ಲೀಕ್ ಆಯ್ತು ‘ರಾಮಾಯಣ’ ಸಿನಿಮಾ ಟ್ರೈಲರ್, ಸಿನಿಪ್ರಿಯರು ಹೇಳಿದ್ದೇನು?

Ramayana movie: ರಣ್​​ಬೀರ್ ಕಪೂರ್, ಯಶ್ ಹಾಗೂ ಇಡೀ ಚಿತ್ರತಂಡ ವಿದೇಶಗಳಲ್ಲಿ ಭರ್ಜರಿಯಾಗಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಸ್ಯಾನ್ ಡಿಯಾಗೊನಲ್ಲಿ ನಡೆದ ಕಾಮಿಕಾನ್​​ನಲ್ಲಿ ಸಹ ಚಿತ್ರತಂಡ ಭಾಗವಹಿಸಿತ್ತು. ಕಾಮಿಕಾನ್​​ನಲ್ಲಿ ಸಿನಿಮಾದ ಅನ್ ರಿಲೀಸ್ಡ್ ಟ್ರೈಲರ್ ಪ್ರದರ್ಶಿಸಲಾಯ್ತು. ಆದರೆ ಇದೀಗ ಆನ್​​ಲೈನ್​​​ನಲ್ಲಿ ಟ್ರೈಲರ್ ಲೀಕ್ ಆಗಿದೆ.

ಲೀಕ್ ಆಯ್ತು ‘ರಾಮಾಯಣ’ ಸಿನಿಮಾ ಟ್ರೈಲರ್, ಸಿನಿಪ್ರಿಯರು ಹೇಳಿದ್ದೇನು?
Ramayana Trailer
Edited By:

Updated on: Jul 30, 2026 | 10:06 AM

‘ರಾಮಾಯಣ’ (Ramayana) ಭಾರತದ ಈ ವರೆಗಿನ ಅತಿ ಹೆಚ್ಚು ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಅನ್ನು ವಿಶ್ವ ಮಟ್ಟದಲ್ಲಿ ಬಲು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ರಣ್​​ಬೀರ್ ಕಪೂರ್, ಯಶ್ ಹಾಗೂ ಇಡೀ ಚಿತ್ರತಂಡ ವಿದೇಶಗಳಲ್ಲಿ ಭರ್ಜರಿಯಾಗಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಸ್ಯಾನ್ ಡಿಯಾಗೊನಲ್ಲಿ ನಡೆದ ಕಾಮಿಕಾನ್​​ನಲ್ಲಿ ಸಹ ಚಿತ್ರತಂಡ ಭಾಗವಹಿಸಿತ್ತು. ಕಾಮಿಕಾನ್​​ನಲ್ಲಿ ಸಿನಿಮಾದ ಅನ್ ರಿಲೀಸ್ಡ್ ಟ್ರೈಲರ್ ಪ್ರದರ್ಶಿಸಲಾಯ್ತು. ಆದರೆ ಇದೀಗ ಆನ್​​ಲೈನ್​​​ನಲ್ಲಿ ಟ್ರೈಲರ್ ಲೀಕ್ ಆಗಿದೆ.

‘ರಾಮಾಯಣ ಪಾರ್ಟ್ 1’ ಟ್ರೇಲರ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರನ್ನೊಳಗೊಂಡ ದೃಶ್ಯಗಳು ತುಂಡು ತುಂಡಾಗಿ ಹಲವಾರು ಬಾರಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕೆಲ ನೆಟ್ಟಿಗರು ಈ ವರೆಗೆ ಲೀಕ್ ಆಗಿರುವ ವಿಡಿಯೋಗಳನ್ನೆಲ್ಲ ಸಂಪಾದಿಸಿ ಎಲ್ಲ ಬಿಡಿ ದೃಶ್ಯಗಳನ್ನು ಜೋಡಿಸಿ ಪೂರ್ಣ ಟ್ರೈಲರ್ ಅನ್ನೇ ಮಾಡಿ ಹಂಚಿಕೊಂಡಿದ್ದಾರೆ.

ಜುಲೈ 18 ರಂದು ಹೊಸ ದೆಹಲಿಯಲ್ಲಿ ನಡೆದ ‘ಪ್ರಥಮ ಸಂಕಲ್ಪ’ ಕಾರ್ಯಕ್ರಮದಲ್ಲಿ ರಾಮಾಯಣದ ಟ್ರೇಲರ್ ಅನ್ನು ಪ್ರದರ್ಶಿಸಲಾಯಿತು, ಅದರ ನಂತರ ಅದರ ಕೆಲವು ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು. ಕಾಮಿಕ್-ಕಾನ್‌ನಲ್ಲಿ ಪ್ರದರ್ಶನಗೊಂಡ ನಂತರವೂ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಹರಿದಾಡಿದವು. ಅಂದಿನಿಂದ, ಎಕ್ಸ್ ಬಳಕೆದಾರರೊಬ್ಬರು ಸೋರಿಕೆಯಾದ ಕ್ಲಿಪ್‌ಗಳನ್ನು ಒಟ್ಟುಗೂಡಿಸಿ 2 ನಿಮಿಷಗಳ ಟ್ರೇಲರ್ ಮಾಡಿದ್ದಾರೆ. ಅಂತಿಮ ಟ್ರೇಲರ್ ಹೀಗೆಯೇ ಇರುತ್ತದೆಯೇ ಎಂಬುದು ತಿಳಿದಿಲ್ಲವಾದರೂ, ಕೆಲವು ಅಭಿಮಾನಿಗಳು ಈಗ ನೆಟ್ಟಿಗ ಮಾಡಿರುವ ಟ್ರೈಲರ್ ನೋಡಿ ಪ್ರಭಾವಿತರಾಗಿದ್ದಾರೆ. ಬೇಗನೆ ಟ್ರೈಲರ್ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್​​ಬೀರ್ ಕಪೂರ್ ಮಾಹಿತಿ

‘ರಾಮಾಯಣ’ ಸಿನಿಮಾದ ಟ್ರೈಲ್ ಮೊನ್ನೆ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಟ್ರೈಲರ್ ಬಿಡುಗಡೆ ಮುಂದೂಡಲ್ಪಟ್ಟಿದೆ. ವಿದ್ಯಾರ್ಥಿಗಳ ಮೇಲೆ ಆದ ಹಲ್ಲೆಯ ಕಾರಣಕ್ಕೆ ಟ್ರೈಲರ್ ಬಿಡುಗಡೆ ಮುಂದೂಡಲಾಗಿದೆ ಎನ್ನಲಾಗಿತ್ತು. ಆದರೆ ಸಿನಿಮಾದ ನಿರ್ಮಾಪಕ ಹಂಚಿಕೊಂಡಿದ್ದ ಪೋಸ್ಟ್​​​ನಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ಉಲ್ಲೇಖ ಇರಲಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಟ್ರೈಲರ್ ಬಿಡುಗಡೆ ಮುಂದೂಡಿರುವುದಾಗಿ ಮಾತ್ರವೇ ಇತ್ತು.

‘ರಾಮಾಯಣ’ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್​​ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಿತೀಶ್ ತಿವಾರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Sat, 25 July 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us