AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆರಾಡಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ; ಸಾಧ್ಯವಾಗಿದ್ದು ಹೇಗೆ?

ರಿಷಬ್ ಶೆಟ್ಟಿ ಅವರು ಕುಂದಾಪುರದ ಕೆರಾಡಿಯಲ್ಲಿ ‘ಕಾಂತಾರ 2’ ಚಿತ್ರಕ್ಕಾಗಿ ಭವ್ಯ ಸೆಟ್ ನಿರ್ಮಿಸಿ, ಅದನ್ನು ಇದೀಗ ಫಿಲ್ಮ್ ಸಿಟಿಯಾಗಿ ಪರಿವರ್ತಿಸಿದ್ದಾರೆ. ಈ ಸಾಧನೆಯಿಂದ ಕರಾವಳಿ ಭಾಗದಲ್ಲಿ ಚಿತ್ರೀಕರಣಕ್ಕೆ ಹೊಸ ಆಯಾಮ ಸಿಕ್ಕಿದೆ. ‘ಕಾಂತಾರ’ ಯಶಸ್ಸಿನ ನಂತರ ಕರಾವಳಿಯ ಸಂಸ್ಕೃತಿ ಮತ್ತು ಸೌಂದರ್ಯವನ್ನು ಬೆಳ್ಳಿತೆರೆಯಲ್ಲಿ ಸೆರೆಹಿಡಿಯಲು ಇದೊಂದು ದೊಡ್ಡ ಹೆಜ್ಜೆಯಾಗಿದೆ.

ಕೆರಾಡಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ; ಸಾಧ್ಯವಾಗಿದ್ದು ಹೇಗೆ?
ರಿಷಬ್
ರಾಜೇಶ್ ದುಗ್ಗುಮನೆ
|

Updated on: Mar 31, 2026 | 7:04 AM

Share

ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ರಾಜ್ ಬಿ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲರನ್ನೂ ಅನ್​​ಫಾಲೋ ಮಾಡಿದ್ದು ಚರ್ಚೆ ಆಗಿತ್ತು. ಈಗ ಅವರು ರಿಷಬ್ ಶೆಟ್ಟಿ ಫಿಲ್ಮ್ಸ್, ರಿಷಬ್ ಶೆಟ್ಟಿ ಫೌಂಡೇಷನ್ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರು ಕೆರಾಡಿಯಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ನಿರ್ಮಾಣ ಮಾಡುವಾಗ ದೊಡ್ಡ ದೊಡ್ಡ ಫಿಲ್ಮ್​ ಸಿಟಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತದೆ. ಆದರೆ, ರಿಷಬ್ ಶೆಟ್ಟಿ ಅವರು ಕುಂದಾಪುರದ ಕೆರಾಡಿಯಲ್ಲೇ ‘ಕಾಂತಾರ 2’ ಚಿತ್ರದ ಸೆಟ್ ನಿರ್ಮಾಣ ಮಾಡಿದರು. ಈ ಸೆಟ್​ ಅದ್ಭುತವಾಗಿತ್ತು ಎಂಬುದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದವರಿಗೆ ಗೊತ್ತಾಗುತ್ತದೆ. ಈಗ ಇದನ್ನು ಸಿನಿಮಾ ಸಿಟಿಯಾಗಿ ಬದಲಾಯಿಸಿರೋದಾಗಿ ಹೇಳಿದ್ದಾರೆ.

‘ಕಾಂತಾರದ ಬಳಿಕ ಕುಂದಾಪುರ, ಬೈಂದೂರು ಭಾಗ ಫಿಲ್ಮ್ ಸಿಟಿಯಾಗಿ ಬದಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಸಿನಿಮಾ ಶೂಟ್ ಆಗುವ ನಿರೀಕ್ಷೆ ಇದೆ. ಈ ಭಾಗದ ಜನರಿಗೆ ಸಿನಿಮಾದ ಮೇಲಿನ ಗೌರವ ಹೆಚ್ಚಾಗಿದೆ’ ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.

View this post on Instagram

A post shared by Zoom Out (@zoomoutkannada)

ಕುಂದಾಪುರ ಸೇರಿದಂತೆ ಕರಾವಳಿ ಭಾಗದಲ್ಲಿ ಅಪಾರ ಪ್ರಕೃತಿ ಸೌಂದರ್ಯವಿದೆ. ಇದನ್ನು ಕೆಲವು ಸಿನಿಮಾಗಳಲ್ಲಿ ಸೆರೆ ಹಿಡಿಯಲಾಗಿದೆ. ಆದರೆ, ಇದನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ ಎಂಬುದು ರಿಷಬ್ ಶೆಟ್ಟಿ ಅವರ ಅಭಿಪ್ರಾಯ. ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ಬಳಿಕ ಕರಾವಳಿಯ ಸಂಸ್ಕೃತಿ ಎಲ್ಲರಿಗೂ ತಿಳಿದಿದೆ ಎಂಬುದು ವಿಶೇಷ.

ಇದನ್ನೂ ಓದಿ: ‘ಅಧ್ಯಾಯ ಎರಡು’: ‘ಕಾಂತಾರ: ಚಾಪ್ಟರ್ 2’ ಆರಂಭಿಸಿದರೇ ರಿಷಬ್ ಶೆಟ್ಟಿ?

ರಿಷಬ್ ಶೆಟ್ಟಿ ಅವರು ಸದ್ಯ ‘ಜೈ ಹನುಮಾನ್’ ಸಿನಿಮಾ ಶೂಟ್ ಅಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ನಡೆದಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
6,6,6,6,6.. ವಾರೆ ವ್ಹಾ ವೈಭವ್ ಸೂರ್ಯವಂಶಿ
6,6,6,6,6.. ವಾರೆ ವ್ಹಾ ವೈಭವ್ ಸೂರ್ಯವಂಶಿ
ತಂಡದಿಂದ ಹೊರಹಾಕಿದ ಸಿಎಸ್​ಕೆ ವಿರುದ್ಧ ಮಿಂಚಿದ ಜಡೇಜಾ
ತಂಡದಿಂದ ಹೊರಹಾಕಿದ ಸಿಎಸ್​ಕೆ ವಿರುದ್ಧ ಮಿಂಚಿದ ಜಡೇಜಾ
BJP ರೋಡ್ ಶೋಗೆ ಕಾಂಗ್ರೆಸ್ ಧ್ವಜ ಹಿಡಿದು 'ಕೈ' ಕಾರ್ಯಕರ್ತರ ಎಂಟ್ರಿ!
BJP ರೋಡ್ ಶೋಗೆ ಕಾಂಗ್ರೆಸ್ ಧ್ವಜ ಹಿಡಿದು 'ಕೈ' ಕಾರ್ಯಕರ್ತರ ಎಂಟ್ರಿ!
ಕೈ ಮುಖಂಡನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ
ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ
ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ
ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು
ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು
ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ
ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