AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oscars 2023 Nominations: ಆಸ್ಕರ್​ಗೆ ‘ಆರ್​ಆರ್​ಆರ್​’ ನಾಮಿನೇಟ್? ಸೃಷ್ಟಿಯಾಗಲಿದೆ ಹೊಸ ದಾಖಲೆ

ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆದ ಬಳಿಕೆ ವಿಶ್ವದ ನಾನಾ ಚಿತ್ರರಂಗದ ತಂತ್ರಜ್ಞರು, ನಟರು ಈ ಚಿತ್ರವನ್ನು ವೀಕ್ಷಿಸಿ ರಾಜಮೌಳಿ ಅವರನ್ನು ಹೊಗಳಿದ್ದರು. ಈಗ ರಾಜಮೌಳಿ ಸಿನಿಮಾ ಎರಡು ವಿಭಾಗಗಳಲ್ಲಿ ಆಸ್ಕರ್​ಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

Oscars 2023 Nominations: ಆಸ್ಕರ್​ಗೆ ‘ಆರ್​ಆರ್​ಆರ್​’ ನಾಮಿನೇಟ್? ಸೃಷ್ಟಿಯಾಗಲಿದೆ ಹೊಸ ದಾಖಲೆ
RRR Movie
TV9 Web
| Edited By: |

Updated on:Sep 16, 2022 | 3:37 PM

Share

ಭಾರತದ ಚಿತ್ರರಂಗದ ಪಾಲಿಗೆ ಪ್ರತಿಷ್ಠಿತ ಆಸ್ಕರ್ ಅವಾರ್ಡ್ (Academy Awards)​​ ಎಂಬುದು ಇನ್ನೂ ಕನಸಾಗಿಯೇ ಉಳಿದಿದೆ. ಭಾರತದ ಯಾವ ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿ ಪಡೆದಿಲ್ಲ. 21 ವರ್ಷಗಳ ಹಿಂದೆ ಆಮಿರ್ ಖಾನ್ (Aamir Khan) ನಟನೆಯ ‘ಲಗಾನ್’ ಸಿನಿಮಾ ಆಸ್ಕರ್​ಗೆ ನಾಮ ನಿರ್ದೇಶನಗೊಂಡಿತ್ತು. ಇದಾದ ಬಳಿಕ ಭಾರತದ ಯಾವ ಸಿನಿಮಾಗಳೂ ಆಸ್ಕರ್​ಗೆ ನಾಮಿನೇಟ್ ಆಗಿಲ್ಲ. ಈ ಬಾರಿ ‘ಆರ್​ಆರ್​ಆರ್​’ ಸಿನಿಮಾ (RRR Movie) ಆಸ್ಕರ್​ನ ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ ರಾಜಮೌಳಿ ಸಿನಿಮಾ ಆಸ್ಕರ್ ಗೆದ್ದರೆ ಭಾರತ ಚಿತ್ರರಂಗದ ಪಾಲಿಗೆ ದಾಖಲೆ ನಿರ್ಮಾಣ ಆಗಲಿದೆ.

‘ಆರ್​ಆರ್​ಆರ್’ ಸಿನಿಮಾ ಮಾರ್ಚ್​ ತಿಂಗಳಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಬರೆಯಿತು. ವಿಶ್ವ ಬಾಕ್ಸ್​ ಆಫೀಸ್​ನಲ್ಲೂ ಚಿತ್ರ ಅಬ್ಬರಿಸಿತು. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆದ ಬಳಿಕೆ ವಿಶ್ವದ ನಾನಾ ಚಿತ್ರರಂಗದ ತಂತ್ರಜ್ಞರು, ನಟರು ಈ ಚಿತ್ರವನ್ನು ವೀಕ್ಷಿಸಿ ರಾಜಮೌಳಿ ಅವರನ್ನು ಹೊಗಳಿದ್ದರು. ಈಗ ರಾಜಮೌಳಿ ಸಿನಿಮಾ ಎರಡು ವಿಭಾಗಗಳಲ್ಲಿ ಆಸ್ಕರ್​ಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

‘ಆರ್​ಆರ್​ಆರ್​’ ಸಿನಿಮಾದ ‘ದೋಸ್ತಿ..’ ಹಾಡು ಸಾಕಷ್ಟು ಗಮನ ಸೆಳೆದಿತ್ತು. ಎಂಎಂ ಕೀರವಾಣಿ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡು ವಿದೇಶಿಗರ ಗಮನ ಸೆಳೆದಿದೆ. ಈ ಕಾರಣಕ್ಕೆ ಆಸ್ಕರ್​ ರೇಸ್​ನಲ್ಲಿ ಈ ಹಾಡು ಕೂಡ ಇರಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಈ ಹಾಡು ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ. ಇನ್ನು, ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ ವಿಭಾಗದಲ್ಲೂ ‘ಆರ್​ಆರ್​ಆರ್​’ ಚಿತ್ರ ನಾಮಿನೇಟ್ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
KGF Chapter 2: ಟಿವಿಯಲ್ಲಿ ಬರೋಕೆ ರೆಡಿ ಆಯ್ತು ‘ಕೆಜಿಎಫ್ 2’; ಹೊಸ ಅಪ್ಡೇಟ್ ನೀಡಿದ ಜೀ ಕನ್ನಡ
Image
ಮಧ್ಯರಾತ್ರಿ ಸಿನಿಮಾ ವೀಕ್ಷಿಸಿದ ಶ್ರೀನಿಧಿ ಶೆಟ್ಟಿ, ಗರುಡ, ವಿನಯ್ ರಾಜ್​ಕುಮಾರ್..; ಚಿತ್ರ ನೋಡಿ ಆಶಾ ಭಟ್ ಹೇಳಿದ್ದೇನು?
Image
Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ
Image
‘ಕೆಜಿಎಫ್​ 2’ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ ಯಶ್, ಶ್ರೀನಿಧಿ ಶೆಟ್ಟಿ

ಇದನ್ನೂ ಓದಿ: ಟಿವಿಯಲ್ಲಿ ಬರೋಕೆ ರೆಡಿ ಆಯ್ತು ‘ಆರ್​ಆರ್​ಆರ್​’; ಸ್ಪೆಷಲ್ ದಿನಕ್ಕೆ ವೀಕ್ಷಕರಿಗೆ ವಿಶೇಷ ಗಿಫ್ಟ್

ಹಾಲಿವುಡ್ ಮಂದಿಗೆ ಈಗಾಗಲೇ ‘ಆರ್​ಆರ್​ಆರ್​’ ಸಿನಿಮಾ ಇಷ್ಟ ಆಗಿದೆ. ದೊಡ್ಡದೊಡ್ಡ ಡೈರೆಕ್ಟರ್​ಗಳು ಈ ಚಿತ್ರವನ್ನು ಬಾಯ್ತುಂಬ ಹೊಗಳಿದ್ದರು. ಭಾರತದ ಸಿನಿಪ್ರಿಯರು ರಾಜಮೌಳಿ ಅವರ ಕಲ್ಪನಾ ಲೋಕವನ್ನು ಸಾಕಷ್ಟು ಇಷ್ಟಪಟ್ಟಿದ್ದರು. ಈ ಎಲ್ಲಾ ಕಾರಣದಿಂದ ‘ಆರ್​ಆರ್​ಆರ್’ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆಯಿತು.

Published On - 1:41 pm, Fri, 16 September 22

Follow Us
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!