
ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ. ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರದಿಂದಾಗಿ ಅವರಿಗೆ ಪರಭಾಷೆಗಳಿಂದ ಆಫರ್ ಬರುತ್ತಿದೆ. ಪ್ರಭಾಸ್, ಜೂನಿಯರ್ ಎನ್ಟಿಆರ್ ಅವರಂಥ ಸ್ಟಾರ್ ಹೀರೋಗೆ ಅವರು ನಾಯಕಿ ಆಗಿ ಆಯ್ಕೆ ಆಗುತ್ತಿದ್ದಾರೆ ಎಂದು ವರದಿಗಳು ಕೇಳಿ ಬಂದಿವೆ. ಹೀಗಿರುವಾಗಲೇ ರುಕ್ಮಿಣಿ ವಸಂತ್ ಅವರು ಅದೃಷ್ಟದ ಬಗ್ಗೆ ಮಾತನಾಡಿದ್ದಾರೆ. ತಾವು ಲಕ್ಕಿ ಎಂದು ಅವರು ಎಲ್ಲರ ಎದುರು ಒಪ್ಪಿಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಅವರು ಈ ಮೊದಲು ಕೆಲ ಸಿನಿಮಾ ಮಾಡಿದ್ದರು. ಆದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಅವರ ಅದೃಷ್ಟವನ್ನು ಬದಲಿಸಿತೂ ಎಂದರೂ ತಪ್ಪಾಗಲಿಕ್ಕಿಲ್ಲ. ಇದನ್ನು ಅವರು ಕೂಡ ಒಪ್ಪಿಕೊಳ್ಳುತ್ತಾರೆ. ತಮಗೆ ಅದೃಷ್ಟ ಇತ್ತು ಎಂದಿರೋ ಅವರು, ಶ್ರಮ ಕೂಡ ಸೇರಿದೆ ಎಂದು ಹೇಳಿಕೊಂಡಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.
‘ನೀವು ಲಕ್ಕಿ ಬಿಡಿ’ ಎಂದು ಕೆಲವು ನಟಿಯರಿಗೆ ಕೆಲವರು ಹೇಳಿದ್ದು ಇದೆ. ಆಗ ಅವರಿಗೆ ಸಿಟ್ಟೇ ಬಂದುಬಿಡುತ್ತದೆ. ‘ಅವರಿಗೆ ನಾನು ಹಾಕಿದ ಶ್ರಮ ಕಾಣುವುದಿಲ್ಲ’ ಎನ್ನುತ್ತಾರೆ. ಆದರೆ, ರುಕ್ಮಿಣಿ ವಸಂತ್ ಅವರು ಈ ರೀತಿ ಅಲ್ಲ. ಅವರು ಬೇರೆಯದೇ ಅಭಿಪ್ರಾಯ ಹೇಳುತ್ತಾರೆ.
‘ಅದೃಷ್ಟ ಮುಖ್ಯ. ಸಪ್ತ ಸಾಗರದಾಚೆ ಸಿನಿಮಾ ನನಗೆ ಬ್ರೇಕ್ ನೀಡಿತು. ನಾನು ಡೈರೆಕ್ಟರ್ಗೆ ಮೆಸೇಜ್ ಮಾಡಿದೆ. ನಾನು ನ್ಯೂಸ್ ಪೇಪರ್ನಲ್ಲಿ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದೀರಿ ಎಂಬುದನ್ನು ನೋಡಿದೆ. ಆಡಿಷನ್ ಮಾಡಬಹುದಾ ಎಂದು ಕೇಳಿದ್ದೆ. ನಾನು ನಟನೆ ಕಲಿತಿದ್ದೇನೆ ಎಂದು ಅವರಿಗೆ ಹೇಳಿದ್ದೆ. ಅವರು ಮೆಸೇಜ್ ನೋಡಿ ಓಕೆ ಎಂದರು. ಆಡಿಷನ್ ಕೊಟ್ಟು ಆಯ್ಕೆ ಆದೆ. ಅವರು ನನ್ನ ಮೆಸೇಜ್ ನೋಡದೇ ಇದ್ದಿದ್ದರೆ ಆ ಸಿನಿಮಾದಲ್ಲಿ ನಾನು ಇರ್ತಾ ಇರಲಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಅದೇ ರೀತಿ ಅದೃಷ್ಟ ಕೂಡ ಮುಖ್ಯ. ನೀವು ಲಕ್ಕಿ ಎಂದರೆ ನನಗೆ ಕೋಪ ಬರಲ್ಲ. ಇದು ಅದೃಷ್ಟ ಹಾಗೂ ಶ್ರಮದ ಕಾಂಬಿನೇಷನ್’ ಎಂದಿದ್ದಾರೆ ಅವರು.
ಇದನ್ನೂ ಓದಿ: ರುಕ್ಮಿಣಿ ವಸಂತ್ಗೆ ಖುಲಾಯಸಿದ ಅದೃಷ್ಟ, ತೆಲುಗಿನಲ್ಲಿ ಬಲು ಬ್ಯುಸಿ, ಕೈಲಿರುವ ಸಿನಿಮಾಗಳೆಷ್ಟು?
ರಶ್ಮಿಕಾ ಮಂದಣ್ಣ ವಿಚಾರದಲ್ಲೂ ಹಿಗೇಯೇ ಆತಿತು. ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಅವರು ಆಡಿಷನ್ ನೀಡಿ ಆಯ್ಕೆ ಆದರು. ಆ ಬಳಿಕ ಕರ್ನಾಟಕ ಕ್ರಶ್ ಆದರು. ನಂತರ ನ್ಯಾಷನಲ್ ಕ್ರಶ್ ಆದರು. ಅವರಿಗೆ ಅದೃಷ್ಟ ಸಾಕಷ್ಟು ಸಹಾಯ ಮಾಡಿತ್ತು. ಆದರೆ, ರಶ್ಮಿಕಾ ಇದನ್ನು ಒಪ್ಪಿಕೊಳ್ಳುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.