AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಹೊಸ ಚಿತ್ರದ ಮೊದಲ ದಿನದ ಕಲೆಕ್ಷನ್ 1 ಕೋಟಿ; ಮುಗ್ಗರಿಸಿದ ನಟಿ

ನಟಿ ರಶ್ಮಿಕಾ ಮಂದಣ್ಣ ಅವರ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಮೊದಲ ದಿನ ಕೇವಲ 1 ಕೋಟಿ ರೂ. ಗಳಿಸಿ ನಿರಾಸೆ ಮೂಡಿಸಿದೆ. ಸ್ಟಾರ್ ಹೀರೋಗಳ ಜೊತೆ ನಟಿಸಿ ಯಶಸ್ಸು ಕಂಡಿದ್ದ ರಶ್ಮಿಕಾ, ಈ ಬಾರಿ ಭಿನ್ನ ಚಿತ್ರದ ಮೂಲಕ ಸವಾಲು ಎದುರಿಸಿದ್ದಾರೆ. ಕಡಿಮೆ ಪ್ರಚಾರ, ಸಣ್ಣ ಬಜೆಟ್‌ನಿಂದಾಗಿ ಚಿತ್ರ ನಿರೀಕ್ಷಿತ ಗಳಿಕೆ ಕಾಣಲಿಲ್ಲ. ಆದರೂ ನಿರ್ಮಾಪಕರಿಗೆ ದೊಡ್ಡ ನಷ್ಟವಾಗುವ ಸಾಧ್ಯತೆ ಕಡಿಮೆ.

ರಶ್ಮಿಕಾ ಹೊಸ ಚಿತ್ರದ ಮೊದಲ ದಿನದ ಕಲೆಕ್ಷನ್ 1 ಕೋಟಿ;  ಮುಗ್ಗರಿಸಿದ ನಟಿ
ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on:Nov 08, 2025 | 7:06 AM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ಒಂದಷ್ಟು ಜನರು ಚಿತ್ರಮಂದಿರಕ್ಕೆ ನುಗ್ಗುತ್ತಾರೆ. ಒಂದಷ್ಟು ಒಳ್ಳೆಯ ಕಲೆಕ್ಷನ್ ಆಗುತ್ತದೆ ಎಂಬ ನಂಬಿಕೆ ನಿರ್ಮಾಪಕರದ್ದು. ಈಗ ಅವರ ನಟನೆಯ ‘ದಿ ಗರ್ಲ್​​ಫ್ರೆಂಡ್’ ಸಿನಿಮಾ ರಿಲೀಸ್ ಆಗಿದೆ. ಆದರೆ, ಈ ಚಿತ್ರ ಅಂದುಕೊಂಡಂತೆ ಕಲೆಕ್ಷನ್ ಮಾಡಿಲ್ಲ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಕೇವಲ 1 ಕೋಟಿ ರೂಪಾಯಿ ಅನ್ನೋದು ಬೇಸರದ ವಿಚಾರ.

ರಶ್ಮಿಕಾ ಮಂದಣ್ಣ ಅವರು ಇಷ್ಟು ದಿನ ನಟಿಸಿದ ಸಿನಿಮಾಗಳೆಲ್ಲವೂ ಸ್ಟಾರ್ ಹೀರೋಗಳು ಇರುವಂತಹ ಸಿನಿಮಾಗಳೇ ಆಗಿತ್ತು. ಬಜೆಟ್ ಕೂಡ ಜೋರಾಗೇ ಇರುತ್ತಿತ್ತು. ಇನ್ನು, ರಿಲೀಸ್​ಗೂ ಮೊದಲು ಒಂದು ಅಬ್ಬರದ ಜೊತೆ ಚಿತ್ರ ಬಿಡುಗಡೆ ಆಗುತ್ತಿತ್ತು. ಆದರೆ, ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಮಾತ್ರ ಇದಕ್ಕೆ ಭಿನ್ನ. ಈ ಚಿತ್ರ ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆದ ಹೊರತಾಗಿಯೂ ಸಿನಿಮಾ ಮೊದಲ ದಿನ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲು ವಿಫಲವಾಗಿದೆ.

ರಶ್ಮಿಕಾ ನಟನೆಯ ‘ಅನಿಮಲ್’ (900 ಕೋಟಿ ರೂಪಾಯಿ), ‘ಪುಷ್ಪ 2’ (1742 ಕೋಟಿ ರೂಪಾಯಿ), ‘ಛಾವಾ’ (800 ಕೋಟಿ ರೂಪಾಯಿ), ‘ಥಾಮಾ’ (120 ಕೋಟಿ ರೂಪಾಯಿ) ಸಿನಿಮಾಗಳು ಒಳ್ಳೆಯ ಗಳಿಕೆ ಮಾಡಿದವು. ಈ ಎಲ್ಲಾ ಸಿನಿಮಾಗಳಿಗೆ ಭರ್ಜರಿ ಪ್ರಚಾರ ಕೊಡಲಾಗಿತ್ತು. ಆದರೆ, ‘ದಿ ಗರ್ಲ್​ಫ್ರೆಂಡ್’ ಚಿತ್ರ ಹಾಗಲ್ಲ. ಈ ಚಿತ್ರದಲ್ಲಿ ಕನ್ನಡದ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೂಡ ನೀಡಿಲ್ಲ. ಜೊತೆಗೆ ಇದು ರೆಗ್ಯುಲರ್ ಸಿನಿಮಾ ಕೂಡ ಅಲ್ಲ. ಹೀಗಾಗಿ, ಇದು ಜನರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ರಶ್ಮಿಕಾ ಮೊದಲ ಬಾರಿಗೆ ಮುಗ್ಗರಿಸಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಬಗ್ಗೆ ಹೆಮ್ಮೆ ಇದೆ’: ಕನ್ನಡಿಗ ದೀಕ್ಷಿತ್ ಶೆಟ್ಟಿ ಬಗ್ಗೆ ರಶ್ಮಿಕಾ ಮಂದಣ್ಣ ಮಾತು

ಇನ್ನು, ‘ದಿ ಗರ್ಲ್​ಫ್ರೆಂಡ್’ ಚಿತ್ರದ ಬಜೆಟ್ ಕೂಡ ಕಡಿಮೆಯೇ. ಹೀಗಾಗಿ, ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಆಗೋದು ಅನುಮಾನ ಎಂದೇ ಹೇಳಲಾಗುತ್ತಾ ಇದೆ. ಈ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟಾಗುತ್ತದೆ ಎನ್ನುವ ಕುತೂಹಲ ಮೂಡಿದೆ. ‘ದಿ ಗರ್ಲ್​ಫ್ರೆಂಡ್’ ಸಿನಿಮಾನ ರಾಹುಲ್ ರವೀಂದ್ರನ್ ನಿರ್ದೇಶನ ಮಾಡಿದ್ದಾರೆ. ಕಪಲ್ ಲವ್​ಸ್ಟೋರಿನ ಇದು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Sat, 8 November 25

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More