ದುನಿಯಾ ವಿಜಯ್ ನಟನೆಯನ್ನು ಮೆಚ್ಚಿ ಕೊಂಡಾಡಿದ ತೆಲುಗಿನ ಸ್ಟಾರ್ ನಿರ್ದೇಶಕ
Duniya Vijay: ದುನಿಯಾ ವಿಜಯ್ ಕನ್ನಡದ ಜನಪ್ರಿಯ ನಾಯಕ ನಟರಲ್ಲಿ ಒಬ್ಬರು. ಹಲವು ಸ್ಪುರದ್ರೂತಿ ನಾಯಕ ನಟರ ನಡುವೆ ತಮ್ಮ ನಟನೆ, ಆಕ್ಷನ್ ಮಾಡುವ ಸಾಮರ್ಥ್ಯದಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡು ಈಗಲೂ ಚಾಲ್ತಿಯಲ್ಲಿರುವ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ ದುನಿಯಾ ವಿಜಯ್. ಇದೀಗ ನೆರೆಯ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ದುನಿಯಾ ವಿಜಯ್ ಅವರ ನಟನೆಯನ್ನು ಕೊಂಡಾಡಿದ್ದಾರೆ.

ದುನಿಯಾ ವಿಜಯ್ (Duniya Vijay) ಕನ್ನಡದ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕ. ತೀರ ಸಣ್ಣ ಪಾತ್ರಗಳಲ್ಲಿ ನಟಿಸಲು ಆರಂಭಿಸಿ, ವಿಲನ್ ಆಗಿ ಬಳಿಕ ನಾಯಕನಾಗಿ ಮಿಂಚಿದವರು ದುನಿಯಾ ವಿಜಯ್. ಹಲವು ಸ್ಪುರದ್ರೂತಿ ನಾಯಕ ನಟರ ನಡುವೆ ತಮ್ಮ ನಟನೆ, ಆಕ್ಷನ್ ಮಾಡುವ ಸಾಮರ್ಥ್ಯದಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡು ಈಗಲೂ ಚಾಲ್ತಿಯಲ್ಲಿರುವ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಕನ್ನಡ ಮಾತ್ರವಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ ದುನಿಯಾ ವಿಜಯ್. ಇದೀಗ ನೆರೆಯ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ದುನಿಯಾ ವಿಜಯ್ ಅವರ ನಟನೆಯನ್ನು ಕೊಂಡಾಡಿದ್ದಾರೆ.
ರಾಜಮೌಳಿಗಿಂತಲೂ ಮೊದಲು ತೆಲುಗಿನ ಸೂಪರ್ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದವರು ಪುರಿ ಜಗನ್ನಾಥ್. ಈಗಿನ ಹಲವು ಹಳೆಯ, ಹೊಸ ಹೀರೋಗಳಿಗೆ ಒಂದರ ಹಿಂದೊಂದರಂತೆ ಬ್ಲಾಕ್ ಬಸ್ಟರ್ ಹಿಟ್ ಮಾತ್ರವಲ್ಲ, ಕಲ್ಟ್ ಸಿನಿಮಾಗಳನ್ನು ನೀಡಿದವರು ಪುರಿ ಜಗನ್ನಾಥ್. ಪುನೀತ್ ನಟನೆಯ ಮೊದಲ ಸಿನಿಮಾ ‘ಅಪ್ಪು’ ನಿರ್ದೇಶನ ಮಾಡಿದ್ದೂ ಸಹ ಪುರಿ ಅವರೇ, ಆದರೆ ಅವರ ಇತ್ತೀಚೆಗಿನ ಕೆಲ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋತಿವೆ. ಇದೇ ಕಾರಣಕ್ಕೆ ಅವರ ಹವಾ ತುಸು ಕಡಿಮೆ ಆಗಿದೆ, ಆದರೆ ಪ್ರತಿಭೆ ಕಡಿಮೆ ಆಗಿಲ್ಲ.
ಇದೀಗ ಪುರಿ ಜಗನ್ನಾಥ್ ಅವರು ‘ಸ್ಲಂ ಡಾಗ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ವಿಜಯ್ ಸೇತುಪತಿ ನಾಯಕ. ಹೆಸರೇ ಸೂಚಿಸುತ್ತಿರುವಂತೆ ಸ್ಲಂನಲ್ಲಿ ನಡೆಯುವ ಕತೆಯಿದು. ಸಿನಿಮಾನಲ್ಲಿ ದುನಿಯಾ ವಿಜಯ್ ಅವರು ಮುಖ್ಯವಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಸಿನಿಮಾವನ್ನು ಪುರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಅವರ ಪುರಿ ಕನೆಕ್ಟ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಲಾಗುತ್ತಿದೆ.
View this post on Instagram
ನಿನ್ನೆ (ಜನವರಿ 20) ದುನಿಯಾ ವಿಜಯ್ ಅವರ ಹುಟ್ಟುಹಬ್ಬವಿದ್ದು, ‘ಸ್ಲಂ ಡಾಗ್’ ಸಿನಿಮಾ ತಂಡದ ಮೂಲಕ ವಿಜಯ್ ಅವರಿಗೆ ಶುಭ ಕೋರಲಾಗಿದೆ. ಪುರಿ ಜಗನ್ನಾಥ್ ಅವರು ತಮ್ಮ ಪುರಿ ಕನೆಕ್ಟ್ಸ್ ಮೂಲಕ ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ‘ದುನಿಯಾ ವಿಜಯ್ ಅವರು ಪ್ರತಿಯೊಂದು ಪಾತ್ರಕ್ಕೂ ಪ್ರಾಮಾಣಿಕತೆ ಮತ್ತು ಆತ್ಮವನ್ನು ತರುವ ಅದ್ಭುತ ಕಲಾವಿದ, ‘ಸ್ಲಂ ಡಾಗ್: 33 ಟೆಂಪಲ್ ರೋಡ್’ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ನಿರ್ವಹಿಸಿರುವ ಪಾತ್ರ ನೈಜವಾಗಿಯೂ, ಕಚ್ಚಾ ಆಗಿಯೂ ಹಾಗೂ ರೋಮಾಂಚನಕಾರಿಯಾಗಿಯೂ ಇರಲಿದೆ’ ಎಂದಿದ್ದಾರೆ.
‘ಸ್ಲಂ ಡಾಗ್’ ಸಿನಿಮಾ ಶೂಟಿಂಗ್ ವೇಳೆಯ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದ್ದು, ದುನಿಯಾ ವಿಜಯ್ ಸಖತ್ ಭಿನ್ನವಾದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ತಲೆ ಮೇಲೆ ಟೋಪಿ, ಕೊರಳಲ್ಲಿ ಆಫ್ರಿಕಾ ಖಂಡದ ಡಾಲರ್, ಮೀಸೆ-ಗಡ್ಡ ಇಲ್ಲದೆ ಒಂದು ರೀತಿ ಭಿನ್ನವಾಗಿ ಕಾಣುತ್ತಿದ್ದಾರೆ ವಿಜಿ. ‘ಸ್ಲಂ ಡಾಗ್’ ಸಿನಿಮಾನಲ್ಲಿ ವಿಜಯ್ ಸೇತುಪತಿ ನಾಯಕರಾಗಿದ್ದು, ಸಿನಿಮಾ ತೆಲುಗಿನಲ್ಲಿ ಮಾತ್ರವೇ ಅಲ್ಲದೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




