AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ರಾಜ್ಯಗಳಲ್ಲಿ ನಡೆಯಲಿಲ್ಲ ರಶ್ಮಿಕಾ ಮ್ಯಾಜಿಕ್: ‘ಥಮ’ ಅಟ್ಟರ್ ಫ್ಲಾಪ್

Rashmika Mandanna: ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದಲ್ಲಿ ಇರುವ ಜನಪ್ರಿಯತೆ ಪರಿಗಣಿಸಿಯೇ ಕೆಲ ಹಿಂದಿ ಸಿನಿಮಾಗಳಲ್ಲಿ ಅವಕಾಶ ನೀಡಲಾಯ್ತು. ಆದರೆ ಅವರ ಮ್ಯಾಜಿಕ್ ದಕ್ಷಿಣದಲ್ಲಿ ವಿಶೇಷವಾಗಿ ರಶ್ಮಿಕಾರ ಅಪಾರ ಪ್ರೀತಿಯ ತೆಲುಗು ರಾಜ್ಯಗಳಲ್ಲಿಯೇ ನಡೆಯುತ್ತಿಲ್ಲ. ಇತ್ತೀಚೆಗೆ ಬಿಡುಗಡೆ ಆದ ಅವರ ಸಿನಿಮಾ ತೆಲುಗು ರಾಜ್ಯಗಳಲ್ಲಿ ಮಕಾಡೆ ಮಲಗಿದೆ.

ತೆಲುಗು ರಾಜ್ಯಗಳಲ್ಲಿ ನಡೆಯಲಿಲ್ಲ ರಶ್ಮಿಕಾ ಮ್ಯಾಜಿಕ್: ‘ಥಮ’ ಅಟ್ಟರ್ ಫ್ಲಾಪ್
Rashmika Mandanna
ಮಂಜುನಾಥ ಸಿ.
|

Updated on: Oct 23, 2025 | 3:55 PM

Share

ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡದ ಬಳಿಕ ತೆಲುಗಿ ಹೋದವರು ಮತ್ತೆ ಕನ್ನಡದತ್ತ ಮರಳಲೇ ಇತ್ತು. ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದರು. ಹಲವು ಸ್ಟಾರ್ ನಟರುಗಳೊಟ್ಟಿಗೆ ನಾಯಕಿಯಾಗಿ ನಟಿಸಿದರು. ತೆಲುಗು ರಾಜ್ಯದಲ್ಲೇ ನೆಲೆಗೊಳ್ಳಬೇಕು ಎಂಬ ಉಮೇದಿನಿಂದ ತಾವು ಹೈದರಾಬಾದ್​​ನವರು ಎಂದು ಸಹ ಹೇಳಿಕೊಂಡರು. ಆ ಬಳಿಕ ಬಾಲಿವುಡ್​ಗೆ ಪದಾರ್ಪಣೆ ಮಾಡಿ ಅಲ್ಲಿಯೂ ಯಶಸ್ಸಿನ ಮೇಲೆ ಯಶಸ್ಸು ಗಳಿಸಿದರು. ರಶ್ಮಿಕಾರಿಗೆ ದಕ್ಷಿಣದಲ್ಲಿ ಇರುವ ಜನಪ್ರಿಯತೆ ಪರಿಗಣಿಸಿಯೇ ಕೆಲ ಹಿಂದಿ ಸಿನಿಮಾಗಳಲ್ಲಿ ಅವಕಾಶ ನೀಡಲಾಯ್ತು. ಆದರೆ ಅವರ ಮ್ಯಾಜಿಕ್ ದಕ್ಷಿಣದಲ್ಲಿ ವಿಶೇಷವಾಗಿ ರಶ್ಮಿಕಾರ ಅಪಾರ ಪ್ರೀತಿಯ ತೆಲುಗು ರಾಜ್ಯಗಳಲ್ಲಿಯೇ ನಡೆಯುತ್ತಿಲ್ಲ.

ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ನಟನೆಯ ‘ಥಮ’ ಹಿಂದಿ ಸಿನಿಮಾ ಬಿಡುಗಡೆ ಆಗಿದೆ. ರಶ್ಮಿಕಾ ಮಂದಣ್ಣ ಇದ್ದಾರೆಂಬ ಕಾರಣಕ್ಕೆ ತೆಲುಗು ರಾಜ್ಯಗಳಲ್ಲಿಯೂ ಸಿನಿಮಾ ಅನ್ನು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಫಲಿತಾಂಶ ಮಾತ್ರ ಸೊನ್ನೆ. ‘ಥಮ’ ಸಿನಿಮಾಕ್ಕೆ ತೆಲುಗು ರಾಜ್ಯಗಳಲ್ಲಿ ಜನರೇ ಇಲ್ಲ. ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ರಶ್ಮಿಕಾರ ತೆಲುಗು ಅಭಿಮಾನಿಗಳು ಸಹ ಚಿತ್ರಮಂದಿರದತ್ತ ಸುಳಿದಿಲ್ಲ ಎನ್ನುತ್ತಿವೆ ವರದಿಗಳು.

