ಸುಶಾಂತ್ ಜತೆ ಅವರ ಅಕ್ಕ-ಭಾವನೂ ಡ್ರಗ್ಸ್​ ಸೇವಿಸಿದ್ದಾರೆ; ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ರಿಯಾ ಚಕ್ರವರ್ತಿ

Sushant Singh Rajput: ಸುಶಾಂತ್​ ಸಿಂಗ್​ ರಜಪೂತ್​ ಅವರ ಅಕ್ಕ-ಭಾವ ಕೂಡ ಮಾದಕ ವಸ್ತು ವ್ಯಸನಿಗಳಾಗಿದ್ದರು ಎಂದು ರಿಯಾ ಚಕ್ರವರ್ತಿ ಆರೋಪಿಸಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣ ಆಗಿದೆ.

ಸುಶಾಂತ್ ಜತೆ ಅವರ ಅಕ್ಕ-ಭಾವನೂ ಡ್ರಗ್ಸ್​ ಸೇವಿಸಿದ್ದಾರೆ; ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ರಿಯಾ ಚಕ್ರವರ್ತಿ
ಸುಶಾಂತ್​ ಸಿಂಗ್ ರಜಪೂತ್​, ರಿಯಾ ಚಕ್ರವರ್ತಿ
Edited By:

Updated on: Jun 07, 2021 | 4:23 PM

ಬಾಲಿವುಡ್​ನ ಖ್ಯಾತ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ತನಿಖೆ ಇನ್ನೂ ಕೊನೆ ಆಗಿಲ್ಲ. ಎನ್​ಸಿಬಿ, ಸಿಬಿಐ ಮತ್ತು ಜಾರಿ ನಿರ್ದೇಶನಾಯಲದ ಅಂತಿಮ ವರದಿ ಇನ್ನೂ ಸಲ್ಲಿಕೆ ಆಗಿಲ್ಲ. ಸದ್ಯ ತನಿಖೆ ನಡೆಯುತ್ತಿದ್ದು, ಎನ್​ಸಿಬಿ ಅಧಿಕಾರಿಗಳ ಮುಂದೆ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಒಪ್ಪಿಕೊಂಡ ಕೆಲವು ವಿಷಯಗಳು ಬಯಲಾಗುತ್ತಿವೆ. ಸುಶಾಂತ್​ ಸಾವಿನಲ್ಲಿ ರಿಯಾ ಕೈವಾಡ ಇದೆ ಎಂದು ಆರೋಪಿಸಿ ಸುಶಾಂತ್ ತಂದೆ ಕೆಕೆ ಸಿಂಗ್​ ದೂರು ನೀಡಿದ್ದರು. ಆದರೆ ತನಿಖೆ ವೇಳೆ ಸುಶಾಂತ್​ ಕುಟುಂಬದವರ ವಿರುದ್ಧವೇ ರಿಯಾ ಅನೇಕ ಪ್ರತ್ಯಾರೋಪಗಳನ್ನು ಮಾಡಿದ್ದಾರೆ.

ಸುಶಾಂತ್​ ಸಾವಿನ ಸುತ್ತ ಮಾದಕ ವಸ್ತು ಜಾಲದ ನಂಟು ಇರುವುದು ಬಹಳ ಬೇಗ ಗಮನಕ್ಕೆ ಬಂತು. ಸುಶಾಂತ್​ ಕೂಡ ಡ್ರಗ್ಸ್​ ಸೇವಿಸುತ್ತಿದ್ದರು ಎನ್ನಲಾಗಿದೆ. ಅದಕ್ಕೆ ಮುಖ್ಯ ಕಾರಣವೇ ರಿಯಾ ಚಕ್ರವರ್ತಿ ಎಂಬ ಆರೋಪ ಇದೆ. ಆದರೆ ಎನ್​ಸಿಬಿ ಮುಂದೆ ರಿಯಾ ಬೇರೆ ಹೇಳಿಕೆ ನೀಡಿದ್ದಾರೆ. ಸುಶಾಂತ್​ ಅಕ್ಕ-ಭಾವ ಕೂಡ ಮಾದಕ ವಸ್ತು ವ್ಯಸನಿಗಳಾಗಿದ್ದರು ಎಂದು ರಿಯಾ ಆರೋಪಿಸಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣ ಆಗಿದೆ.

