AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್ 2’ ಶೂಟಿಂಗ್ ಸೆಟ್‌ನಲ್ಲಿ ರಜನಿಕಾಂತ್ ಎದುರು ನಡುಗಿದ್ದ ವಿದ್ಯಾ ಬಾಲನ್

‘ಜೈಲರ್ 2’ ಚಿತ್ರದಲ್ಲಿ ವಿದ್ಯಾ ಬಾಲನ್ ಅವರು ಕಾಂತಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಪಾತ್ರದ ಮೊದಲ ಗ್ಲಿಂಪ್ಸ್‌ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ರಜನಿಕಾಂತ್ ಜೊತೆ ಶೂಟಿಂಗ್ ಮಾಡಿದ ಅನುಭವವನ್ನು ವಿದ್ಯಾ ಬಾಲನ್ ಅವರು ಹಂಚಿಕೊಂಡಿದ್ದಾರೆ.

‘ಜೈಲರ್ 2’ ಶೂಟಿಂಗ್ ಸೆಟ್‌ನಲ್ಲಿ ರಜನಿಕಾಂತ್ ಎದುರು ನಡುಗಿದ್ದ ವಿದ್ಯಾ ಬಾಲನ್
Vidya Balan Image Credit source: Sun Pictures
ಮದನ್​ ಕುಮಾರ್​
|

Updated on: Oct 13, 2026 | 5:37 PM

Share

ಬಾಲಿವುಡ್‌ನ ಪ್ರತಿಭಾವಂತ ನಟಿ ವಿದ್ಯಾ ಬಾಲನ್ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿದ್ಯಾ ಬಾಲನ್ ಅವರು ಚಿತ್ರೀಕರಣದ ಸೆಟ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ನಟಿಸುವಾಗ ತಮಗೆ ಉಂಟಾದ ನಡುಕ ಹಾಗೂ ತಮಾಷೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ‘ಜೈಲರ್ 2 ಸೂಪರ್ ಶೋ’ ಕಾರ್ಯಕ್ರಮದಲ್ಲಿ ವಿದ್ಯಾ ಬಾಲನ್ ಜೊತೆಗೆ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್, ಸಹ-ನಟರಾದ ರಮ್ಯಾ ಕೃಷ್ಣನ್, ಎಸ್‌ಜೆ ಸೂರ್ಯ ಮತ್ತು ಸೂರಜ್ ವೆಂಜಾರಮೂಡು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಎಸ್‌ಜೆ ಸೂರ್ಯ, ವಿದ್ಯಾ ಬಾಲನ್ ತಮಿಳಿನ ಉದ್ದನೆಯ ಸಂಭಾಷಣೆಗಳನ್ನು ಒಪ್ಪಿಸಲು ಆರಂಭದಲ್ಲಿ ತುಸು ಹೆಣಗಾಡಿದ್ದರು ಎಂದು ತಮಾಷೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾ ಬಾಲನ್ ಅವರು ತಮ್ಮ ಶೂಟ್ ಮುಗಿಯುವವರೆಗೆ ತಾವು ಯಾರೊಬ್ಬರೊಂದಿಗೂ ಮಾತನಾಡುವುದಿಲ್ಲ ಎಂದು ಒಪ್ಪಿಕೊಂಡರು. ಆದರೆ ಒಮ್ಮೆ ಶೂಟಿಂಗ್ ಮುಗಿದ ನಂತರ ಎಲ್ಲರೊಂದಿಗೆ ಬಹಳ ಮುಕ್ತವಾಗಿ ಹರಟುತ್ತಿರುವುದಾಗಿ ತಿಳಿಸಿದರು.

