ನಟಿ ಸಾಯಿ ಪಲ್ಲವಿ (Sai Pallavi) ಅವರ ನಟನೆಯ ‘ವಿರಾಟ ಪರ್ವಂ’ ಸಿನಿಮಾ (Virat Parvam Movie) ಹೀನಾಯ ಸೋಲು ಕಂಡಿತು. ಈ ಚಿತ್ರದ ಪ್ರಚಾರದ ವೇಳೆ ಅವರು ನೀಡಿದ ಹೇಳಿಕೆ ಈ ಸಿನಿಮಾ ಸೋಲಿಗೆ ಕಾರಣ ಎನ್ನುವ ಮಾತು ಕೇಳಿ ಬಂತು. ಈ ಬೆನ್ನಲ್ಲೇ ಅವರ ನಟನೆಯ ‘ಗಾರ್ಗಿ’ ಸಿನಿಮಾ ತೆರೆಗೆ ಬರಲು ರೆಡಿ ಆಗಿದೆ. ಈ ಚಿತ್ರ ಜುಲೈ 15ರಂದು ರಿಲೀಸ್ ಆಗುತ್ತಿದೆ. ‘ಗಾರ್ಗಿ’ ರಿಲೀಸ್ಗೂ ಮೊದಲೇ ಸ್ಪೆಷಲ್ ಶೋ ಆಯೋಜಿಸಲಾಗಿತ್ತು. ಈ ವೇಳೆ ಸಿನಿಮಾ ನೋಡಿದ ಅನೇಕರು ಭೇಷ್ ಎಂದಿದ್ದಾರೆ. ಸಾಯಿ ಪಲ್ಲವಿ ಅವರ ನಟನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರಿಂದ ಚಿತ್ರಕ್ಕೆ ದೊಡ್ಡ ಬಲ ಸಿಕ್ಕಂತೆ ಆಗಿದೆ.
ಇತ್ತೀಚೆಗೆ ‘ಗಾರ್ಗಿ’ ಸಿನಿಮಾದ ಟ್ರೇಲರ್ ರಿಲೀಸ್ ಆಯಿತು. ಈ ಟ್ರೇಲರ್ನಲ್ಲಿ ಸಾಯಿ ಪಲ್ಲವಿ ಅವರು ಗಾರ್ಗಿ ಹೆಸರಿನ ಟೀಚರ್ ಪಾತ್ರ ಮಾಡುತ್ತಿರುವ ವಿಚಾರ ರಿವೀಲ್ ಆಗಿತ್ತು. ಗಾರ್ಗಿಯ ತಂದೆ ಸೆಕ್ಯುರಿಟಿ ಗಾರ್ಡ್. ಗಾರ್ಗಿ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ. ಅದು ಏಕೆ? ತಂದೆಯನ್ನು ಗಾರ್ಗಿ ಮರಳಿ ಹೇಗೆ ಮನೆಗೆ ಕರೆತರುತ್ತಾಳೆ ಎಂಬುದು ಸಿನಿಮಾದ ಕಥೆ ಎಂಬುದು ಟ್ರೇಲರ್ನಲ್ಲಿ ಗೊತ್ತಾಗಿದೆ. ಅನೇಕ ವಿಮರ್ಶಕರು ಚಿತ್ರಕ್ಕೆ ಐದಕ್ಕೆ ಐದು ಸ್ಟಾರ್ಸ್ ನೀಡಿದ್ದಾರೆ.
ಸಿನಿಮಾ ವಿಮರ್ಶಕ ರಾಜಶೇಖರ್ ಅವರು ‘ಗಾರ್ಗಿ’ ಚಿತ್ರಕ್ಕೆ ಭೇಷ್ ಎಂದಿದ್ದಾರೆ. ಈ ಚಿತ್ರದಲ್ಲಿನ ಸಾಯಿ ಪಲ್ಲವಿ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನು, ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಕೂಡ ಈ ಚಿತ್ರಕ್ಕೆ ಐದಕ್ಕೆ ಐದು ಸ್ಟಾರ್ ನೀಡಿ ಸಾಯಿ ಪಲ್ಲವಿ ನಟನೆಯನ್ನು ಹೊಗಳಿದ್ದಾರೆ.
#Gargi – ⭐️⭐️⭐️⭐️⭐️, the best Tamil film I watched in ages. Majestic, moving, and seamless. @prgautham83 has delivered a solid drama that deserves all our love and attention . @Sai_Pallavi92 is amazing and deserves a National Award along with @kaaliactor and the dir!
— Rajasekar (@sekartweets) July 13, 2022
#Gargi – 5/5
Easily the Best Tamil film of 2022.
A must watch film. Don’t miss it any cost! A modern day classic with plenty of shock value! Phew..
Courtroom drama – socially relevant – National Awards guaranteed!@Sai_Pallavi92 @kaaliactor @prgautham83
Wish the team a BB
— Kaushik LM (@LMKMovieManiac) July 13, 2022
ಇದನ್ನೂ ಓದಿ: ಸಾಯಿ ಪಲ್ಲವಿಗೆ ಹಿನ್ನಡೆ: ಪೊಲೀಸ್ ವಿಚಾರಣೆಗೆ ಹಾಜರಾಗಲೇ ಬೇಕು ಎಂದ ಕೋರ್ಟ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಿದ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಸಾಯಿ ಪಲ್ಲವಿ ಅವರು ಇತ್ತೀಚೆಗೆ ನಡೆದ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆಗೆ ಹೋಲಿಕೆ ಮಾಡಿದ್ದರು. ಈ ಹೇಳಿಕೆಯಿಂದ ಅವರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಈ ಬಗ್ಗೆ ಅವರು ಸ್ಪಷ್ಟನೆ ನೀಡುವ ವಿಡಿಯೋ ಮಾಡಿ, ‘ಎಲ್ಲರ ಜೀವವೂ ಮುಖ್ಯ ಎಂದು ಹೇಳಿದ್ದರು’. ಅವರ ಈ ಹೇಳಿಕೆಯಿಂದಲೇ ‘ವಿರಾಟ ಪರ್ವಂ’ ಸಿನಿಮಾ ಸೋತಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಈಗ ಅವರು ‘ಗಾರ್ಗಿ’ ಚಿತ್ರದ ಮೂಲಕ ಗೆಲುವು ಕಾಣುವ ಸೂಚನೆ ನೀಡಿದ್ದಾರೆ.
Published On - 2:38 pm, Thu, 14 July 22