ರಣವೀರ್-ದೀಪಿಕಾ ಪೈಕಿ ಯಾರು ಹೆಚ್ಚು ಶ್ರೀಮಂತರು? ಇಲ್ಲಿದೆ ವಿವರ..
ರಣವೀರ್ ಸಿಂಗ್ ಅವರ 36ನೇ ಜನ್ಮದಿನದಂದು, ಅವರ ಹಾಗೂ ದೀಪಿಕಾ ಪಡುಕೋಣೆ ಅವರ ಆಸ್ತಿಯನ್ನು ಹೋಲಿಕೆ ಮಾಡಲಾಗಿದೆ. ರಣವೀರ್ ಅವರ ಆಸ್ತಿ 362 ಕೋಟಿ ರೂಪಾಯಿಗಳಿದ್ದರೆ, ದೀಪಿಕಾ ಅವರ ಆಸ್ತಿ 500 ಕೋಟಿ ರೂಪಾಯಿಗಿಂತ ಹೆಚ್ಚು. ಚಲನಚಿತ್ರಗಳು ಮತ್ತು ಜಾಹೀರಾತುಗಳ ಮೂಲಕ ಇಬ್ಬರೂ ಭಾರೀ ಸಂಪತ್ತನ್ನು ಗಳಿಸಿದ್ದಾರೆ.

ರಣವೀರ್ ಸಿಂಗ್ (Ranveer Singh) ಅವರಿಗೆ ಇಂದು (ಜುಲೈ 6) ಜನ್ಮದಿನ. ಅವರಿಗೆ ಎಲ್ಲರೂ ಬರ್ತ್ಡೇ ವಿಶ್ ಕೋರುತ್ತಾ ಇದ್ದಾರೆ. ಈ ವರ್ಷ ಅವರಿಗೆ ಬರ್ತ್ಡೇ ಮತ್ತಷ್ಟು ವಿಶೇಷ. ಇದಕ್ಕೆ ಕಾರಣ ಅವರ ಮನೆಗೆ ಮಗು ಬಂದಿರೋದು. ಹೀಗಾಗಿ ಬರ್ತ್ಡೇನ ಅದ್ದೂರಿಯಾಗಿ ಇವರು ಆಚರಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಕೆಲಸಗಳ ಜೊತೆ ಮಕ್ಕಳ ಆರೈಕೆಯಲ್ಲೂ ಇವರು ಬ್ಯುಸಿ ಇದ್ದಾರೆ. ಹಾಗಾದರೆ ಈ ದಂಪತಿ ಪೈಕಿ ಶ್ರೀಮಂತರು ಯಾರು? ಆ ಬಗ್ಗೆ ಇಲ್ಲಿದೆ ವಿವರ.
2011ರಿಂದ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಪ್ರೀತಿಸುತ್ತಿದ್ದರು. ಸಿನಿಮಾ ಸೆಟ್ನಲ್ಲಿ ಆದ ಇವರ ಭೇಟಿ ಪ್ರೀತಿ ಕಡೆ ತಿರುಗಿತು. ಇವರು 2018ರಲ್ಲಿ ಇಟಲಿಯಲ್ಲಿ ವಿವಾಹ ಆದರು. ಈಗ ದೀಪಿಕಾ ಒಂದು ಮಗುವಿನ ತಾಯಿ. ಸದ್ಯ ಅವರು ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.
ರಣವೀರ್ ಸಿಂಗ್ ಅವರ ಒಟ್ಟೂ ಆಸ್ತಿ 362 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಪ್ರತಿ ಚಿತ್ರಕ್ಕೆ 20 ಕೋಟಿ ರೂಪಾಯಿ ಪಡೆಯುತ್ತಾರೆ. 2019ರಲ್ಲಿ ಇವರ ವರ್ಷದ ಆದಾಯ 21 ಕೋಟಿ ರೂಪಾಯಿ ಆಗಿತ್ತು. ಈಗ ಇದರಲ್ಲಿ ಗಣನೀಯ ಏರಿಕೆ ಕಂಡಿದೆ. ಹಲವು ಬ್ರ್ಯಾಂಡ್ಗಳಿಗೆ ರಣವೀರ್ ಸಿಂಗ್ ಅವರು ಅಂಬಾಸಿಡರ್ ಆಗಿದ್ದಾರೆ.
ದೀಪಿಕಾ ಹೆಚ್ಚು ಶ್ರೀಮಂತೆ..
ರಣವೀರ್ ಸಿಂಗ್ ಅವರಿಗಿಂತ ದೀಪಿಕಾ ಪಡುಕೋಣೆ ಅವರು ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ರಣವೀರ್ಗಿಂತ ಹೆಚ್ಚಿನ ಯಶಸ್ವಿ ಚಿತ್ರವನ್ನು ಇವರು ನೀಡಿದ್ದಾರೆ. ಬ್ರ್ಯಾಂಡ್ಗಳ ವಿಚಾರದಲ್ಲೂ ಅಷ್ಟೇ ಇವರು ಹೆಚ್ಚಿನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅವರು ಚಿತ್ರಕ್ಕೆ 10+ ಕೋಟಿ ರೂಪಾಯಿ ಪಡೆಯುತ್ತಾರೆ. ಹೀರೋಯಿನ್ ಕ್ಯಾರೆಕ್ಟರ್ಗೂ ಪ್ರಾಮುಖ್ಯತೆ ಇರೋ ಸಿನಿಮಾಗಳನ್ನೇ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ದೀಪಿಕಾ ಪಡುಕೋಣೆ ಅವರ ಒಟ್ಟೂ ಆಸ್ತಿ 500 ಕೋಟಿ ರೂಪಾಯಿ ಮೇಲಿದೆ. ಅಂದರೆ ಇವರಿಬ್ಬರಿಂದ ಸೇರಿದರೆ ಸುಮಾರು 860+ ಕೋಟಿ ರೂಪಾಯಿ ಆಗಲಿದೆ.
ಇದನ್ನೂ ಓದಿ: ‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್
ರಣವೀರ್ ಸಿಂಗ್ ಅವರು ‘ಡಾನ್ 3’ ಚಿತ್ರದಲ್ಲಿ ನಟಿಸಬೇಕಿದೆ. ಆದರೆ, ಸಿನಿಮಾದ ಕೆಲಸಗಳು ಸಾಕಷ್ಟು ವಿಳಂಬ ಆಗಿವೆ. ಇದಕ್ಕೆ ಅಭಿಮಾನಿಗಳಿಗೆ ಬೇಸರ ಇದೆ. ಅವರ ಸಿನಿಮಾಗಳ ಬಗ್ಗೆ ಇಂದು ಅಪ್ಡೇಟ್ಗಳು ಸಿಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.