AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಗೆಟಿವ್ ವಿಮರ್ಶೆಗಳೇ ‘ಪೆದ್ದಿ’ ಚಿತ್ರದ ಗೆಲುವಿಗೆ ಕಾರಣ; ಚಿತ್ರತಂಡದ ಅಚ್ಚರಿಯ ಹೇಳಿಕೆ

'ಪೆದ್ದಿ' ಚಿತ್ರದ ಬೃಹತ್ ಯಶಸ್ಸಿಗೆ ನೆಗೆಟಿವ್ ವಿಮರ್ಶೆಗಳೇ ಕಾರಣ ಎಂದು ನಟ ಜಗಪತಿ ಬಾಬು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ರಾಮ್ ಚರಣ್ ಅವರ ಸ್ಟಾರ್‌ಡಮ್ ಚಿತ್ರವನ್ನು ಮುನ್ನಡೆಸಿದ್ದು, ಸ್ಪೋರ್ಟ್ಸ್ ಡ್ರಾಮಾ ಪ್ರೇಕ್ಷಕರನ್ನು ಆಕರ್ಷಿಸಿದೆ. ವಿಮರ್ಶಕರು ಅರಿಯದೆಯೇ ಚಿತ್ರದ ಪ್ರಚಾರಕ್ಕೆ ನೆರವಾದರು ಎಂದು ಅವರು ಧನ್ಯವಾದ ತಿಳಿಸಿದರು. ನಾಯಕಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ವಿವಾದಗಳಿದ್ದರೂ, 'ಪೆದ್ದಿ' ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.

ನೆಗೆಟಿವ್ ವಿಮರ್ಶೆಗಳೇ 'ಪೆದ್ದಿ' ಚಿತ್ರದ ಗೆಲುವಿಗೆ ಕಾರಣ; ಚಿತ್ರತಂಡದ ಅಚ್ಚರಿಯ ಹೇಳಿಕೆ
ರಾಮ್ ಚರಣ್ Image Credit source: Peddi Movie
ರಾಜೇಶ್ ದುಗ್ಗುಮನೆ
|

Updated on: Jun 09, 2026 | 7:04 AM

Share

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಪೆದ್ದಿ’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಾ ಇದೆ. ನೆಗೆಟಿವ್ ವಿಮರ್ಶೆಗಳು ಸಿಕ್ಕ ಹೊರತಾಗಿಯೂ ರಾಮ್ ಚರಣ್ ಅವರ ಸ್ಟಾರ್​ ಡಂ ಕಾರಣಕ್ಕೆ ಸಿನಿಮಾ ಗೆಲ್ಲುತ್ತಿದೆ. ಚಿತ್ರದ ಮೇಲಿನ ನೆಗೆಟಿವ್ ವಿಮರ್ಶೆಗಳೇ ಸಿನಿಮಾ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಪರೋಕ್ಷವಾಗಿ ನೆರವಾದವು ಎಂದು ಹಿರಿಯ ನಟ ಜಗಪತಿ ಬಾಬು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಸಿನಿಮಾಗೆ ಸಿಕ್ಕ ನೆಗೆಟಿವ್ ವಿಮರ್ಶೆ ಬ್ಗಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಪೆದ್ದಿ ಸಿನಿಮಾ ರಿಲೀಸ್ ಆಯಿತು, ಹೋರಾಡಿತು ಮತ್ತು ಗೆದ್ದಿತು. ಆದರೆ ಬಿಡುಗಡೆಯಾದ ಮೇಲೂ ಚಿತ್ರತಂಡ ವಿಮರ್ಶೆಗಳ ವಿರುದ್ಧ ಮತ್ತೊಮ್ಮೆ ಹೋರಾಡಿ, ಎರಡನೇ ಬಾರಿಗೆ ಗೆಲ್ಲಬೇಕಾಗಿ ಬಂತು. ಬಹುಶಃ ಇತಿಹಾಸದಲ್ಲಿ ಎರಡು ಬಾರಿ ಗೆದ್ದ ಸಿನಿಮಾ ಇದೊಂದೇ ಇರಬಹುದು’ ಎಂದರು. ‘ನಾಯಕ ರಾಮ್ ಚರಣ್ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದಾರೆ. ಅವರು ಈ ಸಿನಿಮಾದಲ್ಲಿ ಕೇವಲ ನಟನಾಗಿ ಉಳಿದಿಲ್ಲ, ಬದಲಿಗೆ ಸೂಪರ್‌ಮ್ಯಾನ್ ಮತ್ತು ಹೀ-ಮ್ಯಾನ್ ತರಹ ಅಬ್ಬರಿಸಿದ್ದಾರೆ’ ಎಂದು ಕೊಂಡಾಡಿದರು.

