ಸಾಯಿ ಪಲ್ಲವಿಗೆ ಹಿನ್ನಡೆ: ಪೊಲೀಸ್ ವಿಚಾರಣೆಗೆ ಹಾಜರಾಗಲೇ ಬೇಕು ಎಂದ ಕೋರ್ಟ್

| Updated By: ರಾಜೇಶ್ ದುಗ್ಗುಮನೆ

Updated on: Jul 08, 2022 | 10:32 PM

ಸಾಯಿ ಪಲ್ಲವಿ ಅವರ ಹೇಳಿಕೆಗೆ ಸಂಬಂಧಿಸಿ ಬಜರಂಗ ದಳದ ಕಾರ್ಯಕರ್ತ ಅಖಿಲ್ ಎಂಬುವವರು ದೂರು ನೀಡಿದ್ದರು. ಅವರ ದೂರು ಆಧರಿಸಿ ಪೊಲೀಸರು ಎಫ್​ಐಆರ್ ದಾಖಲು ಮಾಡಿಕೊಂಡಿದ್ದರು.

ಸಾಯಿ ಪಲ್ಲವಿಗೆ ಹಿನ್ನಡೆ: ಪೊಲೀಸ್ ವಿಚಾರಣೆಗೆ ಹಾಜರಾಗಲೇ ಬೇಕು ಎಂದ ಕೋರ್ಟ್
ಸಾಯಿ ಪಲ್ಲವಿ
Follow us on

ನಟಿ ಸಾಯಿ ಪಲ್ಲವಿ (Sai Pallavi) ಅವರು ಇತ್ತೀಚೆಗೆ ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ (The Kashmir Files) ಮತ್ತು ಇತ್ತೀಚಿನ ವರ್ಷಗಳಲ್ಲಿ ನಡೆದ ಮುಸ್ಲಿಂ ಡ್ರೈವರ್​ ಮೇಲಿನ ಹಲ್ಲೆಯ ಘಟನೆಯನ್ನು ಪರಸ್ಪರ ಹೋಲಿಸಿ ಮಾತನಾಡಿದ್ದರು. ಇದು ವಿವಾದವಾಗಿ ಮಾರ್ಪಟ್ಟಿತ್ತು. ಅವರ ವಿರುದ್ಧ ಸಾಕಷ್ಟು ದ್ವೇಷದ ಸಂದೇಶಗಳನ್ನು ಪೋಸ್ಟ್ ಮಾಡಲಾಯಿತು. ಇದಕ್ಕೆ ಸ್ಪಷ್ಟನೆ ಕೊಡುವ ಸಂದರ್ಭದಲ್ಲೂ ಸಾಯಿ ಪಲ್ಲವಿ ಬಹಳ ನೇರವಾಗಿಯೇ ಮಾತನಾಡಿದ್ದರು. ಕಾಶ್ಮೀರಿ ಪಂಡಿತರ ಹೇಳಿಕೆ ಪ್ರಕರಣದಲ್ಲಿ ಅವರಿಗೆ ಹಿನ್ನಡೆ ಆಗಿದೆ. ಅವರು ಪೊಲೀಸ್ ವಿಚಾರಣೆ ಎದುರಿಸಲೇಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಸಾಯಿ ಪಲ್ಲವಿ ಅವರ ಹೇಳಿಕೆಗೆ ಸಂಬಂಧಿಸಿ ಬಜರಂಗ ದಳದ ಕಾರ್ಯಕರ್ತ ಅಖಿಲ್ ಎಂಬುವವರು ದೂರು ನೀಡಿದ್ದರು. ಅವರ ದೂರು ಆಧರಿಸಿ ಪೊಲೀಸರು ಎಫ್​ಐಆರ್ ದಾಖಲು ಮಾಡಿಕೊಂಡಿದ್ದರು. ಜೂನ್ 21ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಆಗಿತ್ತು. ಈ ನೋಟಿಸ್ ಪ್ರಶ್ನಿಸಿ ಸಾಯಿ ಪಲ್ಲವಿ ಅವರು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು.

‘ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಅಕ್ರಮವಾಗಿದೆ. ಹೀಗಾಗಿ, ನೋಟಿಸ್ ರದ್ದು ಮಾಡಲು ಸೂಚನೆ ನೀಡಿ’ ಎಂದು ಸಾಯಿ ಪಲ್ಲವಿ ಕೋರ್ಟ್​ನಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ತೆಲಂಗಾಣ ಹೈಕೋರ್ಟ್​ನ ನ್ಯಾಯಮೂರ್ತಿ ಲಲಿತಾ ಅವರು ಸಾಯಿ ಪಲ್ಲವಿ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಜತೆಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ
Virata Parvam OTT Release: ಥಿಯೇಟರ್​ನಲ್ಲಿ ಸೋತ ಸಾಯಿ ಪಲ್ಲವಿಯ ‘ವಿರಾಟ ಪರ್ವಂ’ ಚಿತ್ರಕ್ಕೀಗ ಒಟಿಟಿಯೇ ಗತಿ; ಪ್ರಸಾರ​ ಯಾವಾಗ?
Sai Pallavi: ಥಿಯೇಟರ್​ಗೆ ಜನರನ್ನು ಕರೆಸುವಲ್ಲಿ ಸೋತ ಸಾಯಿ ಪಲ್ಲವಿ; ‘ಲೇಡಿ ಪವರ್​ ಸ್ಟಾರ್​’ ಬಿರುದು ಈಗೇನಾಯ್ತು?
Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?
Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

ಇದನ್ನೂ ಓದಿ: ಯಾರು ಎಷ್ಟೇ ಟೀಕೆ ಮಾಡಿದ್ರೂ ಸಾಯಿ ಪಲ್ಲವಿ ನಂ.1; ಧೂಳೆಬ್ಬಿಸುತ್ತಿದೆ ‘ವಿರಾಟ ಪರ್ವಂ’ ಸಿನಿಮಾ

‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ ವೇಳೆ ಸಾಯಿ ಪಲ್ಲವಿ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಧರ್ಮ ಮತ್ತು ದೇವರ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ತಪ್ಪು ಎಂದು ಅವರು ಹೇಳಿದ್ದರು. ‘ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್​ ಮೇಲಿನ ಹಲ್ಲೆ ಎರಡೂ ಒಂದೇ’ ಎಂದು ಸಾಯಿ ಪಲ್ಲವಿ ಹೇಳಿದ್ದರು. ನಂತರ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದ ಅವರು ‘ಪ್ರತಿ ಜೀವವೂ ಮುಖ್ಯ’ ಎಂದು ಹೇಳಿದ್ದರು. ಅವರನ್ನು ಅನೇಕರು ಬೆಂಬಲಿಸಿದ್ದರು. ಈ ಹೇಳಿಕೆಯಿಂದಲೇ ‘ವಿರಾಟ ಪರ್ವಂ’ ಸಿನಿಮಾ ಸೋತಿದೆ ಎಂಬ ಮಾತು ಕೂಡ ಇದೆ.