ಸಾವಿರ ಕೋಟಿ ರೂ. ಸಮೀಪಿಸಿದ ‘ಆರ್ಆರ್ಆರ್’ ಕಲೆಕ್ಷನ್; ‘ಬಜರಂಗಿ ಭಾಯಿಜಾನ್’ ಹಿಂದಿಕ್ಕಿದ ರಾಜಮೌಳಿ ಸಿನಿಮಾ
‘ಆರ್ಆರ್ಆರ್’ ಸಿನಿಮಾ ಅದ್ದೂರಿತನ ಕಂಡು ಅನೇಕರು ಮರಳಿಮರಳಿ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಪರಿಣಾಮ ಈ ಸಿನಿಮಾ ವಿಶ್ವ ಮಟ್ಟದಲ್ಲಿ 969.2 ಕೋಟಿ ಬಾಚಿಕೊಂಡಿದೆ.

ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ತೆರೆಗೆ ಬಂದು ಹಲವು ದಿನಗಳು ಕಳೆದಿವೆ. ಈ ಸಿನಿಮಾ ಹೊಸಹೊಸ ದಾಖಲೆಗಳನ್ನು ಬರೆಯುತ್ತಿದೆ. ರಾಜಮೌಳಿ ಸಿನಿಮಾದ ಮೇಕಿಂಗ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ (Ram Charan) ಅಭಿನಯದ ಈ ಚಿತ್ರ ಬಾಲಿವುಡ್ ಅಂಗಳದಲ್ಲಿ, ವಿದೇಶದಲ್ಲಿ ಒಳ್ಳೆಯ ಕಮಾಯಿ ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್ ಈಗ 1,000 ಕೋಟಿ ರೂಪಾಯಿ ಸಮೀಪಿಸಿದೆ. ಅಷ್ಟೇ ಅಲ್ಲ, ಭಾರತದ ಹಲವು ಸಿನಿಮಾಗಳು ಮಾಡಿದ ದಾಖಲೆಗಳನ್ನು ಈ ಚಿತ್ರ ಪುಡಿಪುಡಿ ಮಾಡಿದೆ.
ನೈಜ ಪಾತ್ರಗಳನ್ನು ಇಟ್ಟುಕೊಂಡು, ಅದಕ್ಕೆ ಕಾಲ್ಪನಿಕ ಕಥೆ ಬರೆದು ‘ಆರ್ಆರ್ಆರ್’ ಮಾಡಿದ್ದಾರೆ ರಾಜಮೌಳಿ. ‘ಬಾಹುಬಲಿ’ ರೀತಿಯಲ್ಲೇ ಈ ಚಿತ್ರದಲ್ಲೂ ಸಾಹಸ ದೃಶ್ಯಗಳನ್ನು ಕೊಂಚ ಹೆಚ್ಚೇ ತೋರಿಸಲಾಗಿದೆ. ಇದು ಅನೇಕರಿಗೆ ಇಷ್ಟವಾಗಿದೆ. ಸಿನಿಮಾ ಅದ್ದೂರಿತನ ಕಂಡು ಅನೇಕರು ಮರಳಿಮರಳಿ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಪರಿಣಾಮ ಈ ಸಿನಿಮಾ ವಿಶ್ವ ಮಟ್ಟದಲ್ಲಿ 969.2 ಕೋಟಿ ಬಾಚಿಕೊಂಡಿದೆ. ಈ ಮೂಲಕ ಹಲವು ಸಿನಿಮಾಗಳ ದಾಖಲೆಯನ್ನು ಇದು ಪುಡಿ ಮಾಡಿದೆ.
ಆಮಿರ್ ನಟನೆಯ ‘ಪಿಕೆ’ ಚಿತ್ರದ ಲೈಫ್ಟೈಮ್ ಕಲೆಕ್ಷನ್ 854 ಕೋಟಿ ರೂಪಾಯಿ. ಈ ಚಿತ್ರವನ್ನು ಕೆಲ ದಿನಗಳ ಹಿಂದೆಯೇ ಹಿಂದಿಕ್ಕಿತ್ತು ‘ಆರ್ಆರ್ಆರ್’ ಚಿತ್ರ. ಆಮಿರ್ ಖಾನ್ ಅಭಿನಯದ ‘ಸೀಕ್ರೆಟ್ ಸೂಪರ್ ಸ್ಟಾರ್’ (966 ಕೋಟಿ ರೂಪಾಯಿ) ಹಾಗೂ ‘ಬಜರಂಗಿ ಭಾಯಿಜಾನ್’ (969 ಕೋಟಿ ರೂಪಾಯಿ) ಚಿತ್ರಗಳ ಲೈಫ್ಟೈಮ್ ಕಲೆಕ್ಷನ್ ದಾಖಲೆಗಳನ್ನು ‘ಆರ್ಆರ್ಆರ್’ ಬ್ರೇಕ್ ಮಾಡಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ‘ಆರ್ಆರ್ಆರ್’.
#RRR with ₹969.24 cr BEATS #SecretSuperstar[₹966.86 cr] and #BajrangiBhaijaan[₹969.06 cr] lifetime figure to become the 3rd HIGHEST grossing Indian film of all time.
— Manobala Vijayabalan (@ManobalaV) April 8, 2022
ಕಲೆಕ್ಷನ್ ವಿಚಾರದಲ್ಲಿ ‘ಆರ್ಆರ್ಆರ್’ಗಿಂತ ಮುಂದೆ ಇನ್ನೂ ಎರಡು ಚಿತ್ರಗಳಿವೆ. ಇವುಗಳನ್ನು ಹಿಂದಿಕ್ಕೋದು ಅಷ್ಟು ಸುಲಭದ ಮಾತಲ್ಲ. ರಾಜಮೌಳಿ ಅವರೇ ನಿರ್ದೇಶಿಸಿರುವ ‘ಬಾಹುಬಲಿ 2’ 1,810 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎರಡನೇ ಸ್ಥಾನದಲ್ಲಿದ್ದರೆ, ಆಮಿರ್ ಖಾನ್ ಅಭಿನಯದ ‘ದಂಗಲ್’ 2,024 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮೊದಲ ಸ್ಥಾನದಲ್ಲಿದೆ. ‘ದಂಗಲ್’ ಚಿತ್ರ ಚೀನಾ ಮೊದಲಾದ ದೇಶಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಕಾರಣಕ್ಕೆ ಚಿತ್ರದ ಒಟ್ಟೂ ಗಳಿಕೆ 2,000 ಕೋಟಿ ರೂಪಾಯಿ ದಾಟಿತ್ತು.
ಇದನ್ನೂ ಓದಿ: ‘ಕೆಜಿಎಫ್ 2’ ಟಿಕೆಟ್ ಬುಕಿಂಗ್ ಓಪನ್ ಆದ 12 ಗಂಟೆಯಲ್ಲಿ 1 ಲಕ್ಷ ಟಿಕೆಟ್ ಸೋಲ್ಡ್ಔಟ್; ಉತ್ತರ ಭಾರತದಲ್ಲಿ ಯಶ್ ಹವಾ
‘ಕೆಜಿಎಫ್ 2’ ಹಾಗೂ ‘ಬೀಸ್ಟ್’ ಚಿತ್ರಗಳಿಗೆ ತಮಿಳುನಾಡಿನಲ್ಲಿ ಸಿಗುತ್ತಿರುವ ಚಿತ್ರಮಂದಿರಗಳೆಷ್ಟು? ಇಲ್ಲಿದೆ ವಿವರ