AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್​ ಚಿತ್ರದಲ್ಲಿ ಮಸ್ತ್​ ಸಾಂಗ್​; ‘ಟೈಗರ್ ನಾಗೇಶ್ವರ ರಾವ್​’ ಸಿನಿಮಾದಲ್ಲಿ ನೂಪುರ್ ಜತೆ ರವಿತೇಜ ಡ್ಯಾನ್ಸ್​

‘ಟೈಗರ್​ ನಾಗೇಶ್ವರ ರಾವ್​’ ಸಿನಿಮಾದ ‘ಏಕ್ ಧಮ್ ಏಕ್ ಧಮ್..’ ಹಾಡಿನ ಕನ್ನಡ ವರ್ಷನ್​ಗೆ ಸಂತೋಷ್ ವಿಶ್ವರತ್ನ ಅವರು ಸಾಹಿತ್ಯ ಬರೆದಿದ್ದಾರೆ. ಅನಿರುದ್ಧ್ ಶಾಸ್ತ್ರೀ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡಿನಲ್ಲಿ ರವಿತೇಜ ಹಾಗೂ ನೂಪುರ್ ಸನೋನ್ ಅವರು ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಮಾಸ್​ ಚಿತ್ರದಲ್ಲಿ ಮಸ್ತ್​ ಸಾಂಗ್​; ‘ಟೈಗರ್ ನಾಗೇಶ್ವರ ರಾವ್​’ ಸಿನಿಮಾದಲ್ಲಿ ನೂಪುರ್ ಜತೆ ರವಿತೇಜ ಡ್ಯಾನ್ಸ್​
ನೂಪುರ್​ ಸನೋನ್​, ರವಿ ತೇಜ
ಮದನ್​ ಕುಮಾರ್​
|

Updated on: Sep 06, 2023 | 5:46 PM

Share

ಈಗಾಗಲೇ ‘ಟೈಗರ್​ ನಾಗೇಶ್ವರ ರಾವ್​’ (Tiger Nageswara Rao) ಸಿನಿಮಾದ ಪೋಸ್ಟರ್​ಗಳು ಧೂಳೆಬ್ಬಿಸಿವೆ. ಇದು ಪಕ್ಕಾ ಮಾಸ್​ ಸಿನಿಮಾ. ಅದರಲ್ಲೊಂದು ಮಸ್ತ್​ ಸಾಂಗ್​ ಸೇರಿಸುವ ಕೆಲಸ ಆಗಿದೆ. ಟಾಲಿವುಡ್​ನಲ್ಲಿ ರವಿತೇಜ (Ravi Teja) ಅವರು ಮಾಸ್​ ಮಹಾರಾಜ ಎಂದೇ ಫೇಮಸ್​. ಅದಕ್ಕೆ ತಕ್ಕಂತೆಯೇ ಈ ಸಿನಿಮಾ ಮೂಡಿಬರುತ್ತಿದೆ. ಈಗ ಈ ಚಿತ್ರದಿಂದ ಮೊದಲ ಸಾಂಗ್​ ರಿಲೀಸ್ ಮಾಡಲಾಗಿದೆ. ‘ಏಕ್ ಧಮ್ ಏಕ್ ಧಮ್..’ ಎಂದು ಶುರುವಾಗುವ ಈ ಗೀತೆಯನ್ನು 5 ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ ಈ ಹಾಡಿಗೆ ಮಿಲಿಯನ್​ಗಟ್ಟಲೆ ವೀವ್ಸ್​ ಸಿಗುತ್ತಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ (Pan Indian Movie) ಆಗಿದ್ದು, ಸಾಕಷ್ಟು ಕೌತುಕ ಮೂಡಿಸಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್​ ಆಗಲಿದ್ದು, ಭರ್ಜರಿ ಓಪನಿಂಗ್​ ಪಡೆಯುವ ನಿರೀಕ್ಷೆ ಇದೆ.

