ರಜನೀಕಾಂತ್ ‘ಕೂಲಿ’ ಸಿನಿಮಾಕ್ಕೆ ಎ ಸರ್ಟಿಫಿಕೇಟ್, ಇದು ಮೊದಲೇನಲ್ಲ
Rajinikanth movies: ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾಕ್ಕೆ ಸಿಬಿಎಫ್ಸಿಯು ‘ಎ’ ಪ್ರಮಾಣ ಪತ್ರ ನೀಡಿದೆ. ರಜನೀಕಾಂತ್ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿರುವುದು ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ. ಹಲವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ರಜನೀಕಾಂತ್ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿರುವುದು ಇದು ಮೊದಲೇನೂ ಅಲ್ಲ.

ಸ್ಟಾರ್ ನಟರು ತಮ್ಮ ಸಿನಿಮಾಗಳಿಗೆ ‘ಎ’ ಸರ್ಟಿಫಿಕೇಟ್ ಬರುವುದನ್ನು ಸಹಿಸುವುದಿಲ್ಲ. ಸಿನಿಮಾಗಳಿಗೆ ‘ಎ’ ಸರ್ಟಿಫಿಕೇಟ್ ಸಿಕ್ಕರೆ ಅದನ್ನು ಅಗೌರವ ಎಂದು ಭಾವಿಸುವ ಹಲವಾರು ಮಂದಿ ನಟರುಗಳು ಇದ್ದಾರೆ. ಹಿರಿಯ ಸ್ಟಾರ್ ನಟರುಗಳಂತೂ ತಮ್ಮ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಟ್ ಬರದಂತೆ ಸಾಕಷ್ಟು ಎಚ್ಚರ ವಹಿಸುತ್ತಾರೆ. ಆದರೆ ಇದೀಗ ಖ್ಯಾತ ನಟ, ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ರಜನೀಕಾಂತ್ ಅವರ ಹೊಸ ಸಿನಿಮಾ ‘ಕೂಲಿ’ಗೆ ಸಿಬಿಎಫ್ಸಿ ಎ ಪ್ರಮಾಣ ಪತ್ರ ನೀಡಿದೆ.
ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿದ್ದು, ಸಿನಿಮಾದ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ರಜನೀಕಾಂತ್ರ ಕೆಲವು ಅಭಿಮಾನಿಗಳು ಇದರ ಬಗ್ಗೆ ಬೇಸರ ಸಹ ವ್ಯಕ್ತಪಡಿಸಿದ್ದಾರೆ. ಆದರೆ ರಜನೀಕಾಂತ್ ಅವರ ಸಿನಿಮಾಗಳಿಗೆ ‘ಎ’ ಪ್ರಮಾಣ ಪತ್ರ ಸಿಗುತ್ತಿರುವುದು ಇದು ಮೊದಲೇನೂ ಅಲ್ಲ. ಆದರೆ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಗುತ್ತಿರುವುದು ಇದೇ ಮೊದಲು.
ರಜನೀಕಾಂತ್ ಅವರ ಹಿಂದಿನ ಕೆಲವು ಸಿನಿಮಾಗಳಿಗೆ ‘ಎ’ ಪ್ರಮಾಣ ಪತ್ರವನ್ನು ಸಿಬಿಎಫ್ಸಿ ನೀಡಿದೆ. ಆದರೆ ಅದೆಲ್ಲ ಬಹಳ ಹಿಂದೆ. 1985 ರ ಬಳಿಕ ರಜನೀಕಾಂತ್ ನಟಿಸಿರುವ ಯಾವುದೇ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಬಿಎಫ್ಸಿಯಿಂದ ದೊರೆತಿಲ್ಲ. 1982 ರಲ್ಲಿ ರಜನೀಕಾಂತ್ ನಟಿಸಿರುವ ‘ಪುದುಕವಿದೈ’ ಅದೇ ವರ್ಷ ಬಿಡುಗಡೆ ಆದ ‘ರಂಗ’ ಸಿನಿಮಾಗಳಿಗೆ ‘ಎ’ ಪ್ರಮಾಣ ಪತ್ರ ದೊರೆತಿತ್ತು. ಅದಾದ ಬಳಿಕ 1985 ರಲ್ಲಿ ಬಿಡುಗಡೆ ಆದ ‘ನಾನ್ ಸಿಗಪ್ಪು ಮನಿದನ್’ ಸಿನಿಮಾಕ್ಕೆ ಸಹ ‘ಎ’ ಪ್ರಮಾಣ ಪತ್ರ ನೀಡಲಾಗಿತ್ತು. ಅದೇ ಕೊನೆ, ಅದಾದ ಬಳಿಕ ಈಗ ‘ಕೂಲಿ’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ.
ಇದನ್ನೂ ಓದಿ:ಭಾರಿ ಮೊತ್ತಕ್ಕೆ ಒಟಿಟಿಗೆ ಸೇಲ್ ಆಯ್ತು ರಜನೀಕಾಂತ್ ನಟನೆಯ ಕೂಲಿ
ಲೋಕೇಶ್ ಕನಗರಾಜ್ ಅವರ ಸಿನಿಮಾಗಳು ಬಹಳ ರಾ ಆಗಿರುತ್ತವೆ. ಅವರ ಸಿನಿಮಾಗಳಲ್ಲಿ ವಯಲೆನ್ಸ್ ಹೆಚ್ಚು ಅದರ ಜೊತೆಗೆ ಮಾದಕ ವಸ್ತುಗಳ ಬಳಕೆಯು ಸಹ ಹೆಚ್ಚಾಗಿ ಇರುತ್ತದೆ. ಅವರ ಸಿನಿಮಾಗಳಲ್ಲಿ ಬೈಗುಳಗಳು ಸಹ ಹೆಚ್ಚಾಗಿಯೇ ಇರುತ್ತವೆ. ಹಾಗಾಗಿ ಅವರ ಸಿನಿಮಾಗಳಿಗೆ ಸಿಬಿಎಫ್ಸಿ ಯವರು ಕಟ್ಗಳನ್ನು ಸೂಚಿಸುವುದು ಸಾಮಾನ್ಯ. ‘ಕೂಲಿ’ ಸಿನಿಮಾಕ್ಕೂ ಇದೇ ಕಾರಣಕ್ಕೆ ‘ಎ’ ಪ್ರಮಾಣ ಪತ್ರ ನೀಡಿದ್ದಾರೆ. ಅವರ ಈ ಹಿಂದಿನ ಯಾವ ಸಿನಿಮಾಕ್ಕೂ ‘ಎ’ ಪ್ರಮಾಣ ಪತ್ರ ಸಿಕ್ಕಿರಲಿಲ್ಲ. ಇದು ಅವರಿಗೆ ಮೊದಲು.
‘ಕೂಲಿ’ ಸಿನಿಮಾನಲ್ಲಿ ರಜನೀಕಾಂತ್, ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ, ಆಮಿರ್ ಖಾನ್, ಶೋಬಿನ್, ಶ್ರುತಿ ಹಾಸನ್, ಸತ್ಯರಾಜ್ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ದ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಕಲಾನಿಧಿ ಮಾರನ್. ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




