‘ಸಲಾರ್’ ಕತೆಯ ಬಗ್ಗೆ ರಾಜಮೌಳಿಗೆ ಹಲವು ಅನುಮಾನ, ಪ್ರಶಾಂತ್ ನೀಲ್ ಕ್ಷಮೆ ಕೇಳಿದ್ದೇಕೆ?
Salaar Movie: ‘ಸಲಾರ್’ ಸಿನಿಮಾ ಬಿಡುಗಡೆಗೆ ಕಲವೇ ದಿನಗಳು ಬಾಕಿ ಇದೆ. ಈ ನಡುವೆ ರಾಜಮೌಳಿ, ಪ್ರಶಾಂತ್ ನೀಲ್ ಬಳಿ ‘ಸಲಾರ್’ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ದೇಶದಾದ್ಯಂತ ಬಲು ಜೋರಾಗಿ ನಡೆಯುತ್ತಿದೆ. ‘ಸಲಾರ್’ ಸಿನಿಮಾದ ಮೊದಲ ಟಿಕೆಟ್ ಅನ್ನು ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕ ಎನ್ನಿಸಿಕೊಂಡಿರುವ ಎಸ್ಎಸ್ ರಾಜಮೌಳಿಗೆ ನೀಡಲಾಗಿದೆ. ‘ಸಲಾರ್’ ಸಿನಿಮಾದ ಪ್ರಚಾರಕ್ಕೆ ರಾಜಮೌಳಿಯನ್ನು ಚಿತ್ರತಂಡ ಬಳಸಿಕೊಳ್ಳುತ್ತಿದೆ.
ರಾಜಮೌಳಿ, ಪ್ರಭಾಸ್ರ ಆತ್ಮೀಯ ಗೆಳೆಯನೂ ಆಗಿರುವ ಕಾರಣ, ‘ಸಲಾರ್’ ಪ್ರಚಾರವನ್ನು ರಾಜಮೌಳಿ ಮಾಡಿದ್ದಾರೆ. ‘ಸಲಾರ್’ ಚಿತ್ರತಂಡದ ವಿಶೇಷ ಸಂದರ್ಶನವನ್ನು ಎಸ್ಎಸ್ ರಾಜಮೌಳಿ ಮಾಡಿದ್ದಾರೆ. ಆ ಸಂದರ್ಶನದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರುಗಳು ಭಾಗಿಯಾಗಿದ್ದಾರೆ. ಸಂದರ್ಶನದ ಟೀಸರ್ ಇದೀಗ ಹೊರಬಿದ್ದಿದ್ದು ಪೂರ್ಣ ಸಂದರ್ಶನ ಡಿಸೆಂಬರ್ 19ಕ್ಕೆ ಬಿಡುಗಡೆ ಆಗಲಿದೆ.
ಇದನ್ನೂ ಓದಿ:‘ಸಲಾರ್’ ಬುಕಿಂಗ್ಗೆ ಭರ್ಜರಿ ರೆಸ್ಪಾನ್ಸ್; ಮುಂಜಾನೆ 5 ಗಂಟೆ ಶೋಗಳು ಸೋಲ್ಡ್ಔಟ್
ಸಂದರ್ಶನದಲ್ಲಿ, ರಾಜಮೌಳಿ, ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮುಖ್ಯವಾದುದೆಂದರೆ, ‘ಸಲಾರ್’ ಸಿನಿಮಾಕ್ಕೂ ‘ಕೆಜಿಎಫ್’ಗೂ ಸಂಬಂಧ ಇದೆಯೇ ಎಂಬ ಪ್ರಶ್ನೆ ಕೇಳಿದ್ದಾರೆ. ಖಾನ್ಸಾರ್ ಸಿಟಿ, ಡೈನೋಸರ್, ‘ಸಲಾರ್’ ಯಾರು? ಇನ್ನೂ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ ರಾಜಮೌಳಿ. ಸಂದರ್ಶನದ ಮಧ್ಯದಲ್ಲಿ, ‘ನೀವು ನನಗೆ ನಿರಾಸೆ ಉಂಟು ಮಾಡಿದಿರಿ’ ಎಂದು ರಾಜಮೌಳಿ, ನೀಲ್ಗೆ ಹೇಳಿದ್ದಾರೆ. ಅದಕ್ಕೆ ನೀಲ್ ಕ್ಷಮೆ ಸಹ ಕೇಳಿದ್ದಾರೆ.
View this post on Instagram
ಪ್ರಶಾಂತ್ ನೀಲ್ ಸಿನಿಮಾ ನಿರ್ದೇಶನ ಮಾಡುವ ಶೈಲಿಯ ಬಗ್ಗೆ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಕೆಲವು ದೂರುಗಳನ್ನು ಸಹ ರಾಜಮೌಳಿಯ ಬಳಿ ಹೇಳಿಕೊಂಡಿದ್ದಾರೆ. ಸಂದರ್ಶನದಲ್ಲಿ ನಾಲ್ಕೂ ಜನ ನಕ್ಕು, ನಲಿದು ಎಂಜಾಯ್ ಮಾಡಿದ್ದಾರೆ. ಸಂದರ್ಶನದ ಟೀಸರ್ ಪ್ರಸ್ತುತ ಹೊಂಬಾಳೆಯ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಪೂರ್ಣ ಸಂದರ್ಶನ ಡಿಸೆಂಬರ್ 19ರಂದು ಹೊಂಬಾಳೆ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