AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಮಲ್ಟಿಪ್ಲೆಕ್ಸ್​ನಲ್ಲಿ ಮತ್ತೆ ಬಂತು 107 ರೂಪಾಯಿ ಟಿಕೆಟ್ ಆಫರ್​; ಇಲ್ಲಿದೆ ವಿವರ

ಏಷ್ಯನ್ ಗೇಮ್ಸ್ 2023ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತ್ತು. 107 ಮೆಡಲ್​ಗಳನ್ನು ಗೆದ್ದಿತ್ತು. ಇದನ್ನು ಸೆಲೆಬ್ರೇಟ್ ಮಾಡಲು ಪಿವಿಆರ್ ಹಾಗೂ ಐನಾಕ್ಸ್ ಭರ್ಜರಿ ಆಫರ್ ನೀಡಿದೆ. 107 ರೂಪಾಯಿಗೆ ನೀವು ಸಿನಿಮಾ ಟಿಕೆಟ್ ಖರೀದಿಸಬಹುದು.

 ಮಲ್ಟಿಪ್ಲೆಕ್ಸ್​ನಲ್ಲಿ ಮತ್ತೆ ಬಂತು 107 ರೂಪಾಯಿ ಟಿಕೆಟ್ ಆಫರ್​; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on: Nov 01, 2023 | 2:27 PM

Share

ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಿದೆ ಎನ್ನುವ ಆರೋಪ ಇತ್ತೀಚೆಗೆ ಜೋರಾಗಿದೆ. ಸಿನಿಮಾಗಳ ಗಳಿಕೆ ಕುಗ್ಗಲು ಇದು ಕೂಡ ಕಾರಣ ಎಂಬುದು ಅನೇಕರ ಅಭಿಪ್ರಾಯ. ಈ ಕಾರಣದಿಂದಲೇ ವಿಶೇಷ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್ ಸಂಸ್ಥೆಗಳು ಟಿಕೆಟ್ ದರದಲ್ಲಿ ಇಳಿಕೆ ಮಾಡಿ ಆಫರ್ ನೀಡುತ್ತವೆ. 99 ರೂಪಾಯಿ, 100 ರೂಪಾಯಿ ಟಿಕೆಟ್ ದರ ನಿಗದಿ ಮಾಡಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತವೆ. ಈಗ ಪಿವಿಆರ್ ಐನಾಕ್ಸ್ (PVR INOX) 107 ರೂಪಾಯಿ ಟಿಕೆಟ್ ದರ ಘೋಷಣೆ ಮಾಡಿವೆ. ಕಡಿಮೆ ಬೆಲೆಯಲ್ಲಿ ಸಿನಿಮಾ ನೋಡಲು ಅವಕಾಶ ಸಿಕ್ಕಿದ್ದಕ್ಕೆ ಸಿನಿಪ್ರಿಯರ ಖುಷಿ ಹೆಚ್ಚಿದೆ.

ಏಷ್ಯನ್ ಗೇಮ್ಸ್ 2023ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತ್ತು. 107 ಮೆಡಲ್​ಗಳನ್ನು ಗೆದ್ದಿತ್ತು. ಇದನ್ನು ಸೆಲೆಬ್ರೇಟ್ ಮಾಡಲು ಪಿವಿಆರ್ ಹಾಗೂ ಐನಾಕ್ಸ್ ಭರ್ಜರಿ ಆಫರ್ ನೀಡಿದೆ. 107 ರೂಪಾಯಿಗೆ ನೀವು ಸಿನಿಮಾ ಟಿಕೆಟ್ ಖರೀದಿಸಬಹುದು. ಯಾವುದೇ ಸಿನಿಮಾನದ ಟಿಕೆಟ್​ನ ಇಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಪಿವಿಆರ್​ ಐನಾಕ್ಸ್ ಅನೌನ್ಸ್ ಮಾಡಿದೆ.

ಇದರ ಜೊತೆ ಪಿವಿಆರ್​ ಐನಾಕ್ಸ್ ಮತ್ತೊಂದು ಆಫರ್ ನೀಡಿದೆ. ಏಷ್ಯನ್ ಗೇಮ್ಸ್​ನಲ್ಲಿ ಮೆಡಲ್ ಗೆದ್ದವರು ಪಿವಿಆರ್​ ಐನಾಕ್ಸ್​ನಲ್ಲಿ ಒಂದು ತಿಂಗಳು (ನವೆಂಬರ್ 3ರಿಂದ ಆರಂಭವಾಗಿ ಡಿಸೆಂಬರ್ 2ರತನಕ) ಉಚಿತವಾಗಿ ಸಿನಿಮಾ ವೀಕ್ಷಿಸಬಹುದು. ಇತ್ತೀಚೆಗೆ ರಾಷ್ಟ್ರೀಯ ಸಿನಿಮಾ ದಿನ ಆಚರಿಸಲಾಗಿತ್ತು. ಈ ವೇಳೆ ಟಿಕೆಟ್ ದರದಲ್ಲಿ ಇಳಿಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೆಲವು ಸಿನಿಮಾಗಳು ಒಳ್ಳೆಯ ಗಳಿಕೆ ಮಾಡಿದ್ದವು.

ಇದನ್ನೂ ಓದಿ: ಪಿವಿಆರ್​ನವರಿಗೆ ಕೊಂಬಿದ್ರೆ ಒಳ್ಳೆಯದಕ್ಕೆ ಬಳಸಲಿ, ತಿವಿಯಲು ಬರುವುದು ಬೇಡ: ಶಿವಣ್ಣ ಖಡಕ್ ವಾರ್ನಿಂಗ್

ಇಂಡಿಯನ್ ಒಲಂಪಿಕ್ ತಂಡಕ್ಕೆ 2020ರಿಂದ ಐನಾಕ್ಸ್ ಸ್ಪಾನ್ಸರ್ ನೀಡುತ್ತಾ ಬರುತ್ತಿದೆ. ಈಗ ಕ್ರೀಡಾ ಲೋಕದಲ್ಲಿ ಆಗಿರುವ ಸಾಧನೆಗೆ ಸಿನಿಮಾ ಟಿಕೆಟ್​ಗೆ ಆಫರ್ ನೀಡಿರುವುದು ಸಿನಿಪ್ರಿಯರಿಗೆ ಖುಷಿ ತಂದಿದೆ. ನವೆಂಬರ್ 3ರಂದು 107 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದ್ದು ಕನ್ನಡದ ‘ಘೋಸ್ಟ್’, ತಮಿಳಿನ ‘ಲಿಯೋ’, ಹಿಂದಿಯ ‘ತೇಜಸ್’ ಹಾಗೂ ‘ಗಣಪತ್’ ಸಿನಿಮಾಗಳ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