‘ಟೈಗರ್​ ನಾಗೇಶ್ವರ ರಾವ್​’ ಸಿನಿಮಾದ ‘ಏಕ್ ಧಮ್ ಏಕ್ ಧಮ್..’ ಹಾಡಿನ ಕನ್ನಡ ವರ್ಷನ್​ಗೆ ಸಂತೋಷ್ ವಿಶ್ವರತ್ನ ಅವರು ಸಾಹಿತ್ಯ ಬರೆದಿದ್ದಾರೆ. ಅನಿರುದ್ಧ್ ಶಾಸ್ತ್ರೀ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡಿನಲ್ಲಿ ರವಿತೇಜ ಹಾಗೂ ನೂಪುರ್ ಸನೋನ್ ಅವರು ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ದಾರೆ. ಈ ಡ್ಯಾನ್ಸ್​ ನಂಬರ್​ಗೆ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಜಿ.ವಿ. ಪ್ರಕಾಶ್ ಕುಮಾರ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿತೇಜ ಅವರ ಅಭಿಮಾನಿಗಳಿಗೆ ಈ ಹಾಡು ಇಷ್ಟವಾಗಿದೆ. ‘ಕಾರ್ತಿಕೇಯ 2’, ‘ದಿ ಕಾಶ್ಮೀರ್​​ ಫೈಲ್ಸ್ ’ ಮುಂತಾದ ಸಿನಿಮಾಗಳನ್ನು ನಿರ್ಮಿಸಿರುವ ಅಭಿಷೇಕ್ ಅಗರ್​ವಾಲ್ ಅವರು ‘ಅಭಿಷೇಕ್​ ಅಗರ್ವಾಲ್ ಆರ್ಟ್ಸ್’ ಸಂಸ್ಥೆ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದು, ವಂಶಿ ಅವರು ನಿರ್ದೇಶನ ಮಾಡಿದ್ದಾರೆ.

‘ಏಕ್ ಧಮ್ ಏಕ್ ಧಮ್..’ ಹಾಡು:

ಈ ಸಿನಿಮಾದ ಕಥೆ ಬಗ್ಗೆಯೂ ಸುಳಿವು ಬಿಟ್ಟುಕೊಡಲಾಗಿದೆ. 70ರ ಕಾಲಘಟ್ಟದ ಹೈದರಾಬಾದ್​ನ ಸ್ಟುವರ್ಟ್ ಪುರಂ ಹಳ್ಳಿಯಲ್ಲಿದ್ದ ನಟೋರಿಯಸ್​ ಕಳ್ಳನ ಜೀವನಾಧಾರಿತವಾಗಿ ಈ ಸಿನಿಮಾ ಮೂಡಿಬರುತ್ತಿದೆ. ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಭಿನ್ನವಾಗಿ ರವಿತೇಜ ಅವರು ಕಾಣಿಸಿಕೊಳ್ಳಲಿದ್ದಾರೆ. ಅವರ ಗೆಟಪ್, ಬಾಡಿ ಲಾಂಗ್ವೇಜ್ ಪೂರ್ತಿ ಬದಲಾಗಿದೆ. ನೂಪುರ್ ಸನೋನ್ ಹಾಗೂ ಗಾಯತ್ರಿ ಭಾರದ್ವಾಜ್ ಅವರು ನಾಯಕಿಯರಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Tiger Nageswara Rao: ‘ಟೈಗರ್ ನಾಗೇಶ್ವರ ರಾವ್’ ಚಿತ್ರಕ್ಕೆ ಸಾಥ್​ ನೀಡಿದ ಶಿವಣ್ಣ; ಬಿಡುಗಡೆ ಆಯ್ತು ಖಡಕ್​ ಪೋಸ್ಟರ್​

ಆರ್. ಮಧಿ ಅವರು ‘ಟೈಗರ್​ ನಾಗೇಶ್ವರ ರಾವ್​’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಶ್ರೀಕಾಂತ್ ವೀಸಾ ಅವರು ಸಂಭಾಷಣೆ ಬರೆದಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಎಂಬ ಕಾರಣದಿಂದ ಈ ಸಿನಿಮಾದ ಮೇಲಿನ ಹೈಪ್​ ಹೆಚ್ಚಿದೆ. ಅವಿನಾಶ್ ಕೊಲ್ಲಾ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮಯಾಂಕ್ ಸಿಂಘಾನಿಯಾ ಅವರು ಈ ಸಿನಿಮಾಗೆ ಸಹ ನಿರ್ಮಾಪಕರಾಗಿದ್ದಾರೆ. ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾ ಅಕ್ಟೋಬರ್ 20ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್