ಸಾಯಿ ಪಲ್ಲವಿ ಬಗ್ಗೆ ವದಂತಿ; ನಗು ಮುಖದ ನಟಿಗೆ ಮೂಡಿತು ಕಡುಗೋಪ
ಸಾಯಿ ಪಲ್ಲವಿ ಅವರು ತಮಿಳು ಮಾಧ್ಯಮದಲ್ಲಿ ಹಬ್ಬಿದ ಸುಳ್ಳು ವರದಿಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ರಾಮಾಯಣ ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಅವರು ಈ ಚಿತ್ರಕ್ಕಾಗಿ ಸಸ್ಯಾಹಾರಿಯಾಗಿದ್ದಾರೆ ಎಂಬ ವದಂತಿಯನ್ನು ಅವರು ತಳ್ಳಿ ಹಾಕಿದ್ದಾರೆ. ಭವಿಷ್ಯದಲ್ಲಿ ಇಂತಹ ಆಧಾರರಹಿತ ವದಂತಿಗಳು ಹಬ್ಬಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸಾಯಿ ಪಲ್ಲವಿ ಬಗ್ಗೆ ಎಷ್ಟೇ ವದಂತಿ ಬಂದರೂ ಬಹುತೇಕ ಸಂದರ್ಭಗಳಲ್ಲಿ ಸೈಲೆಂಟ್ ಆಗಿರುತ್ತಾರೆ. ಅವರ ಬಗ್ಗೆ ಎಷ್ಟೇ ವದಂತಿ ಹಬ್ಬಿದರೂ ಸುಮ್ಮನೆ ಇರುತ್ತಾರೆ. ಈಗ ಸಾಯಿ ಪಲ್ಲವಿ ಬಗ್ಗೆ ಒಂದು ವದಂತಿ ಹುಟ್ಟಿಕೊಂಡಿದೆ. ಇದಕ್ಕೆ ಸಾಯಿ ಪಲ್ಲವಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದಾ ನಗು ಮುಖದಲ್ಲೇ ಇರುವ ಅವರ ಮುಖದಲ್ಲಿ ಸಿಟ್ಟು ಕಾಣಿಸಿಕೊಂಡಿದೆ. ಸದ್ಯ ಅವರು ಮಾಡಿರೋ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಡಿಸೆಂಬರ್ 11ರಂದು ತಮಿಳು ಮಾಧ್ಯಮ ಒಂದರಲ್ಲಿ ವದಂತಿ ಹಬ್ಬಿಸಲಾಯಿತು. ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದು, ಸೀತೆಯ ಪಾತ್ರ ಮಾಡುತ್ತಿದ್ದಾರೆ. ರಾಮಾಯಣದ ಕಥೆ ಆಗಿರುವುದರಿಂದ ಸಾಯಿ ಪಲ್ಲವಿ ಅವರು ಕೇವಲ ಸಸ್ಯಾಹಾರ ಸೇವನೆ ಮಾಡುತ್ತಿದ್ದಾರೆ ಎಂದು ಬರೆದುಕೊಳ್ಳಲಾಗಿತ್ತು.
ಈ ವರದಿ ಸಾಯಿ ಪಲ್ಲವಿ ಗಮನಕ್ಕೆ ಬಂದಿದೆ. ಸಾಯಿ ಪಲ್ಲವಿ ಸಸ್ಯಾಹಾರಿ. ಆದರೆ, ಅವರು ಸದಾ ಮಾಂಸಹಾರ ಸೇವನೆ ಮಾಡುತ್ತಾರೆ, ಈ ಚಿತ್ರಕ್ಕಾಗಿ ಅವರು ಸಸ್ಯಾಹಾರಿ ಆದರು ಎಂಬರ್ಥದಲ್ಲಿ ಈ ಪೋಸ್ಟ್ ಇತ್ತು. ಇದಕ್ಕೆ ಅವರು ಖಡಕ್ ಆಗಿ ಉತ್ತರಿಸಿದ್ದಾರೆ. ಅವರು ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
‘ಆಧಾರರಹಿತ ವದಂತಿಗಳು, ಸುಳ್ಳುಗಳನ್ನು ನೋಡಿದಾಗ ಬಹುತೇಕ ಸಂದರ್ಭಗಳಲ್ಲಿ ನಾನು ಮೌನವಾಗಿರಲು ಬಯಸುತ್ತೇನೆ. ಆದರೆ ಇದು ನಿರಂತರವಾಗಿ ನಡೆಯುತ್ತಿರುವುದರಿಂದ ನಾನು ಪ್ರತಿಕ್ರಿಯಿಸಬೇಕಿದೆ. ಇದು ನಿಲ್ಲುವಂತೆಯೂ ತೋರುತ್ತಿಲ್ಲ. ಸಿನಿಮಾ ಬಿಡುಗಡೆ ಸಂದರ್ಭದಲ್ಲಿ, ಘೋಷಣೆ ಸಂದರ್ಭದಲ್ಲಿ ಇದು ಹೆಚ್ಚಿರುತ್ತದೆ’ ಎಂದಿದ್ದಾರೆ ಅವರು.
Most of the times, Almost every-time, I choose to stay silent whenever I see baseless rumours/ fabricated lies/ incorrect statements being spread with or without motives(God knows) but it’s high-time that I react as it keeps happening consistently and doesn’t seem to cease;… https://t.co/XXKcpyUbEC
— Sai Pallavi (@Sai_Pallavi92) December 11, 2024
ಲೀಗಲ್ ನೋಟಿಸ್ ನೀಡುವ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದಾರೆ. ‘ಮುಂದಿನ ಬಾರಿ ಯಾವುದಾದರೂ ಪ್ರತಿಷ್ಠಿತ ಪೇಜ್ ಅಥವಾ ಮಾಧ್ಯಮಗಳು ಈ ರೀತಿಯ ಸುದ್ದಿ ಮಾಡಿದರೆ ನಾವು ಲೀಗಲ್ ಆಗಿ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾಕ್ಕೆ ಸಾಯಿ ಪಲ್ಲವಿ ಪಡೆಯುತ್ತಿರುವ ಸಂಭಾವನೆ ಎಷ್ಟು?
ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆ ಪಾತ್ರ ಮಾಡುತ್ತಿದ್ದಾರೆ. ರಾವಣನಾಗಿ ಯಶ್ ನಟಿಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.