ನಿರ್ದೇಶಕ ನೆಲ್ಸನ್ ಅವರು ಇಂಪ್ರೊವೈಸ್ ಮಾಡಿದ್ದ ಒಂದು ಮರೆಯಲಾಗದ ದೃಶ್ಯದ ಬಗ್ಗೆ ವಿದ್ಯಾ ಬಾಲನ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಒಂದು ದಿನ ಶೂಟಿಂಗ್ ಆರಂಭವಾಗುವ ಮುನ್ನವೇ, ನೆಲ್ಸನ್ ನನಗೆ ಒಂದೂವರೆ ಪುಟದ ಹೊಸ ಸಂಭಾಷಣೆಯನ್ನು ನೀಡಿದರು. ಅಷ್ಟೊಂದು ದೊಡ್ಡ ಡೈಲಾಗ್ ನೆನಪಿಟ್ಟುಕೊಂಡು, ಅದೇ ಸಮಯದಲ್ಲಿ ಸಿಗರೇಟ್ ಕೂಡ ಸೇದುತ್ತಾ ಅಭಿನಯಿಸುವುದು ಹೇಗೆ ಎಂದು ನಾನು ಕಂಗಾಲಾಗಿ ನಿಂತಿದ್ದೆ’ ಎಂದು ವಿದ್ಯಾ ಬಾಲನ್ ಹೇಳಿದರು.

ಈ ಕುರಿತು ನಿರ್ದೇಶಕ ನೆಲ್ಸನ್ ಮಾತನಾಡಿ, ‘ನಾನು ಮಾನಿಟರ್‌ನಲ್ಲಿ ನೋಡುತ್ತಿದ್ದಾಗ, ವಿದ್ಯಾ ಅವರ ಕೈಗಳು ಮತ್ತು ಧ್ವನಿ ನಡುಗುತ್ತಿರುವುದನ್ನು ಗಮನಿಸಿದೆ. ಸ್ವಲ್ಪ ಸಮಯದ ನಂತರ ಹೊಗೆಯೆಲ್ಲಾ ಅವರ ಕಣ್ಣಿಗೆ ಹೋಗಲು ಶುರುವಾಯಿತು. ಆಗ ವಿದ್ಯಾ ನನ್ನ ಬಳಿ ಬಂದು, ನಾನೇನೂ ಮಾಡ್ತಿಲ್ಲ, ಆ ಸಿಗರೇಟ್ ತಾನಾಗಿಯೇ ನಡುಗ್ತಾ ಇದೆ ಅಂತ ನಕ್ಕಿದ್ದರು’ ಎಂದು ತಮಾಷೆಯ ಘಟನೆಯನ್ನು ಮೆಲುಕು ಹಾಕಿದರು.

ಇದನ್ನೂ ಓದಿ: ರಜನಿಕಾಂತ್ ಜೊತೆ ‘ಜೈಲರ್ 2’ ಚಿತ್ರದಲ್ಲಿ ನಟಿಸಲು ದೊಡ್ಡ ಷರತ್ತು ಹಾಕಿದ್ದ ಮಿಥುನ್

ಈ ಹಿಂದೆ ತಾವು ಹಲವು ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದರೂ, ರಜನಿಕಾಂತ್ ಅವರೊಂದಿಗೆ ನಟಿಸುತ್ತಿರುವುದು ಇದೇ ಮೊದಲು ಎಂದು ವಿದ್ಯಾ ಬಾಲನ್ ತಿಳಿಸಿದರು. ಆ ಸೀನ್‌ನಲ್ಲಿ ಸಿಗರೇಟ್ ಸೇದುವಾಗ ತಮಗೆ ಉಂಟಾದ ಆತಂಕದಿಂದಾಗಿ ತಮ್ಮ ಇಡೀ ದೇಹವೇ ನಡುಗುತ್ತಿತ್ತು ಎಂದು ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಆ ದೃಶ್ಯದಲ್ಲಿ ಸಹಜವಾಗಿ ನಟಿಸಲು ಅನುಕೂಲವಾಗಲೆಂದು, ಶೂಟಿಂಗ್‌ಗೆ ಬರುವ ಮುನ್ನವೇ ಸಿಗರೇಟ್ ಸೇದುವ ಅಭ್ಯಾಸ ಮಾಡಿಕೊಂಡಿದ್ದಾಗಿಯೂ ಅವರು ಬಹಿರಂಗಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!