ನಟನೆಯಲ್ಲಿ ಮಿಂಚಿದ್ದಾಯ್ತು, ಈಗ ನಿರ್ದೇಶನದತ್ತ ಗಮನ ಹರಿಸಿದ ಸಾಯಿ ಪಲ್ಲವಿ
ಸಾಯಿ ಪಲ್ಲವಿ ಅವರು 'ಥಾಂಡೆಲ್' ಸಿನಿಮಾದ ಪ್ರಚಾರದ ವೇಳೆ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಸಾಯಿ ಪಲ್ಲವಿ ನಿರ್ದೇಶನದತ್ತ ಆಸಕ್ತಿ ಹೊಂದಿದ್ದಾರೆ ಎಂದು ನಾಗ ಚೈತನ್ಯ ಬಹಿರಂಗಪಡಿಸಿದ್ದಾರೆ ಮತ್ತು ಅವರು ಒಂದು ಸಿನಿಮಾ ನಿರ್ದೇಶನ ಮಾಡುವುದು ಮತ್ತು ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವುದು ಬಗ್ಗೆ ಮಾತನಾಡಿದ್ದಾರೆ.

ನಟಿ ಸಾಯಿ ಪಲ್ಲವಿ ದಕ್ಷಿಣದ ಸ್ಟಾರ್ ನಟಿ. ಸಾಕಷ್ಟು ಮೇಕಪ್ ಮಾಡಿಕೊಂಡು, ಗ್ಲಾಮರಸ್ ಡ್ರೆಸ್ ಹಾಕಿಕೊಂಡು ನಟಿಯರು ಮಿಂಚುತ್ತಿರುವ ಈ ಕಾಲದಲ್ಲಿ ಸಾಯಿ ಪಲ್ಲವಿ ಅವರು ತಮ್ಮ ಸರಳತೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೇಕಪ್ ಇಲ್ಲದೆ ನಟಿಸಿ ಇಷ್ಟ ಆಗುತ್ತಾರೆ ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಈಗ ಸಾಯಿ ಪಲ್ಲವಿ ಅವರು ನಿರ್ದೇಶನದತ್ತ ಗಮನ ಹರಿಸುವ ಆಲೋಚನೆ ಹೊಂದಿದ್ದಾರೆ. ಅವರ ಭವಿಷ್ಯದ ಪ್ಲ್ಯಾನ್ ಬಗ್ಗೆ ನಾಗ ಚೈತನ್ಯ ಮಾತನಾಡಿದ್ದಾರೆ.
ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಥಾಂಡೇಲ್’ ಸಿನಿಮಾ ಇಂದು (ಫೆಬ್ರವರಿ 7) ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ಪಾತ್ರ ಹೆಚ್ಚು ಹೈಲೈಟ್ ಆಗುವ ನಿರೀಕ್ಷೆ ಇದೆ. ಈ ಚಿತ್ರದ ಪ್ರಚಾರದ ವೇಳೆ ಅವರ ನಿರ್ದೇಶನದ ಪ್ಲ್ಯಾನ್ ಬಗ್ಗೆ ನಾಗ ಚೈತನ್ಯ ಅವರು ಮಾತನಾಡಿದ್ದಾರೆ.
ಸಂದರ್ಶನದ ವೇಳೆ ನೆರೆದಿದ್ದ ಅಭಿಮಾನಿಗಳಿಗೆ ಪ್ರಶ್ನೆ ಮಾಡಲು ಅವಕಾಶ ನೀಡಲಾಯಿತು. ಆಗ ಸಾಯಿ ಪಲ್ಲವಿ ಅವರಿಗೆ ‘ನೀವು ಫಿಲ್ಮ್ ಡೈರೆಕ್ಷನ್ ಮಾಡುವ ಸಾಧ್ಯತೆ ಇದೆಯೇ’ ಎಂದು ಕೇಳಲಾಯಿತು. ಇದಕ್ಕೆ ಇಲ್ಲ ಎನ್ನುವ ಉತ್ತರವನ್ನು ಅವರು ನೀಡಿದರು. ಇದು ಸುಳ್ಳು ಎಂದು ನಾಗ ಚೈತನ್ಯ ಅವರು ವಾದಿಸಿದರು.
‘ಒಂದು ಸಿನಿಮಾ ನಿರ್ದೇಶನ ಮಾಡಬಹುದು ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ. ನನ್ನನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳೋದಾಗಿಯೂ ಹೇಳಿದ್ದಾರೆ’ ಎಂದು ನಾಗ ಚೈತನ್ಯ ಅವರು ಸಾಯಿ ಪಲ್ಲವಿ ಅವರ ಭವಿಷ್ಯದ ಪ್ಲ್ಯಾನ್ಗಳನ್ನು ರಿವೀಲ್ ಮಾಡಿಯೇಬಿಟ್ಟರು. ‘ಅದು ನನಗೆ ನೆನಪಿದೆ’ ಎಂದು ಸಾಯಿ ಪಲ್ಲವಿ ಹೇಳಿದರು.
ಇದನ್ನೂ ಓದಿ: ‘ತಂಡೇಲ್’ ಸಿನಿಮಾಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆದ ಸಾಯಿ ಪಲ್ಲವಿ
ಈ ವಿಚಾರ ಕೇಳಿದ ಬಳಿಕ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಚಿತ್ರ ಶೀಘ್ರವೇ ಸೆಟ್ಟೇರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ನಿರ್ದೇಶನ ಮಾಡೋದು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಆ ಬಳಿಕವೇ ಸಿನಿಮಾ ನಿರ್ದೇಶನಕ್ಕೆ ಇಳಿಯಬೇಕಾಗುತ್ತದೆ.
ಸಾಯಿ ಪಲ್ಲವಿ ಅವರು ಸದ್ಯ ‘ರಾಮಾಯಣ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹಿಂದಿ ಭಾಷೆಯ ಈ ಚಿತ್ರದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:53 am, Fri, 7 February 25