Rajinikanth: ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದ ಅಣ್ಣಾಥೆ; ರಜಿನಿ ನಟನೆಯ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು?
Annatthe Box Office collection: ರಜಿನಿಕಾಂತ್ ನಟನೆಯ ‘ಅಣ್ಣಾಥೆ’ ಚಿತ್ರ ಬಾಕ್ಸಾಫೀಸ್ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಚಿತ್ರದ ಇದುವರೆಗಿನ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ರಜಿನಿಕಾಂತ್ ಅಭಿನಯದ ‘ಅಣ್ಣಾಥೆ’ ಚಿತ್ರ ಬಾಕ್ಸಾಫೀಸ್ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಕೊವಿಡ್, ಚೆನ್ನೈನಲ್ಲಿ ಮಳೆ ಮೊದಲಾದ ಕಾರಣದಿಂದ ಒಟ್ಟಾರೆ ಗಳಿಕೆಗೆ ಹೊಡೆತ ಬಿದ್ದಿದ್ದರೂ ಕೂಡ, ಚಿತ್ರ ₹ 200 ಕೋಟಿ ಕ್ಲಬ್ಅನ್ನು ಈಗಾಗಲೇ ದಾಟಿದೆ. ಈ ಮೂಲಕ ರಜಿನಿಕಾಂತ್ ಬಾಕ್ಸಾಫೀಸ್ ಕಿಂಗ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 2021ರಲ್ಲಿ ಅತ್ಯಂತ ವೇಗವಾಗಿ ₹ 200 ಕೋಟಿ ಕ್ಲಬ್ಗೆ ಸೇರಿದ ಚಿತ್ರ ಎಂಬ ದಾಖಲೆ ‘ಅಣ್ಣಾಥೆ’ ಪಾಲಾಗಿದೆ. ಇದಲ್ಲದೇ ₹ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ರಜಿನಿಯ ಚಿತ್ರಗಳೇ ಹೆಚ್ಚಿವೆ ಎಂಬುದು ರಜಿನಿಕಾಂತ್ ಹೊಂದಿರುವ ಹೊಸ ದಾಖಲೆ. ಚಿತ್ರ ಅಂದಾಜು ₹ 210 ಕೋಟಿಗೂ ಅಧಿಕ ಹಣವನ್ನು ಬಾಕ್ಸಾಫೀಸ್ನಲ್ಲಿ ಗಳಿಸಿದ್ದು, ಚಿತ್ರ ₹ 250 ಕೋಟಿ ಕ್ಲಬ್ಗೆ ಸೇರುವ ಸಾಧ್ಯತೆ ಇದೆ ಎಂದು ಬಾಕ್ಸಾಫೀಸ್ ಪರಿಣತರು ವಿಶ್ಲೇಷಿಸಿದ್ದಾರೆ.
‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿ ಚಿತ್ರ ತೆರೆಗೆ ಬಂದಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ನವೆಂಬರ್ 5ರಂದು ಸಿನಿಮಾ 42.6 ಕೋಟಿ ರೂಪಾಯಿ, ನವೆಂಬರ್ 6ರಂದು ಚಿತ್ರ 33.71 ಕೋಟಿ ಗಳಿಸಿತ್ತು. ಇದೀಗ ಮೊದಲ ವಾರಾಂತ್ಯಕ್ಕೆ ಚಿತ್ರ ಒಟ್ಟಾರೆ ₹ 202.47 ಕೋಟಿ ಗಳಿಕೆ ಮಾಡಿದೆ.
ಎರಡನೇ ವಾರದ ಮೊದಲ ದಿನದಲ್ಲಿ ಚಿತ್ರವು ಜಗತ್ತಿನಾದ್ಯಂತ ₹ 4.05 ಕೋಟಿ ಗಳಿಸಿದ್ದು, ಇದುವರೆಗೆ ಒಟ್ಟು ₹ 206.52 ಕೋಟಿ ಬಾಚಿಕೊಂಡಿದೆ. ತಮಿಳುನಾಡಿನ ಲೆಕ್ಕಾಚಾರವನ್ನು ಮಾತ್ರ ಪರಿಗಣಿಸಿದರೆ, ಅಲ್ಲಿ ಚಿತ್ರವು, ಒಟ್ಟು ₹ 122.80 ಕೋಟಿ ಗಳಿಸಿದೆ. ಈ ಮೂಲಕ ರಜಿನಿ ಚಿತ್ರ ದಾಖಲೆ ಬರೆದಿದೆ.
‘ಅಣ್ಣಾಥೆ’ ಚಿತ್ರದ ಬಾಕ್ಸಾಫೀಸ್ ಲೆಕ್ಕಾಚಾರ ಇಲ್ಲಿದೆ:
#Annaatthe WW Box Office
Week 1 – ₹ 202.47 cr Week 2 Day 1 – ₹ 4.05 cr Total – ₹ 206.52 cr#Rajinikanth #KeerthySuresh #Nayanthara
— Manobala Vijayabalan (@ManobalaV) November 12, 2021
‘ಅಣ್ಣಾಥೆ’ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ರಜನಿಕಾಂತ್, ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದೀಪಾವಳಿ ನಿಮಿತ್ತ ಈ ಸಿನಿಮಾ ನವೆಂಬರ್ 4ರಂದು ತೆರೆಗೆ ಬಂದಿತ್ತು. ಚಿತ್ರಕ್ಕೆ ಎಲ್ಲ ಕಡೆಗಳಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ.
ಇದನ್ನೂ ಓದಿ:
ಮಂಕಾಗಿದ್ದ ಚಿತ್ರಮಂದಿರಗಳ ವಹಿವಾಟಿಗೆ ಮರುಜೀವ ನೀಡಿದ ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್