Rajinikanth
Image Credit source: Sun Pictures
ಬಹುತಾರಾಗಣ ಇರುವ ‘ಜೈಲರ್ 2’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ರಜನಿಕಾಂತ್, ಶಿವರಾಜ್ಕುಮಾರ್, ರಮ್ಯಾ ಕೃಷ್ಣನ್, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರವನ್ನು ‘ಸನ್ ಪಿಕ್ಚರ್ಸ್’ ಸಂಸ್ಥೆಯು ಬೃಹತ್ ಬಜೆಟ್ನಲ್ಲಿ ನಿರ್ಮಾಣ ಮಾಡಿದೆ. 2023ರಲ್ಲಿ ತೆರೆಕಂಡಿದ್ದ ‘ಜೈಲರ್’ ಸಿನಿಮಾದ ಸೀಕ್ವೆಲ್ ಆಗಿ ‘ಜೈಲರ್ 2’ ಮೂಡಿಬಂದಿದೆ. ರಜನಿಕಾಂತ್ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ಇಟ್ಟಿದ್ದ ನಿರೀಕ್ಷೆ ಬಹಳ ದೊಡ್ಡದು. ಮೊದಲ ದಿನವೇ ವಿಶ್ವಾದ್ಯಂತ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ‘ಜೈಲರ್ 2’ ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..
- ಜೈಲರ್ ಕಥೆಯ ಮುಂದುವರಿದ ಭಾಗ ‘ಜೈಲರ್ 2’ ಸಿನಿಮಾದಲ್ಲಿದೆ. ವರ್ಮನ್ ಹತ್ಯೆ ಬಳಿಕ ಏನಾಯ್ತು ಎಂಬುದರೊಂದಿಗೆ ಕಥೆ ಶುರು.
- ಸಿಂಪಲ್ ಆಗಿಯೇ ರಜನಿಕಾಂತ್ ಎಂಟ್ರಿ ನೀಡುತ್ತಾರೆ. ಟೈಗರ್ ಮತ್ತುವೇಲ್ ಪಾಂಡಿಯನ್ ಮಾಸ್ ಅವತಾರ ನೋಡಲು ಫ್ಯಾನ್ಸ್ ಸ್ವಲ್ಪ ಕಾಯಬೇಕು.
- ಯೋಗಿ ಬಾಬು ಪಾತ್ರದಿಂದ ಕಥೆಯಲ್ಲಿ ಕಾಮಿಡಿ ರಿಲೀಫ್ ಇದೆ. ರಜನಿಕಾಂತ್ – ಯೋಗಿಬಾಬು ಕಾಂಬಿನೇಷನ್ ದೃಶ್ಯಗಳು ನಗು ಮೂಡಿಸುತ್ತವೆ.
- ಸಾಮಾನ್ಯ ಡ್ರೈವರ್ ಆಗಿದ್ದು, ಬಳಿಕ ಸೂಕ್ತ ಸಮಯದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಅಸಲಿ ಮುಖ ತೋರಿಸಿದಾಗ ಚಿತ್ರದ ಥ್ರಿಲ್ ಹೆಚ್ಚುತ್ತದೆ.
- ಮೊದಲ ಪಾರ್ಟ್ನಲ್ಲಿ ವರ್ಮನ್ ಆಗಿ ಅಬ್ಬರಿಸಿದ್ದ ನಟ ವಿನಾಯಗನ್ ಅವರು ಈಗ ಸೀಕ್ವಲ್ನ ಫಸ್ಟ್ಹಾಫ್ನಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಾರೆ.
- ‘ಅಲ ಬೊಲೆಲೊ’ ಹಾಡು ಫಸ್ಟ್ ಹಾಫ್ನಲ್ಲೇ ಇದೆ. ನಟಿ ಪೂರ್ಣ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಸಾಂಗ್ ಜೊತೆಗೆ ಟ್ವಿಸ್ಟ್ ಸಿಗುತ್ತದೆ.
- ಸೂರಜ್ ವೆಂಜರಮೂಡು ಅವರು ಮೊದಲಾರ್ಧದಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಿದ್ದಾರೆ. ಇನ್ನುಳಿದ ಮುಖ್ಯ ಪಾತ್ರಗಳು ದ್ವಿತೀಯಾರ್ಧದಲ್ಲಿ ಬರಲಿವೆ.
- ಶಿವರಾಜ್ಕುಮಾರ್, ಮೋಹನ್ಲಾಲ್, ಟೈಗರ್ ಶ್ರಾಫ್ ಮಾಡಿರುವ ಅತಿಥಿ ಪಾತ್ರಗಳು ಕೂಡ ‘ಜೈಲರ್ 2’ ಸಿನಿಮಾದ ಪ್ರಮುಖ ಹೈಲೈಟ್ಸ್ ಆಗಿವೆ.
- ಮಧ್ಯಂತರದ ವೇಳೆಗೆ ಶಿವರಾಜ್ಕುಮಾರ್, ಮೋಹನ್ಲಾಲ್, ಟೈಗರ್ ಶ್ರಾಫ್ ಕಾಣಿಸಿಕೊಳ್ಳುತ್ತಾರೆ. ಆ ಮೂಲಕ ಚಿತ್ರದ ಮನರಂಜನೆ ಹೆಚ್ಚಿಸುತ್ತಾರೆ.
- ‘ಜೈಲರ್ 2’ ಚಿತ್ರದ ಫಸ್ಟ್ ಹಾಫ್ನಲ್ಲಿ ಆ್ಯಕ್ಷನ್ ಮತ್ತು ಕಾಮಿಡಿಯ ಮಿಶ್ರಣ ಇದೆ. ದ್ವಿತೀಯಾರ್ಧದಲ್ಲಿ ಹೆಚ್ಚಿನ ಆ್ಯಕ್ಷನ್ ನಿರೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.