‘ಜೇಮ್ಸ್​’ ಕೌಂಟ್​ಡೌನ್ 5 ದಿನ: ​ಮಾರ್ಚ್​​ 13ಕ್ಕೆ ‘ಜೇಮ್ಸ್’ ಪ್ರೀ-ರಿಲೀಸ್​ ಇವೆಂಟ್​; ಯಾರೆಲ್ಲ ಬರ್ತಾರೆ? ಫ್ಯಾನ್ಸ್​ಗೆ ಎಂಟ್ರಿ ಹೇಗೆ?

ಪ್ಯಾಲೇಸ್​ ಗ್ರೌಂಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಮುಖ್ಯ ಅತಿಥಿಯಾಗಿ ಪುನೀತ್​ ಸಹೋದರ ಶಿವರಾಜ್​ಕುಮಾರ್ ಆಗಮಿಸುತ್ತಿದ್ದಾರೆ. ಇವರಲ್ಲದೆ, ಚಿತ್ರರಂಗದ ಅನೇಕ ಪ್ರಮುಖರು ಈ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ.

‘ಜೇಮ್ಸ್​’ ಕೌಂಟ್​ಡೌನ್ 5 ದಿನ: ​ಮಾರ್ಚ್​​ 13ಕ್ಕೆ ‘ಜೇಮ್ಸ್’ ಪ್ರೀ-ರಿಲೀಸ್​ ಇವೆಂಟ್​; ಯಾರೆಲ್ಲ ಬರ್ತಾರೆ? ಫ್ಯಾನ್ಸ್​ಗೆ ಎಂಟ್ರಿ ಹೇಗೆ?
ಪುನೀತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 12, 2022 | 7:35 AM

ಪುನೀತ್​ ರಾಜ್​ಕುಮಾರ್ (Puneeth Rajkumar)ನಟನೆಯ ‘ಜೇಮ್ಸ್​’ ಸಿನಿಮಾ (James Movie) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಹೀರೋ ಆಗಿ ಪುನೀತ್​ ರಾಜ್​ಕುಮಾರ್​ ನಟಿಸಿದ ಕೊನೆಯ ಸಿನಿಮಾ ಇದು ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್​ ಆಗಿದ್ದಾರೆ. ಪುನೀತ್​ ರಾಜ್​ಕುಮಾರ್ ಬರ್ತ್​ಡೇ ಪ್ರಯುಕ್ತ ಮಾರ್ಚ್​ 17ರಂದು ಸಿನಿಮಾ ರಿಲೀಸ್​ ಆಗುತ್ತಿದೆ. ರಾಜ್ಯದ ಶೇ. 80 ಚಿತ್ರಮಂದಿರಗಳಲ್ಲಿ ‘ಜೆಮ್ಸ್​’ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಹೀಗಾಗಿ, ಕಲೆಕ್ಷನ್​ ವಿಚಾರದಲ್ಲಿ ಈ ಸಿನಿಮಾ ಬಹುದೊಡ್ಡ ದಾಖಲೆ ಬರೆಯುವ ಸೂಚನೆ ಸಿಕ್ಕಿದೆ. ಇದಕ್ಕೂ ಮೊದಲು ಚಿತ್ರತಂಡ ಪ್ರೀ-ರಿಲೀಸ್​ ಇವೆಂಟ್​ (James Pre-Release Event)ನಡೆಸೋಕೆ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್​ 13 ಅಂದರೆ ಭಾನುವಾರ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.

ಪ್ಯಾಲೇಸ್​ ಗ್ರೌಂಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಮುಖ್ಯ ಅತಿಥಿಯಾಗಿ ಪುನೀತ್​ ಸಹೋದರ ಶಿವರಾಜ್​ಕುಮಾರ್ ಆಗಮಿಸುತ್ತಿದ್ದಾರೆ. ಇವರಲ್ಲದೆ, ಚಿತ್ರರಂಗದ ಅನೇಕ ಪ್ರಮುಖರು ಈ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ. ಶ್ರೀಮುರಳಿ, ವಿನಯ್​ ರಾಜ್​ಕುಮಾರ್ ಮೊದಲಾದವರು ಈ ಅದ್ದೂರಿ ಪ್ರೀ-ರಿಲೀಸ್​ ಇವೆಂಟ್​ಗೆ ಸಾಕ್ಷಿಯಾಗಲಿದ್ದಾರೆ.

