‘ಕರ್ಮ ಎಲ್ಲವನ್ನೂ ಸರಿ ಮಾಡುತ್ತದೆ’; ಸಮಂತಾ ಜೊತೆ ಡೇಟ್ ಮಾಡ್ತಿರೋ ಪತಿಗೆ ತಿವಿದ್ರಾ ರಾಜ್ ಪತ್ನಿ?

ಸಮಂತಾ ಅವರು 'ದಿ ಫ್ಯಾಮಿಲಿ ಮ್ಯಾನ್' ನಿರ್ದೇಶಕ ರಾಜ್ ನಿದಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿವೆ. ರಾಜ್ ಅವರು ಈಗಾಗಲೇ ವಿವಾಹಿತರಾಗಿದ್ದಾರೆ. ಅವರ ಪತ್ನಿ ಶ್ಯಾಮಲಿ ಅವರ ಕರ್ಮದ ಬಗ್ಗೆ ಮಾಡಿದ ನಿಗೂಢ ಪೋಸ್ಟ್‌ಗಳು ಈ ವದಂತಿಗಳಿಗೆ ಇಂಬು ನೀಡಿದೆ.

‘ಕರ್ಮ ಎಲ್ಲವನ್ನೂ ಸರಿ ಮಾಡುತ್ತದೆ’; ಸಮಂತಾ ಜೊತೆ ಡೇಟ್ ಮಾಡ್ತಿರೋ ಪತಿಗೆ ತಿವಿದ್ರಾ ರಾಜ್ ಪತ್ನಿ?
ರಾಜ್, ಸಮಂತಾ ಹಾಗೂ ಶ್ಯಾಮಲಿ

Updated on: Jun 02, 2025 | 7:37 AM

ಸಮಂತಾ (Samantha) ಅವರು ವಿಚ್ಛೇದನದ ಬಳಿಕ ಸೈಲೆಂಟ್ ಆಗಿದ್ದರು. ಅವರು ಎರಡನೇ ಮದುವೆ ಆಗುತ್ತಾರಾ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಹೀಗಿರುವಾಗಲೇ ಅವರು ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕ ರಾಜ್ ನಿದಿಮೋರು ಜೊತೆ ಡೇಟಿಂಗ್ ಆರಂಭಿಸಿದ್ದಾರೆ ಎನ್ನಲಾಗಿದೆ. ಇಲ್ಲಿ ಅಚ್ಚರಿಯ ವಿಚಾರ ಎಂದರೆ ರಾಜ್​ಗೆ ಈಗಾಗಲೇ ಒಂದು ಮದುವೆ ಆಗಿದೆ. ಆದರೆ, ಕಾನೂನು ಪ್ರಕಾರ ಇವರು ವಿಚ್ಛೇದನ ಪಡೆದಿಲ್ಲ. ಪತ್ನಿ ಜೊತೆ ಅವರು ಸಂಬಂಧ ಕಡಿದುಕೊಳ್ಳೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿ ಅವರು ನಿಗೂಢಾರ್ಥದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಸಮಂತಾ ಹಾಗೂ ರಾಜ್ ಮೊದಲ ಬಾರಿ ‘ಫ್ಯಾಮಿ ಮ್ಯಾನ್ ಸೀಸನ್ 2’ನಲ್ಲಿ ಒಟ್ಟಾಗಿ ಕೆಲಸ ಮಾಡಿದರು. ಇದಾದ ಬಳಿಕ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದರು. ಆ ಬಳಿಕ ಸಮಂತಾ ಹಾಗೂ ರಾಜ್ ‘ಸಿಟಾಡೆಲ್’ ಸರಣಿಗಾಗಿ ಒಂದಾದರು. ಈ ವೇಳೆ ಇವರ ಮಧ್ಯೆ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಮೂಡಿದೆ.  ಆಗಾಗ ಇವರು ಒಟ್ಟಿಗೆ ಕಾಣಿಸಿಕೊಳ್ಳುತ್ತಾ ಇದ್ದಾರೆ. ಈಗ ರಾಜ್ ಪತ್ನಿ ಶ್ಯಾಮಲಿ ಅವರು ಕರ್ಮದ ಬಗ್ಗೆ ಪೋಸ್ಟ್ ಮಾಡಿದ್ದಾರೆ.

‘ಕಾಲ ಎಲ್ಲವನ್ನೂ ಬಯಲು ಮಾಡುತ್ತದೆ. ಕರ್ಮ ಸರಿ ಪಡಿಸುತ್ತದೆ ಮತ್ತು ವಿಶ್ವ ವಿನಮ್ರವಾಗುತ್ತದೆ’ ಎಂದು ಹಾಕಿಕೊಂಡಿದ್ದಾರೆ.  ಇಷ್ಟೇ ಅಲ್ಲ, ‘ಆತ್ಮ ಎಚ್ಚರವಾದಾಗ ಎಲ್ಲವೂ ಅರ್ಥವಾಗೋಕೆ ಆರಂಭ ಆಗುತ್ತದೆ’ ಎಂದು ಅವರು ಹೇಳಿದ್ದಾರೆ. ಅವರ ಈ ಸರಣಿ ಪೋಸ್ಟ್​ಗಳು ಅನುಮಾನ ಹುಟ್ಟುಹಾಕುತ್ತಿವೆ.

ಇದನ್ನೂ ಓದಿ
‘ಥಗ್ ಲೈಫ್’ ಚಿತ್ರಕ್ಕಿಂದು ನಿರ್ಣಾಯಕ ದಿನ; ಸಿನಿಮಾ ಪ್ರದರ್ಶನ ಅನುಮಾನ
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

ಇದನ್ನೂ ಓದಿ: ಸಮಂತಾ ಹಾಗೂ ರಾಜ್ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?

ರಾಜ್ ಹಾಗೂ ಶ್ಯಾಮಲಿ ಡೇ ಅವರು ವಿಚ್ಛೇದನ ಪಡೆದಿಲ್ಲ. ಇಬ್ಬರೂ ಒಟ್ಟಾಗಿ ವಾಸಿಸುತ್ತಿರುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ. ಇವರ ವಿವಾಹಕ್ಕೆ ಈಗ 10 ವರ್ಷ. ಶ್ಯಾಮಲಿ ಅವರು ಹಿಂದಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕಿ ಆಗಿ ಕೆಲಸ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಈ ರೀತಿಯ ಸಂದೇಶಗಳನ್ನು ಹಂಚಿಕೊಂಡಿರುವುದೇ ಹೆಚ್ಚು. ಪತಿಯ ಜೊತೆ ಇರೋ ಫೋಟೋಗಳು ಇಲ್ಲವೇ ಇಲ್ಲ. ತಮ್ಮ ವೈಯಕ್ತಿಕ ಫೋಟೋಗಳನ್ನು ಕೂಡ ಅವರು ಹಂಚಿಕೊಂಡಿದ್ದು ಕಡಿಮೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.