‘ಪುಷ್ಪ 2’ ಚಿತ್ರದ ಸೆಟ್ ವಿಡಿಯೋ ಲೀಕ್; ಟ್ರಕ್​ಗಳನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ

| Updated By: ಮದನ್​ ಕುಮಾರ್​

Updated on: Sep 07, 2023 | 5:30 PM

ನೂರಾರು ಸಂಖ್ಯೆಯಲ್ಲಿ ಟ್ರಕ್​ಗಳು ನಿಂತಿರು ವಿಡಿಯೋ ವೈರಲ್ ಆಗಿದೆ. ಇದು ‘ಪುಷ್ಪ 2’ ಚಿತ್ರದ ಸೆಟ್​ನ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಮೂಲಕ ಸಿನಿಮಾ ಯಾವ ಮಟ್ಟದಲ್ಲಿ ಸಿದ್ಧವಾಗುತ್ತಿದೆ ಎನ್ನುವುದಕ್ಕೆ ಒಂದೊಳ್ಳೆಯ ಉದಾಹರಣೆ ಸಿಕ್ಕಿದೆ. ಇನ್ನು, ಸಿನಿಮಾ ಸೆಟ್​ನ ವಿಡಿಯೋ ಲೀಕ್ ಆದ ವಿಚಾರ ಚಿತ್ರತಂಡದ ಆತಂಕಕ್ಕೆ ಕಾರಣ ಆಗಿದೆ.

‘ಪುಷ್ಪ 2’ ಚಿತ್ರದ ಸೆಟ್ ವಿಡಿಯೋ ಲೀಕ್; ಟ್ರಕ್​ಗಳನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ
ಅಲ್ಲು ಅರ್ಜುನ್​
Follow us on

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ ಸಿನಿಮಾ (Pushpa 2 Movie) ಬಗ್ಗೆ ಇರುವ ನಿರೀಕ್ಷೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಮೊದಲ ಭಾಗ ಹಿಟ್ ಆಗಿರುವುದರಿಂದ ಎರಡನೇ ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸದ್ಯ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ಚಿತ್ರದ ಸೆಟ್​ನ ವಿಡಿಯೋ ಒಂದು ಲೀಕ್ ಆಗಿದೆ. ಸಿನಿಮಾ ಸೆಟ್​ನಲ್ಲಿ ನಿಂತ ಟ್ರಕ್​ಗಳ ಸಂಖ್ಯೆ ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಕಣ್ಣು ಹಾಯಿಸಿದಷ್ಟು ಟ್ರಕ್​ಗಳೇ ಕಾಣಿಸುತ್ತಿವೆ ಅನ್ನೋದು ವಿಶೇಷ. ‘ಪುಷ್ಪ’ ಚಿತ್ರ (Pushpa Movie) ಹಿಟ್ ಆಗಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಸಾಮಾನ್ಯ ವ್ಯಕ್ತಿ ಆಗಿರುವ ಪುಷ್ಪರಾಜ್ ರಕ್ತ ಚಂದನದ ದಂಧೆಯಲ್ಲಿ ಸೇರಿಕೊಳ್ಳುತ್ತಾನೆ. ಆ ಬಳಿಕ ಆತ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ. ಎರಡನೇ ಭಾಗದಲ್ಲಿ ಇದೇ ಕಥೆ ಹೈಲೈಟ್ ಆಗಲಿದೆ. ಇದರ ಜೊತೆ ರಕ್ತ ಚಂದನದ ಕಳ್ಳ ಸಾಗಣೆ ಕಥೆ ಮತ್ತಷ್ಟು ಹೈಲೈಟ್ ಆಗಲಿದೆ. ಸಿನಿಮಾದಲ್ಲಿ ಬಳಕೆ ಆಗುತ್ತಿರುವ ಟ್ರಕ್​ಗಳೇ ಇದಕ್ಕೆ ಸಾಕ್ಷಿ.

