AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ರಷ್ಯಾದಲ್ಲೂ ರಶ್ಮಿಕಾ ಮಂದಣ್ಣ ಹವಾ; ಮತ್ತೆ ಹೆಚ್ಚಲಿದೆ ‘ಪುಷ್ಪ’ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​

Allu Arjun | Pushpa Movie: ‘ಪುಷ್ಪ’ ಚಿತ್ರದ ರಷ್ಯನ್​ ರಿಲೀಸ್​ ಬಗ್ಗೆ ಸಿನಿಮಾದ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈ ವಿಚಾರ ಹೆಮ್ಮೆ ತಂದಿದೆ.

Rashmika Mandanna: ರಷ್ಯಾದಲ್ಲೂ ರಶ್ಮಿಕಾ ಮಂದಣ್ಣ ಹವಾ; ಮತ್ತೆ ಹೆಚ್ಚಲಿದೆ ‘ಪುಷ್ಪ’ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​
ರಶ್ಮಿಕಾ ಮಂದಣ್ಣ
TV9 Web
| Updated By: ಮದನ್​ ಕುಮಾರ್​|

Updated on: Nov 29, 2022 | 7:30 AM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ‘ಪುಷ್ಪ’ ಸಿನಿಮಾದಿಂದ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು. ಹಿಂದಿಗೆ ಡಬ್​ ಆಗಿ ತೆರೆಕಂಡ ಆ ಚಿತ್ರದ ಗೆಲುವಿನ ಬಳಿಕ ಅವರಿಗೆ ಬಾಲಿವುಡ್​ನಿಂದಲೂ ಆಫರ್​ಗಳು ಬರಲು ಆರಂಭಿಸಿದವು. ಅಷ್ಟೇ ಅಲ್ಲ, ‘ಪುಷ್ಪ’ (Pushpa Movie) ಸಿನಿಮಾದಿಂದಾಗಿ ರಶ್ಮಿಕಾ ಮಂದಣ್ಣ ಅವರು ರಷ್ಯಾದಲ್ಲೂ ಫೇಮಸ್​ ಆಗಲಿದ್ದಾರೆ! ಹೌದು, ಈ ಸಿನಿಮಾ ಶೀಘ್ರದಲ್ಲೇ ರಷ್ಯನ್​ ಭಾಷೆಯಲ್ಲಿ ರಿಲೀಸ್​ ಆಗಲಿದೆ. ಅದರ ಪ್ರೀಮಿಯರ್​ ಶೋ ಸಲುವಾಗಿ ಇಡೀ ಚಿತ್ರತಂಡ ರಷ್ಯಾಗೆ ತೆರಳಲಿದೆ. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್​ (Allu Arjun), ನಿರ್ದೇಶಕ ಸುಕುಮಾರ್​ ಸೇರಿದಂತೆ ಅನೇಕರು ರಷ್ಯಾದಲ್ಲಿ ಈ ಚಿತ್ರದ ಪ್ರಚಾರ ಮಾಡಲಿದ್ದಾರೆ.

ಭಾರತದಲ್ಲಿ ‘ಪುಷ್ಪ’ ಚಿತ್ರ ತೆರೆಕಂಡಿದ್ದು 2021ರ ಡಿಸೆಂಬರ್​ 17ರಂದು. ಅದಾಗಿ ಒಂದು ವರ್ಷ ಕಳೆಯುವುದಕ್ಕೂ ಮುನ್ನವೇ ಈ ಸಿನಿಮಾ ರಷ್ಯಾದ ಮಾರುಕಟ್ಟೆಯಲ್ಲಿ ಕಮಾಯಿ ಮಾಡಲು ಮುಂದಾಗಿದೆ. ರಷ್ಯನ್​ ಭಾಷೆಗೆ ಡಬ್​ ಮಾಡಿ ರಿಲೀಸ್​ ಮಾಡಲು ದಿನಾಂಕ​ ನಿಗದಿ ಆಗಿದೆ. ಡಿಸೆಂಬರ್​ 8ರಂದು ರಷ್ಯಾದ ಅನೇಕ ಕಡೆಗಳಲ್ಲಿ ಈ ಚಿತ್ರ ತೆರೆಕಾಣಲಿದೆ. ಅದಕ್ಕೂ ಮುನ್ನ ಡಿ.1ರಂದು ಮಾಸ್ಕೋ ಹಾಗೂ ಡಿ.3ರಂದು ಪೀಟರ್ಸ್​ಬರ್ಗ್​ನಲ್ಲಿ ಈ ಚಿತ್ರದ ಪ್ರೀಮಿಯರ್​ ಶೋ ನಡೆಯಲಿದೆ. ‘ಪುಷ್ಪ’ ಚಿತ್ರದ ರಷ್ಯನ್​ ರಿಲೀಸ್​ ಬಗ್ಗೆ ಸಿನಿಮಾದ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈ ವಿಚಾರ ಹೆಮ್ಮೆ ತಂದಿದೆ.

