‘ಆರ್ಆರ್ಆರ್’ ರಿಲೀಸ್ ದಿನಾಂಕ ಮುಂದಕ್ಕೆ? ಚಿತ್ರತಂಡದಿಂದ ಬಂತು ಸ್ಪಷ್ಟನೆ
ಈಗಾಗಲೇ ದೇಶದಲ್ಲಿ ಕೊವಿಡ್ ಎರಡು ಅಲೆ ಪೂರ್ಣಗೊಂಡಿದೆ. ಈ ಮೊದಲು ಜನವರಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಲು ಆರಂಭವಾಗಿ ಮಾರ್ಚ್-ಏಪ್ರಿಲ್ ವೇಳೆಗೆ ಕೊರೊನಾ ಪ್ರಕರಣ ಮಿತಿ ಮೀರಿತ್ತು. ಈ ಬಾರಿ ಕೊಂಚ ಮೊದಲೇ ಕೊವಿಡ್ ಭಯ ಹೆಚ್ಚುತ್ತಿದೆ.
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ರಿಲೀಸ್ಗೆ ಸಿದ್ಧತೆ ನಡೆದಿದೆ. ಇಡೀ ವಿಶ್ವಾದ್ಯಂತ ಜನವರಿ 7ರಂದು ಚಿತ್ರ ತೆರೆಗೆ ಬರಲಿದೆ. ಈ ಸಿನಿಮಾಗೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತದೆಯೇ ಎನ್ನುವ ಪ್ರಶ್ನೆ ಕಾಡಿತ್ತು. ಇದಕ್ಕೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿದೆ. ಹಾಗಾದರೆ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗುತ್ತದೆಯೇ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಈಗಾಗಲೇ ದೇಶದಲ್ಲಿ ಕೊವಿಡ್ ಎರಡು ಅಲೆ ಪೂರ್ಣಗೊಂಡಿದೆ. ಈ ಮೊದಲು ಜನವರಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಲು ಆರಂಭವಾಗಿ ಮಾರ್ಚ್-ಏಪ್ರಿಲ್ ವೇಳೆಗೆ ಕೊರೊನಾ ಪ್ರಕರಣ ಮಿತಿ ಮೀರಿತ್ತು. ಈ ಬಾರಿ ಕೊಂಚ ಮೊದಲೇ ಕೊವಿಡ್ ಭಯ ಹೆಚ್ಚುತ್ತಿದೆ. ಹೀಗಾಗಿ, ದೇಶದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ದೆಹಲಿಯಲ್ಲಿ ಥಿಯೇಟರ್ ಬಂದ್ ಮಾಡಲಾಗಿದೆ. ಇದರಿಂದ ಹಿಂದಿಯ ‘ಜೆರ್ಸಿ’ ಸೇರಿದಂತೆ ಕೆಲವು ಚಿತ್ರಗಳು ರಿಲೀಸ್ ದಿನಾಂಕ ಮುಂದೂಡಿವೆ.
RAM & BHEEM…. ?? #RRRonJan7th #RRRMovie pic.twitter.com/9tlcLYqnTr
— RRR Movie (@RRRMovie) December 28, 2021
‘ಆರ್ಆರ್ಆರ್’ ಸಿನಿಮಾ ತಂಡ ಕೂಡ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಕಾರಣವೂ ಇದೆ. ‘ಆರ್ಆರ್ಆರ್’ ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಸಿನಿಮಾ. ಈ ಕಾರಣಕ್ಕೆ ಇಂತಹ ಕಷ್ಟದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಮುಂದೆ ಬರುವುದಿಲ್ಲ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಆರ್ಆರ್ಆರ್ ಟ್ವಿಟರ್ ಖಾತೆಯಿಂದ ಟ್ವೀಟ್ ಒಂದನ್ನು ಮಾಡಲಾಗಿದೆ. ಈ ಟ್ವೀಟ್ನಲ್ಲಿ ಜನವರಿ 7ಕ್ಕೆ ಸಿನಿಮಾ ರಿಲೀಸ್ ಆಗುವ ವಿಚಾರವನ್ನು ಖಚಿತಪಡಿಸಲಾಗಿದೆ.
ಜ.7ರಂದು ವಿಶ್ವಾದ್ಯಂತ ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗಲಿದೆ. ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್ ದೇವಗನ್ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಟ್ರೇಲರ್ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ‘ಜನನಿ..’ ಹಾಡು ಕೂಡ ಗಮನ ಸೆಳೆದಿದೆ.
ಟ್ರೇಲರ್ನಲ್ಲಿ ಎಲ್ಲಾ ಪಾತ್ರಗಳ ಪರಿಚಯವಾಗಿದೆ. ಸಿನಿಮಾ ಎಷ್ಟು ಅದ್ದೂರಿಯಾಗಿ ಇರಲಿದೆ ಎನ್ನುವುದರ ಸಣ್ಣ ಝಲಕ್ ಟ್ರೇಲರ್ನಲ್ಲಿ ಸಿಕ್ಕಿದೆ. ‘ಆರ್ಆರ್ಆರ್’ ಸಿನಿಮಾ ಮೇಕಿಂಗ್ ಕೂಡ ಉತ್ಕೃಷ್ಟ ಮಟ್ಟದಿಂದ ಕೂಡಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಟ್ರೇಲರ್ ರಿಲೀಸ್ ಆದ ನಂತರದಲ್ಲಿ ಚಿತ್ರತಂಡ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಹಲವು ರಾಜ್ಯಗಳಿಗೆ ತೆರಳಿ ತಂಡ ಸಿನಿಮಾ ಪ್ರಚಾರ ಕಾರ್ಯ ನಡೆಸಿದೆ. ಬೆಂಗಳೂರಿಗೂ ಚಿತ್ರತಂಡ ಆಗಮಿಸಿತ್ತು. ರಾಮ್ ಚರಣ್, ಆಲಿಯಾ ಭಟ್, ಜ್ಯೂ. ಎನ್ಟಿಆರ್ ಅವರು ಮಾಧ್ಯಮಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ಮತ್ತೊಂದು ಹಾಡಿನ ಮೂಲಕ ಸೌಂಡು ಮಾಡಲು ಸಜ್ಜಾದ ‘ಆರ್ಆರ್ಆರ್’: ಜ್ಯೂ. ಎನ್ಟಿಆರ್ ಫ್ಯಾನ್ಸ್ ಕಾತರ
ಆರ್ಆರ್ಆರ್ ಚಿತ್ರ ಓಟಿಟಿಯಲ್ಲಿ ಬರೋದು ಯಾವಾಗ? ಕಾತರದ ಪ್ರಶ್ನೆಗೆ ಸಿಕ್ತು ಉತ್ತರ
Published On - 7:39 pm, Tue, 28 December 21