‘ಸಿನಿಮಾ 300 ಕೋಟಿ ಅಥವಾ 400 ಕೋಟಿ ಗಳಿಸುವುದು ಮುಖ್ಯವಲ್ಲ. ಥಿಯೇಟರ್‌ನಲ್ಲಿ 300 ರೂಪಾಯಿ ಟಿಕೆಟ್ ಕೊಟ್ಟು ನೋಡುವ ಸಾಮಾನ್ಯ ಪ್ರೇಕ್ಷಕನೇ ಸಿನಿಮಾದ ಹಣೆಬರಹ ನಿರ್ಧರಿಸುತ್ತಾನೆ. ಇಂತಹ ವಿಭಿನ್ನ ಕಥೆಗೆ ನಿರ್ಮಾಪಕರನ್ನು ಹುಡುಕುವುದು ಮತ್ತು ರಾಮ್ ಚರಣ್ ಅವರಂತಹ ಸ್ಟಾರ್ ನಟನನ್ನು ಒಪ್ಪಿಸುವುದು ಸುಲಭದ ಮಾತಲ್ಲ. ಸ್ವಲ್ಪ ತಪ್ಪಾಗಿದ್ದರೂ ಜನ ಚಿತ್ರವನ್ನು ತಿರಸ್ಕರಿಸುತ್ತಿದ್ದರು. ನಮಗೆ ಕೆಟ್ಟ ವಿಮರ್ಶೆ ಬರೆದವರಿಗೆ ನಾನು ವಿಶೇಷ ಧನ್ಯವಾದ ಹೇಳುತ್ತೇನೆ. ಏಕೆಂದರೆ ಅವರು ತಿಳಿಯದೆಯೇ ಚಿತ್ರದ ಪ್ರಚಾರಕ್ಕೆ ಮತ್ತು ಯಶಸ್ಸಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದಾರೆ’ ಎಂದು ವಿಮರ್ಶಕರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ನಾಲ್ಕನೇ ದಿನ ಭರ್ಜರಿ ಗಳಿಕೆ ಮಾಡಿದ ‘ಪೆದ್ದಿ’; ಮುಂದಿದೆ ಚಾಲೆಂಜ್

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸಿನಿಮಾ ಸ್ಪೋರ್ಟ್ಸ್ ಡ್ರಾಮಾ ಶೈಲಿಯಲ್ಲಿದೆ. ಕ್ರಿಕೆಟ್, ಕುಸ್ತಿ ಹಾಗೂ ರನ್ನಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಮಿಂಚುವ ನಾಯಕನ ಕಥೆಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರಕ್ಕೆ ಪ್ರಶಂಸೆಗಳ ಜೊತೆಯಲ್ಲೇ ದೊಡ್ಡ ಮಟ್ಟದ ವಿವಾದವೂ ಸುತ್ತಿಕೊಂಡಿದೆ. ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರವನ್ನು ತೋರಿಸಿರುವ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಾಯಕಿಯ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಲಾಗಿದೆ ಮತ್ತು ಮಹಿಳೆಯರನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ಎಂದು ನೆಟ್ಟಿಗರು ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ?
ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ?
ಇಂದು ಈ ರಾಶಿಯವರು ಕೋಪ ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ
ಇಂದು ಈ ರಾಶಿಯವರು ಕೋಪ ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ
ತಾಯ್ನಾಡಿನಲ್ಲಿ ಮೊದಲ ಟೆಸ್ಟ್ ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ
ತಾಯ್ನಾಡಿನಲ್ಲಿ ಮೊದಲ ಟೆಸ್ಟ್ ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ
ಸತ್ಯನಾರಾಯಣ ಸ್ವಾಮಿ ಪೂಜೆಗೆ ಪತ್ನಿಯೊಡನೆ ಬಂದ ಶಿವಣ್ಣ: ವಿಡಿಯೋ
ಸತ್ಯನಾರಾಯಣ ಸ್ವಾಮಿ ಪೂಜೆಗೆ ಪತ್ನಿಯೊಡನೆ ಬಂದ ಶಿವಣ್ಣ: ವಿಡಿಯೋ