ಸತತ ಸೋಲಿನ ಬಳಿಕವೂ ಹಳೆಯ ತಂತ್ರವನ್ನೇ ಉಪಯೋಗಿಸಿದ ಪುರಿ ಜಗನ್ನಾಥ್
ಪುರಿ ಜಗನ್ನಾಥ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಅವರ ಅದೃಷ್ಟ ಕೈಕೊಟ್ಟಿದೆ. ಈ ಕಾರಣಕ್ಕೆ ಅವರು ಸಾಕಷ್ಟು ಚಿಂತೆಗೆ ಒಳಗಾಗಿದ್ದಾರೆ. ಹೀಗಾಗಿ, ಅವರು ‘ಡಬಲ್ ಇಸ್ಮಾರ್ಟ್’ ಸಿನಿಮಾ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ ಎಂದು ವರದಿ ಆಗಿದೆ.
ನಿರ್ದೇಶಕ ಪುರಿ ಜಗನ್ನಾಥ್ (Puri Jagannadh) ಅವರು ದೊಡ್ಡ ಮಟ್ಟದ ಹಿಟ್ ಪಡೆದು ಬಹಳ ಸಮಯ ಆಗಿದೆ. ಅವರು ದೊಡ್ಡ ಗೆಲುವು ಕಾಣಲಿ ಎಂದು ಫ್ಯಾನ್ಸ್ ಕೂಡ ಬಯಸುತ್ತಿದ್ದಾರೆ. ‘ಲೈಗರ್’ (Liger Movie) ಸಿನಿಮಾದ ಸೋಲಿನ ಬಳಿಕ ಅವರು ಸೈಲೆಂಟ್ ಆಗಿದ್ದರು. ಈಗ ಅವರು ಮತ್ತೆ ದೊಡ್ಡ ಮಟ್ಟದ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ರಾಮ್ ಪೋತಿನೇನಿ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಡಬಲ್ ಇಸ್ಮಾರ್ಟ್’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಶೂಟಿಂಗ್ ಸದ್ಯ ಥೈಲ್ಯಾಂಡ್ನಲ್ಲಿ ನಡೆಯುತ್ತಿದೆ. ಆದರೆ, ಅವರು ಮತ್ತದೇ ಹಳೆಯ ತಂತ್ರ ಉಪಯೋಗಿಸುತ್ತಿದ್ದಾರೆ.
‘ಲೈಗರ್’ ಸೋಲಿನ ಬಳಿಕ ಪುರಿ ಜಗನ್ನಾಥ್ ಅವರು ಚಿಂತೆಗೆ ಒಳಗಾಗಿದ್ದರು. ಯಾವ ಹೀರೋಗಳೂ ಅವರ ಜೊತೆ ಸಿನಿಮಾ ಮಾಡೋಕೆ ಮುಂದೆ ಬಂದಿಲ್ಲ ಎಂದು ಸುದ್ದಿ ಆಗಿತ್ತು. ಈ ಕಾರಣಕ್ಕೆ ಅವರು ರಾಮ್ ಪೋತಿನೇನಿ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಇವರ ಕಾಂಬಿನೇಷನ್ನಲ್ಲಿ ಮೂಡಿಬಂದ ‘ಇಸ್ಮಾರ್ಟ್ ಶಂಕರ್’ ಸೂಪರ್ ಹಿಟ್ ಆಯಿತು. ಈ ಕಾರಣಕ್ಕೆ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಥೈಲ್ಯಾಂಡ್ನಲ್ಲಿ ನಡೆಯುತ್ತಿದೆ.
ಪುರಿ ಜಗನ್ನಾಥ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಅವರ ಅದೃಷ್ಟ ಕೈಕೊಟ್ಟಿದೆ. ಈ ಕಾರಣಕ್ಕೆ ಅವರು ಸಾಕಷ್ಟು ಚಿಂತೆಗೆ ಒಳಗಾಗಿದ್ದಾರೆ. ಹೀಗಾಗಿ, ಅವರು ‘ಡಬಲ್ ಇಸ್ಮಾರ್ಟ್’ ಸಿನಿಮಾ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ‘ಡಬಲ್ ಇಸ್ಮಾರ್ಟ್’ ಸಿನಿಮಾ ಸಾಕಷ್ಟು ಅದ್ದೂರಿಯಾಗಿ ಮೂಡಿಬರುತ್ತಿದೆ. ಹೀಗಾಗಿ, ದೇಶ-ವಿದೇಶದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸದ್ಯ ಥಾಯ್ಲೆಂಡ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ‘ಅದ್ದೂರಿಯಾಗಿ ಮಾಡಿದ ಮಾತ್ರಕ್ಕೆ ಸಿನಿಮಾ ಗೆಲ್ಲಲ್ಲ. ಹೊಸತನ ಬೇಕು’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
View this post on Instagram
ಇದನ್ನೂ ಓದಿ: Sanjay Dutt: ಸಂಜಯ್ ದತ್ ಈಗ ಬಿಗ್ ಬುಲ್; ‘ಡಬಲ್ ಇಸ್ಮಾರ್ಟ್’ಗೆ ಖಡಕ್ ವಿಲನ್
ಮುಂದಿನ ವರ್ಷ ಮಾರ್ಚ್ 8ರಂದು ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಶೆಡ್ಯೂಲ್ ಮುಗಿಸಿರುವ ಪುರಿ ಸದ್ಯ ಎರಡನೇ ಶೆಡ್ಯೂಲ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನಷ್ಟೇ ಫೈನಲ್ ಆಗಬೇಕಿದೆ. ‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ನಭಾ ನಟೇಶ್-ನಿಧಿ ಅಗರ್ವಾಲ್ ಇದ್ದರು. ಈ ಚಿತ್ರದಲ್ಲೂ ಇಬ್ಬರು ನಾಯಕಿಯರು ಇರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:15 am, Tue, 15 August 23