ಅಭಿಮಾನಿಗಳು ಈ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಈ ಇವೆಂಟ್​ ಓಪನ್​ ಗ್ರೌಂಡ್​ನಲ್ಲಿ ನಡೆಯುತ್ತಿದೆ. ಹೀಗಾಗಿ ಅಭಿಮಾನಿಗಳಿಗೆ ಯಾವುದೇ ಪಾಸ್​ ಅಗತ್ಯವಿರುವುದಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ಈ ಮೊದಲು ‘ಜೇಮ್ಸ್​’ ಪ್ರೀ-ರಿಲೀಸ್​ ಇವೆಂಟ್​ ಬಗ್ಗೆ ವದಂತಿ ಒಂದು ಹರಿದಾಡಿತ್ತು. ಚಿತ್ರತಂಡ ಮಾರ್ಚ್​ 6ರಂದು ಹೊಸಪೇಟೆಯಲ್ಲಿ ಭರ್ಜರಿ ಪ್ರೀ-ರಿಲೀಸ್​ ಇವೆಂಟ್​ ನಡೆಸಲು ನಿರ್ಧರಿಸಿದೆ ಎನ್ನಲಾಗಿತ್ತು. ಈ ಕಾರ್ಯಕ್ರಮಕ್ಕೆ ಜ್ಯೂ.ಎನ್​ಟಿಆರ್ ಹಾಗೂ ಚಿರಂಜೀವಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಈ ಬಗ್ಗೆ ಚಿತ್ರತಂಡವೇ ಸ್ಪಷ್ಟನೆ ನೀಡಿತ್ತು. ಈಗ ಬೆಂಗಳೂರಿನಲ್ಲೇ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದೆ.

ಬುಕಿಂಗ್​ ಶುರು:

ಈ ಮೊದಲು ‘ಜೇಮ್ಸ್​’ ಸಿನಿಮಾದ ಟೀಸರ್​ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಟೀಸರ್​ನಲ್ಲಿ ಪುನೀತ್​ ಸಖತ್​ ಮಾಸ್​ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ‘ಟ್ರೇಡ್​ಮಾರ್ಕ್​..’ ಸಾಂಗ್​ ರಿಲೀಸ್​ ಮಾಡಲಾಯಿತು. ಇದನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಈ ಹಾಡು ಯೂಟ್ಯೂಬ್​ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.  ಈ ಎಲ್ಲಾ ಕಾರಣಕ್ಕೆ ಪುನೀತ್​ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ವಿಶ್ವಾದ್ಯಂತ 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆನ್​ಲೈನ್​ ಬುಕಿಂಗ್​ ಓಪನ್​ ಆಗಿದೆ.

ಇದನ್ನೂ ಓದಿ: Salaam Soldier: ‘ಜೇಮ್ಸ್​’ ಹೊಸ ಹಾಡು ‘ಸಲಾಂ ಸೋಲ್ಜರ್​’ ರಿಲೀಸ್​; ಸಲಾಂ​ ಪುನೀತ್​ ಎಂದ ಅಪ್ಪು ಫ್ಯಾನ್ಸ್​​

ಸೈನಿಕನ ಗೆಟಪ್​ನಲ್ಲಿ ಆಹಾ ಎಷ್ಟು ಚಂದ ಪುನೀತ್​; ಇಲ್ಲಿವೆ ‘ಜೇಮ್ಸ್​’ ಸಿನಿಮಾದ ಫೋಟೋಗಳು

Published On - 7:34 am, Sat, 12 March 22