‘ಸುಶಾಂತ್​ ಒಬ್ಬ ಡ್ರಗ್​ ಅಡಿಕ್ಟ್​ ಎಂಬುದು ಅವರ ಕುಟುಂಬದವರಿಗೂ ಗೊತ್ತಿತ್ತು. ಅವರ ಅಕ್ಕ ಪ್ರಿಯಾಂಕಾ ಮತ್ತು ಭಾವ ಸಿದ್ಧಾರ್ಥ್​ ಸುಶಾಂತ್ ಜೊತೆ ಸೇರಿಕೊಂಡು ಡ್ರಗ್ಸ್​ ಸೇವಿಸಿದ್ದಾರೆ. 2020ರ ಜೂ.8ರಂದು ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳಲು ಸುಶಾಂತ್​ಗೆ ಅವರ ಅಕ್ಕ ಪ್ರಿಯಾಂಕಾ ವಾಟ್ಸ್​ಆ್ಯಪ್​ ಮೆಸೇಜ್​ ಮೂಲಕ ತಿಳಿಸಿದ್ದರು. ಸುಶಾಂತ್​ಗೆ ಡಾ. ತರುಣ್​ ಎಂಬ ಹೃದ್ರೋಗ ತಜ್ಞರಿಂದ ಕೆಲವು ಮಾತ್ರೆಗಳನ್ನು ಕೊಡಿಸಿದ್ದರು. ಮನೋರೋಗ ತಜ್ಞರು ಸೂಚಿಸದ ಹೊರತು ಈ ಮಾತ್ರೆಗಳನ್ನು ಯಾರೂ ಕೊಡುವಂತಿಲ್ಲ’ ಎಂದು ತಮ್ಮ ಹೇಳಿಕೆಯಲ್ಲಿ ರಿಯಾ ತಿಳಿಸಿದ್ದಾರೆ.

ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ಬಗ್ಗೆಯೂ ಅವರು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ‘ಸಾರಾ ಅಲಿ ಖಾನ್​ ಬಳಿ ಯಾವಾಗಲೂ ಗಾಂಜಾ ಸುರುಳಿ ಇರುತ್ತಿತ್ತು. ಅದನ್ನೇ ಅವರು ನನಗೂ ಕೊಡಲು ಮುಂದಾಗಿದ್ದರು’ ಎಂದು ಎನ್​ಸಿಬಿ ಅಧಿಕಾರಿಗಳ ಮುಂದೆ ರಿಯಾ ಚಕ್ರವರ್ತಿ ಹೇಳಿದ್ದಾರೆ. ಅವರ ಹೇಳಿಕೆಯ ಪ್ರತಿಯು ಮಾಧ್ಯಮವೊಂದಕ್ಕೆ ಲಭ್ಯವಾಗಿದ್ದು, ಆ ಮೂಲಕ ಈ ವಿಚಾರಗಳು ಬಯಲಾಗಿವೆ.

ಇದನ್ನೂ ಓದಿ:

ಸೈಫ್​ ಪುತ್ರಿಯ ಗಾಂಜಾ ಪುರಾಣ ಬಯಲು ಮಾಡಿದ ರಿಯಾ ಚಕ್ರವರ್ತಿ; ಎನ್​ಸಿಬಿ ಮುಂದೆ ಶಾಕಿಂಗ್​ ಹೇಳಿಕೆ

ಸುಶಾಂತ್​ ಸಾವಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿರುವ ನೀಚರು; 3 ಮುಖ್ಯ ವಿಷಯ ತೆರೆದಿಟ್ಟ ಸಹೋದರಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us