Rashmika Mandanna: ಇಬ್ಬರು ಸ್ಟಾರ್ ನಟರ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ
Rashmika Mandanna: ನಟಿ ರಶ್ಮಿಕಾ ಮಂದಣ್ಣಗೆ ಭರ್ಜರಿ ಆಫರ್ ಒಂದು ಲಭಿಸಿದೆ. ಇಬ್ಬರು ಸ್ಟಾರ್ ನಟರು ಒಟ್ಟಿಗೆ ನಟಿಸುತ್ತಿರುವ ಸಿನಿಮಾದಲ್ಲಿ ರಶ್ಮಿಕಾಗೆ ನಾಯಕಿ ಪಾತ್ರ ದೊರೆತಿದೆ.
ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ತೆಲುಗಿನಲ್ಲಿ ಅವಕಾಶಗಳು ಕಡಿಮೆ ಆಗಿವೆ, ಅವರ ಗಮನ ಈಗೇನಿದ್ದರು ಬಾಲಿವುಡ್ ಕಡೆಗೆ ಮಾತ್ರ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೆ ರಶ್ಮಿಕಾಗೆ ಬಂಪರ್ ಆಫರ್ ಒಂದು ಬಂದೊದಗಿದೆ. ತಮಿಳಿನ ಸ್ಟಾರ್ ನಟ, ತೆಲುಗಿನ ಸ್ಟಾರ್ ನಟ ಒಟ್ಟಿಗೆ ನಟಿಸುತ್ತಿರುವ ಸಿನಿಮಾದಲ್ಲಿ ನಟಿಸುವ ಅವಕಾಶ ರಶ್ಮಿಕಾ ಮಂದಣ್ಣಗೆ ಲಭಿಸಿದೆ. ಈ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ತೆಲುಗಿನ ಸ್ಟಾರ್ ನಿರ್ದೇಶಕ (Director) ಎಂಬುದು ಮತ್ತೊಂದು ವಿಶೇಷ.
‘ಹ್ಯಾಪಿ ಡೇಸ್’, ‘ಲೀಡರ್’, ‘ಗೋಧಾವರಿ’, ‘ಫಿದಾ’, ‘ಲವ್ ಸ್ಟೋರಿ’ ಅಂಥಹಾ ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಶೇಖರ್ ಕಮ್ಮುಲ ಇದೇ ಮೊದಲ ಬಾರಿಗೆ ತಮಿಳು-ತೆಲುಗು ಬೈಲಿಂಗ್ವಲ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಕ್ಕೆ ತಮಿಳಿನಿಂದ ಒಬ್ಬರು ಹಾಗೂ ತೆಲುಗು ಇಂದ ಒಬ್ಬರು ಸೂಪರ್ ಸ್ಟಾರ್ಗಳನ್ನು ಆರಿಸಿಕೊಂಡಿದ್ದಾರೆ.
ಶೇಖರ್ ಕಮ್ಮುಲ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಧನುಶ್ ನಾಯಕನಾಗಿ ನಟಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಸಹ ನಟಿಸುತ್ತಿದ್ದು ಈ ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾಕ್ಕೆ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ.
ಶೇಖರ್ ಕಮ್ಮುಲ ಸಿನಿಮಾಗಳಲ್ಲಿ ನಾಯಕಿ ಪಾತ್ರಗಳು ಬಹಳ ಗಟ್ಟಿಯಾಗಿರುತ್ತವೆ. ಹಾಗಾಗಿ ರಶ್ಮಿಕಾ ಮಂದಣ್ಣಗೆ ಈ ಅವಕಾಶ ಸಿಕ್ಕಿರುವುದು ಅವರ ವೃತ್ತಿ ಜೀವನದ ಪ್ರಮುಖ ನಾಯಕಿ ಪಾತ್ರ ಇದಾಗುವ ಸಂಭವ ಇದೆ. ಇನ್ನು ಶೇಖರ್ ಕಮ್ಮುಲ ಅವರ ಈ ಸಿನಿಮಾ ರಾಜಕೀಯ ವಿಷಯವನ್ನು ಆಧರಿಸಿದ್ದು, ಕಮ್ಮುಲ ಅವರೇ ಈ ಹಿಂದೆ ‘ಲೀಡರ್’ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಬಾರಿ ಧನುಶ್ಗೆ ಎಂಥಹಾ ರಾಜಕೀಯ ಸಿನಿಮಾವನ್ನು ಹೆಣೆಯಲಿದ್ದಾರೆ ಎಂಬುದು ಕುತೂಹಲ.
ಧನುಶ್ ಅವರ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಅದಾದ ಬಳಿಕ ಧನುಶ್, ಶೇಖರ್ ಕಮ್ಮುಲ ಜೊತೆಗಿನ ಸಿನಿಮಾದ ಶೂಟಿಂಗ್ ಆರಂಭಿಸಲಿದ್ದಾರೆ. ಇನ್ನು ನಾಗಾರ್ಜುನ, ಬಿಗ್ಬಾಸ್ನಲ್ಲಿ ತೊಡಗಿಸಿಕೊಂಡಿದ್ದು, ಅದರ ನಡುವೆಯೇ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