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಕಳೆದ ವರ್ಷ ವಿಶ್ವಾದ್ಯಂತ ತೆರೆಕಂಡಿದ್ದ ಈ ಚಿತ್ರ 360 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿತ್ತು. ನಂತರ ಒಟಿಟಿಗೆ ಕಾಲಿಟ್ಟಿತು. ಈಗ ಮತ್ತೆ ರಷ್ಯಾದ ಚಿತ್ರಮಂದಿರಗಳಲ್ಲಿ ತನ್ನ ಅಬ್ಬರ ಶುರುಮಾಡಲಿದೆ. ರಷ್ಯಾದಲ್ಲಿನ ಕಲೆಕ್ಷನ್​ ಕೂಡ ಸೇರ್ಪಡೆಯಾದರೆ ಈ ಚಿತ್ರದ ಒಟ್ಟು ಬಾಕ್ಸ್​ ಆಫೀಸ್​ ಗಳಿಕೆಯ ಮೊತ್ತ ಹೆಚ್ಚಾಗಲಿದೆ. ಆ ಕಾರಣದಿಂದಲೂ ರಷ್ಯಾದ ರಿಲೀಸ್​ ತುಂಬ ಮುಖ್ಯವಾಗುತ್ತಿದೆ.

ಡಿಸೆಂಬರ್​ 1ರಂದು ರಷ್ಯಾದಲ್ಲಿ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ ನಡೆಯಲಿದೆ. ಭಾರತದ ಅನೇಕ ಸಿನಿಮಾಗಳು ಇದರಲ್ಲಿ ಪ್ರದರ್ಶನ ಆಗಲಿವೆ. ‘ಪುಷ್ಪ’ ಜೊತೆಗೆ ‘ದಂಗಲ್​’, ‘ವಾರ್​’, ‘ಆರ್​ಆರ್​ಆರ್​’, ‘ಮೈ ನೇಮ್​ ಈಸ್​ ಖಾನ್​’ ಮುಂತಾದ ಚಿತ್ರಗಳನ್ನು ಪ್ರದರ್ಶನ ಮಾಡಲಾಗುವುದು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಪುಷ್ಪ 2’ ಸಿನಿಮಾದ ಶೂಟಿಂಗ್​ನಲ್ಲಿ ಈಗಾಗಲೇ ಅಲ್ಲು ಅರ್ಜುನ್​ ಅವರು ಪಾಲ್ಗೊಂಡಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರದ ಕೆಲಸಗಳು ವಿಳಂಬ ಆಗುತ್ತಿವೆ. ‘ಪುಷ್ಪ 2’ ಬಗ್ಗೆ ಆದಷ್ಟು ಬೇಗ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್
ರೈಸಿಂಗ್ ಸ್ಟಾರ್ ಏಷ್ಯಾಕಪ್; ಕತಾರ್​ಗೆ ಹಾರಿದ ಭಾರತ ಯುವ ಪಡೆ
ರೈಸಿಂಗ್ ಸ್ಟಾರ್ ಏಷ್ಯಾಕಪ್; ಕತಾರ್​ಗೆ ಹಾರಿದ ಭಾರತ ಯುವ ಪಡೆ
ಇಸ್ಲಾಂ ಧರ್ಮಕ್ಕೆ ಕಳಂಕ ತರಬೇಡಿ; ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮನವಿ
ಇಸ್ಲಾಂ ಧರ್ಮಕ್ಕೆ ಕಳಂಕ ತರಬೇಡಿ; ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮನವಿ
ಭಾರತಕ್ಕೆ ಬರಲಿದೆ ಬೋಟ್ಸ್‌ವಾನಾದ 8 ಚೀತಾ
ಭಾರತಕ್ಕೆ ಬರಲಿದೆ ಬೋಟ್ಸ್‌ವಾನಾದ 8 ಚೀತಾ