ಟ್ರಕ್​ಗಳಲ್ಲಿ ರಕ್ತಚಂದನ ಸಾಗಿಸುವ ರೀತಿಯ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಇದು ‘ಪುಷ್ಪ 2’ ಚಿತ್ರದ ಶೂಟಿಂಗ್ ದೃಶ್ಯ ಎನ್ನಲಾಗಿತ್ತು. ಈಗ ನೂರಾರು ಸಂಖ್ಯೆಯಲ್ಲಿ ಟ್ರಕ್​ಗಳು ನಿಂತಿರು ವಿಡಿಯೋ ವೈರಲ್ ಆಗಿದೆ. ಇದು ‘ಪುಷ್ಪ 2’ ಚಿತ್ರದ ಸೆಟ್​ನ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಮೂಲಕ ಸಿನಿಮಾ ಯಾವ ಮಟ್ಟದಲ್ಲಿ ಸಿದ್ಧವಾಗುತ್ತಿದೆ ಎನ್ನುವುದಕ್ಕೆ ಒಂದೊಳ್ಳೆಯ ಉದಾಹರಣೆ ಸಿಕ್ಕಿದೆ. ಇನ್ನು, ಸಿನಿಮಾ ಸೆಟ್​ನ ವಿಡಿಯೋ ಲೀಕ್ ಆದ ವಿಚಾರ ಚಿತ್ರತಂಡದ ಆತಂಕಕ್ಕೆ ಕಾರಣ ಆಗಿದೆ. ಈ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಲು ತಂಡ ನಿರ್ಧರಿಸಿದೆ.

ಸಿನಿಮಾ ಸೆಟ್​ನ ವಿಡಿಯೋ ಲೀಕ್:

‘ಪುಷ್ಪ’ ಸಿನಿಮಾ ರಿಲೀಸ್ ಆಗಿದ್ದು 2021ರ ಡಿಸೆಂಬರ್​ ತಿಂಗಳಲ್ಲಿ. ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಕಳೆಯುತ್ತಾ ಬಂದರೂ ‘ಪುಷ್ಪ 2’ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಅಪ್​ಡೇಟ್​ನ ತಂಡ ನೀಡಿಲ್ಲ. ಸಿನಿಮಾ ರಿಲೀಸ್​ ದಿನಾಂಕ ಕೂಡ ಘೋಷಣೆ ಆಗಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನಮಗೆ ಅಪ್​ಡೇಟ್ ಬೇಕೆ ಬೇಕು ಎಂದು ಅಭಿಮಾನಿಗಳು ಹಠ ಹಿಡಿದು ಕೂತಿದ್ದಾರೆ. ಈಗ ‘ಪುಷ್ಪ 2’ ಚಿತ್ರದ ಲೀಕ್​ ಆದ ​ ವಿಡಿಯೋ ಅಭಿಮಾನಿಗಳಿಗೆ ಖುಷಿ ನೀಡಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಸಿದ್ಧವಾಗಲಿದೆ ಎಂಬುದು ಅಭಿಮಾನಿಗಳಿಗೆ ಪಕ್ಕಾ ಆಗಿದೆ.

ಇದನ್ನೂ ಓದಿ: ಶೂಟಿಂಗ್​ ಮುಗಿಯೋದಕ್ಕೂ ಮುನ್ನವೇ ದಾಖಲೆ ಬರೆದ ‘ಪುಷ್ಪ 2’; ಅಲ್ಲು ಅರ್ಜುನ್​ ಸಿನಿಮಾದ ಸಾಧನೆ ಏನು?

‘ಪುಷ್ಪ 2’ ಚಿತ್ರದ ಪಾತ್ರವರ್ಗ ಹಿರಿದಾಗುತ್ತಿದೆ. ಹೊಸ ಕಲಾವಿದರು ಚಿತ್ರಕ್ಕೆ ಸೇರ್ಪಡೆ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ. ಸದ್ಯ ದಕ್ಷಿಣ ಹಾಗೂ ಬಾಲಿವುಡ್ ಸಿನಿಮಾಗಳು ಸದ್ದು ಮಾಡುತ್ತಿವೆ. ‘ಜೈಲರ್’ ಚಿತ್ರ 750 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ‘ಗದರ್ 2’ ಚಿತ್ರ 500+ ಕೋಟಿ ಬಾಚಿಕೊಂಡಿದೆ. ‘ಜವಾನ್’ ಕೂಡ ಉತ್ತಮ ಗಳಿಕೆ ಮಾಡುವ ಸೂಚನೆ ನೀಡಿದೆ. ಅದೇ ರೀತಿ ‘ಪುಷ್ಪ 2’ ಚಿತ್ರ ಕೂಡ ಅದ್ದೂರಿಯಾಗಿದ್ದರೆ ಒಳ್ಳೆಯ ಕಲೆಕ್ಷನ್ ಮಾಡಲಿದೆ. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.