ಇದೇ ಮಂಗಳವಾರ ಬಿಡುಗಡೆ ಆದ ಈ ಸಿನಿಮಾ, ತೆಲುಗು ರಾಜ್ಯಗಳಲ್ಲಿ ಎರಡು ದಿನಗಳಲ್ಲಿ ಕೇವಲ 35 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಹಲವಾರು ಚಿತ್ರಮಂದಿರಗಳಲ್ಲಿ ಕೇವಲ ಒಂದು ದಿನದ ಶೋ ಬಳಿಕ ಸಿನಿಮಾ ಅನ್ನು ತೆಗೆದು ಹಾಕಲಾಗಿದೆ. ರಶ್ಮಿಕಾ ಮೇಲೆ ನಂಬಿಕೆ ಇಟ್ಟು ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಿದವರಿಗೆ ಭಾರಿ ದೋಖಾ ಆಗಿದೆ.

ಇದನ್ನೂ ಓದಿ:‘ಥಮ’ ಸಿನಿಮಾ ಶೂಟಿಂಗ್ ಚಿತ್ರಗಳ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಸಾಮಾನ್ಯವಾಗಿ ಬಾಲಿವುಡ್​ನ ಸಿನಿಮಾಗಳು ದಕ್ಷಿಣದಲ್ಲಿ ಒಳ್ಳೆಯ ಪ್ರದರ್ಶನ ಕಾಣುವುದಿಲ್ಲ. ಇದೇ ಕಾರಣಕ್ಕೆ ಬಾಲಿವುಡ್​​ನವರು ದಕ್ಷಿಣದ ಸ್ಟಾರ್​​ಗಳನ್ನೇ ಹಾಕಿಕೊಂಡು ಹಿಂದಿ ಸಿನಿಮಾ ಮಾಡಿ ಅವನ್ನು ದಕ್ಷಿಣದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಅದೂ ಸಹ ವರ್ಕ್ ಆಗುತ್ತಿಲ್ಲ. ಇದೇ ಸೂತ್ರದಡಿ ಜೂ ಎನ್​​ಟಿಆರ್ ಹಾಗೂ ಹೃತಿಕ್ ರೋಷನ್ ಅನ್ನು ಒಟ್ಟಾಗಿ ಹಾಕಿಕೊಂಡು ‘ವಾರ್ 2’ ಸಿನಿಮಾ ಮಾಡಿದರು. ಜೂ ಎನ್​​ಟಿಆರ್ ಅಂಥಹಾ ದೊಡ್ಡ ಸ್ಟಾರ್ ಇದ್ದಾಗಿಯೂ ಈ ಸಿನಿಮಾ ತೆಲುಗು ರಾಜ್ಯಗಳಲ್ಲಿ ಹಿಟ್ ಎನಿಸಿಕೊಳ್ಳಲಿಲ್ಲ. ಈಗ ರಶ್ಮಿಕಾರ ಸಿನಿಮಾ ಸಹ ಹಿಟ್ ಆಗಿಲ್ಲ.

ಆದರೆ ಇದೇ ‘ಥಮ’ ಸಿನಿಮಾ ಬಾಲಿವುಡ್​​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ‘ಥಮ’ ಸಿನಿಮಾ ಎರಡು ದಿನಗಳಿಗೆ 42 ಕೋಟಿಗೂ ಹೆಚ್ಚಿನ ಮೊತ್ತ ಗಳಿಸಿದೆ. ಇದು ಸಾಧಾರಣ ಮೊತ್ತವೇನಲ್ಲ. ಮೊದಲ ದಿನ ಈ ಸಿನಿಮಾ 24 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಎರಡನೇ ದಿನ 18 ಕೋಟಿ ಗಳಿಸಿದೆ. ‘ಥಮ’ ಸಿನಿಮಾ, ಮ್ಯಾಡ್​​ಲಾಕ್ ನಿರ್ಮಾಣ ಸಂಸ್ಥೆಯ ಸಿನಿಮಾ ಆಗಿದ್ದು, ಆಯುಷ್ಮಾನ್ ಖುರಾನಾ, ಪರೇಶ್ ರಾವಲ್ ಮತ್ತು ನವಾಜುದ್ಧೀನ್ ಸಿದ್ಧಿಖಿ ಸಹ ಮುಖ್ಯ ಪಾತ್ರಗಳಲ್ಲಿದ್ದಾರೆ. ಸಿನಿಮಾನಲ್ಲಿ ವರುಣ್ ಧವನ್ ಸೇರಿದಂತೆ ಇನ್ನೂ ಕೆಲವರ ಕ್ಯಾಮಿಯೋ ಸಹ ಇವೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!