ರಾಮ್ ಚರಣ್ ಧರಿಸಿದ ಈ ಜಾಕೆಟ್ ಬೆಲೆ ಊಹಿಸಬಲ್ಲಿರಾ? ಸಾವಿರ ಅಲ್ಲ, ಲಕ್ಷದಲ್ಲಿದೆ ಲೆಕ್ಕ
ಹೆಚ್ಚಿನ ಸಂದರ್ಭದಲ್ಲಿ ರಾಮ್ ಚರಣ್ ಅವರು ಫಾರ್ಮಲ್ ರೀತಿಯ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಅವರು ಟ್ರೆಂಡಿ ಬಟ್ಟೆಗಳನ್ನೂ ಇಷ್ಟಪಡುತ್ತಾರೆ ಎಂಬುದಕ್ಕೆ ಈ ಜಾಕೆಟ್ ಸಾಕ್ಷಿ.

ಸಿನಿಮಾದಲ್ಲಿ ಲಕ್ಷಾಂತರ ರೂಪಾಯಿ ಬೆಲೆಯ ಕಾಸ್ಟ್ಯೂಮ್ ಧರಿಸುವ ಸೆಲೆಬ್ರಿಟಿಗಳು ನಿಜಜೀವನದಲ್ಲಿಯೂ ಅದೇ ರೀತಿ ಬದುಕುತ್ತಾರೆ. ಕೆಲವರಿಗೆ ಸಿಂಪಲ್ ಆಗಿರುವುದು ಇಷ್ಟ. ಆದರೆ ಕೆಲವರಿಗೆ ಐಷಾರಾಮಿ ಜೀವನವೇ ರೂಢಿ. ನಟ ರಾಮ್ ಚರಣ್ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆಯೇ ಅವರ ಜೀವನ ಶೈಲಿ ಇದೆ. ಈಗ ಅವರು ಧರಿಸಿರುವ ಒಂದು ಜಾಕೆಟ್ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಜಾಕೆಟ್ ಧರಿಸಿ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪೋಟೋಗಳು ವೈರಲ್ ಆಗಿವೆ.
ಡಸ್ಟ್ ಆಫ್ ಗಾಡ್ಸ್ ಫ್ಯಾಷನ್ ಬ್ರ್ಯಾಂಡ್ ವಿನ್ಯಾಸಗೊಳಿಸಿದ ದಿ ಜೋಕರ್ ಡೆನಿಮ್ ಜಾಕೆಟ್ ಧರಿಸಿ ರಾಮ್ ಚರಣ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅದರ ಬೆಲೆ ಬರೋಬ್ಬರಿ 1.3 ಲಕ್ಷ ರೂಪಾಯಿ ಎಂಬುದು ಅಚ್ಚರಿ ವಿಚಾರ! ಹೆಚ್ಚಿನ ಸಂದರ್ಭದಲ್ಲಿ ರಾಮ್ ಚರಣ್ ಅವರು ಫಾರ್ಮಲ್ ರೀತಿಯ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಅವರು ಟ್ರೆಂಡಿ ಬಟ್ಟೆಗಳನ್ನೂ ಇಷ್ಟಪಡುತ್ತಾರೆ ಎಂಬುದಕ್ಕೆ ಈ ಜಾಕೆಟ್ ಸಾಕ್ಷಿ. ಅವರ ಫ್ಯಾಷನ್ ಸೆನ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಷ್ಟಕ್ಕೂ ಬಿಗ್ ಬಾಸ್ ವೇದಿಕೆಗೆ ರಾಮ್ ಚರಣ್ ಬಂದಿರುವುದು ಯಾಕೆ? ಉತ್ತರ ಸಿಂಪಲ್; ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸಂಸ್ಥೆಯ ತೆಲುಗು ವಿಭಾಗಕ್ಕೆ ಅವರು ರಾಯಭಾರಿ ಆಗಿದ್ದಾರೆ. ಹಾಗಾಗಿ ಈ ಸಂಸ್ಥೆಯ ಪ್ರಚಾರಕ್ಕಾಗಿ ರಾಮ್ ಚರಣ್ ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಇದೇ ವೇದಿಕೆಯಲ್ಲಿ ನಿತಿನ್, ತಮನ್ನಾ ಭಾಟಿಯಾ, ನಭಾ ನಟೇಶ್ ಅವರು ತಮ್ಮ ಹೊಸ ಸಿನಿಮಾದ ಪ್ರಮೋಷನ್ ಕೂಡ ಮಾಡಿದ್ದಾರೆ. ಅವರಿಗೆ ರಾಮ್ ಚರಣ್ ಸಾಥ್ ನೀಡಿದ್ದಾರೆ.
ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸಂಸ್ಥೆಯ ತೆಲುಗು ವಿಭಾಗಕ್ಕೆ ರಾಯಭಾರಿ ಆಗಲು ರಾಮ್ ಚರಣ್ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದು ಕೂಡ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಅವರು ಈ ಕೆಲಸಕ್ಕೆ ವಾರ್ಷಿಕವಾಗಿ ಬರೋಬ್ಬರಿ 6 ಕೋಟಿ ರೂ. ಪಡೆಯಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಓಟಿಟಿ ಪ್ಲಾಟ್ಫಾರ್ಮ್ಗಳ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ, ಸ್ಟಾರ್ ನಟರನ್ನು ರಾಯಭಾರಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ:
ರಾಮ್ ಚರಣ್ ಒಪ್ಪದಿದ್ದರೂ ಲಿಪ್ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ
ರಾಮ್ ಚರಣ್ Vs ಜ್ಯೂ. ಎನ್ಟಿಆರ್; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್ ಏನು?




