆ ಎಂಬುದು ಅನೇಕರ ಅಭಿಪ್ರಾಯ. ಸದ್ಯ ಸೆಟ್ ನಿರ್ಮಾಣದ ಕೆಲಸ ಸಾಗುತ್ತಿದೆ. ಸೆಪ್ಟೆಂಬರ್ ವೇಳೆಗೆ ಶೂಟ್ ಆರಂಭ ಆಗಲಿದೆ.
ಜೂನಿಯರ್ ಎನ್ಟಿಆರ್ ಅವರು ಸದ್ಯ ಬ್ರೇಕ್ನಲ್ಲಿ ಇದ್ದಾರೆ. ಅವರು ಖುಷಿಯಿಂದ ವಿನಾಯಕ ಚತುರ್ಥಿ ಹಬ್ಬ ಆಚರಿಸಲಿದ್ದಾರೆ. ಆ ಬಳಿಕ ಅವರು ಶೂಟ್ನಲ್ಲಿ ಬ್ಯುಸಿ ಆಗಲಿದ್ದಾರೆ. ‘ವಾರ್ 2’ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕ ಬಗ್ಗೆ ಅವರಿಗೆ ಬೇಸರ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



