AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಯಿಂದ ರಜನೀಕಾಂತ್ ಡಿಸ್​ಚಾರ್ಜ್, ವಿಶ್ರಾಂತಿಗೆ ಸೂಚನೆ

Rajinikanth: ಕೆಲ ದಿನಗಳ ಹಿಂದೆ ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನೀಕಾಂತ್, ಸ್ಟಂಟ್ ಅಳವಡಿಕೆ ಬಳಿಕ ಇದೀಗ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಮನೆಗೆ ಮರಳಿದ ಬಳಿಕ ರಜನೀಕಾಂತ್ ಕೆಲ ವಾರಗಳ ವಿಶ್ರಾಂತಿ ಪಡೆಯಲಿದ್ದಾರೆ.

ಆಸ್ಪತ್ರೆಯಿಂದ ರಜನೀಕಾಂತ್ ಡಿಸ್​ಚಾರ್ಜ್, ವಿಶ್ರಾಂತಿಗೆ ಸೂಚನೆ
ಮಂಜುನಾಥ ಸಿ.
|

Updated on:Oct 04, 2024 | 10:12 AM

Share

ಕೆಲ ದಿನದ ಹಿಂದೆ ಹೃದಯ ಸಮಸ್ಯೆಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನೀಕಾಂತ್ ನಿನ್ನೆ ತಡರಾತ್ರಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿ ಮನೆ ಸೇರಿದ್ದಾರೆ. ಐದು ದಿನಗಳ ಹಿಂದೆ ಸೆಪ್ಟೆಂಬರ್ 30 ರಂದು ಎದೆ ನೋವು ಕಾಣಿಸಿಕೊಂಡ ಕಾರಣ ರಜನೀಕಾಂತ್ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಹಾಗೂ ವಿಶ್ರಾಂತಿಯ ಬಳಿಕ ನಿನ್ನೆ (ಅಕ್ಟೋಬರ್ 03) ರಾತ್ರಿ 11 ಗಂಟೆ ವೇಳೆಗೆ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ರಜನೀಕಾಂತ್ ಡಿಸ್​ಚಾರ್ಜ್ ಆಗಿರುವ ಮಾಹಿತಿಯನ್ನು ಚೆನ್ನೈ ಪೊಲೀಸರು ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್ 30 ರಂದು ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು, ಅವರನ್ನು ಪರೀಕ್ಷೆಗೆ ಒಳಪಡಿಸಿದ್ದ ವೈದ್ಯರು, ರಜನೀಕಾಂತ್​ರ ಹೃದಯದಲ್ಲಿ ಸಮಸ್ಯೆ ಉಂಟಾಗಿರುವುದನ್ನು ಪತ್ತೆ ಹಚ್ಚಿದ್ದರು. ರಜನೀಕಾಂತ್​ರ ಹೃದಯದ ದೊಡ್ಡ ನಾಳದಲ್ಲಿ ಊತ ಬಂದಿತ್ತು, ಅದು ಹೆಚ್ಚಾಗಿ ರಕ್ತನಾಳವೇ ಒಡೆಯುವ ಅಪಾಯವಿತ್ತು, ಹಾಗಾಗಿ ಅಪೋಲೊ ಆಸ್ಪತ್ರೆ ವೈದ್ಯರು ಊದಿಕೊಂಡಿದ್ದ ರಕ್ತನಾಳಕ್ಕೆ ಸ್ಟಂಟ್ ಅಳವಡಿಸಿದ್ದರು. ಈ ಕ್ರಿಯೆಯನ್ನು ಶಸ್ತ್ರಚಿಕಿತ್ಸೆ ಇಲ್ಲದೆಯೇ ವೈದ್ಯರು ಮಾಡಿದ್ದರು.

ಸ್ಟಂಟ್ ಅಳವಡಿಕೆ ಬಳಿಕ ಐಸಿಯುನಲ್ಲಿರಿಸಿ ಅವರ ಹೃದಯದ ಕಾರ್ಯ, ಒಟ್ಟಾರೆ ದೇಹದ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರು, ಅಕ್ಟೋಬರ್ 03 ರ ರಾತ್ರಿ 11 ಗಂಟೆಗೆ ಅವರನ್ನು ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ. ಸ್ಟಂಟ್ ಅಳವಡಿಸಿರುವ ಕಾರಣ ಕೆಲವು ದಿನಗಳ ಕಾಲ ರಜನೀಕಾಂತ್​ಗೆ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗುತ್ತಿದೆ. ರಜನೀಕಾಂತ್ ಪ್ರಸ್ತುತ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಮತ್ತೆ ಚಿತ್ರೀಕರಣಕ್ಕೆ ಬರಲು ತುಸು ಹೆಚ್ಚು ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:ರಜನೀಕಾಂತ್ ‘ವೆಟ್ಟೆಯಾನ್’ ಟ್ರೈಲರ್ ಬಿಡುಗಡೆ, ಧಂ ಇಲ್ಲ ಎಂದ ಫ್ಯಾನ್ಸ್

ರಜನೀಕಾಂತ್​ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಅವರ ಅಭಿಮಾನಿಗಳು ಆತಂಕಿತರವಾಗಿದ್ದರು. ಸ್ವತಃ ಪ್ರಧಾನಿ ಮೋದಿ, ರಜನೀಕಾಂತ್​ರ ಪತ್ನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ರಜನೀಕಾಂತ್​ರ ಪುತ್ರಿ ಸೌಂದರ್ಯ ರಜನೀಕಾಂತ್, ತಿರುವತ್ತಿಯೂರ್ ಶ್ರೀ ವಾದಿವುದೈ ದೇವಾಲಯಕ್ಕೆ ಭೇಟಿ ಮಾಡಿ, ಅಪ್ಪನ ಶೀಘ್ರ ಗುಣಮುಖ ಕೋರಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ತಮಿಳುನಾಡಿನ ರಾಜ್ಯಪಾಲರು ‘ಜಗತ್ತಿನಾದ್ಯಂತ ಇರುವ ರಜನಿಕಾಂತ್ ಅವರ ಕೋಟ್ಯಂತರ ಅಭಿಮಾನಗಳ ಜೊತೆಗೆ ನಾನು ನಿಂತಿದ್ದೇನೆ, ರಜನೀಕಾಂತ್ ಅವರ ಕ್ಷಿಪ್ರ ಮತ್ತು ಸುಗಮ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ’ ಎಂದಿದ್ದರು.

ರಜನೀಕಾಂತ್ ನಟನೆಯ ‘ವೇಟ್ಟೈಯಾನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಜನೀ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಇನ್ನೂ ಕೆಲವು ಸ್ಟಾರ್ ನಟರು ನಟಿಸಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ನಟಿಸಲು ರಜನೀಕಾಂತ್ ಒಪ್ಪಿಕೊಂಡಿದ್ದು, ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು, ಕೆಲ ಕಾಲ ವಿಶ್ರಾಂತಿಗೆ ಸೂಚಿಸಿರುವ ಕಾರಣ, ‘ಕೂಲಿ’ ಸಿನಿಮಾ ತಡವಾಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:11 am, Fri, 4 October 24

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?