
ಪತಿಯಿಂದ ವಿಚ್ಛೇದನ ಪಡೆದ ನಂತರದಲ್ಲಿ ಸಮಂತಾ (Samantha) ಅವರು ತುಂಬಾನೇ ಬದಲಾಗಿದ್ದಾರೆ. ಅವರು ಡೋಂಟ್ ಕೇರ್ ಆ್ಯಟಿಟ್ಯೂಡ್ ಅಳವಡಿಸಿಕೊಂಡಿದ್ದಾರೆ. ವಿಚ್ಛೇದನ ಪಡೆದುಕೊಂಡ ಬಳಿಕ ಸಮಂತಾ ಅವರಿಗೆ ಇದ್ದ ಡಿಮ್ಯಾಂಡ್ ಹೆಚ್ಚಿದೆ. ಇತ್ತೀಚೆಗೆ ಅವರು ಡ್ಯಾನ್ಸ್ ಮಾಡಿದ ‘ಹು ಅಂತಿಯಾ ಮಾವ..’ ಹಾಡು ಸೂಪರ್ ಹಿಟ್ ಆಯಿತು. ಅವರ ಅಭಿಮಾನಿ ಬಳಗ ದೊಡ್ಡದಾಯಿತು. ಆದರೆ ಒಂದು ವರ್ಗದ ಜನರು ಸಮಂತಾರನ್ನು ದ್ವೇಷಿಸುತ್ತಿದ್ದಾರೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಬರುತ್ತಿವೆ. ಆದರೆ ಈ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ದೇಶ ವಿದೇಶದಲ್ಲಿ ಸುತ್ತಾಡುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇಂದು (ಫೆಬ್ರವರಿ 1) ಸಮಂತಾ ಮುಂಬೈನಲ್ಲಿ (Mumbai) ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಶರ್ಟ್ ಎಲ್ಲರ ಗಮನ ಸೆಳೆದಿದೆ.
ಸಾಮಾನ್ಯವಾಗಿ ಟ್ರೋಲ್ಗಳಿಗೆ ಸಮಂತಾ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಬಗ್ಗೆ ಅನೇಕ ಟ್ರೋಲ್ಗಳು ಹರಿದಾಡಿವೆ. ಈ ಎಲ್ಲದಕ್ಕೂ ಸಮಂತಾ ಉತ್ತರ ನೀಡಿಲ್ಲ. ಆದರೆ, ಈ ರೀತಿ ಟೀಕೆ ಮಾಡುವವರು ಹಾಗೂ ಟ್ರೋಲ್ ಮಾಡುವವರಿಗೆ ಸಮಂತಾ ಈಗ ಒಂದೇ ಲೈನ್ ಮೂಲಕ ಉತ್ತರ ನೀಡಿದ್ದಾರೆ. ಅವರು ತೊಟ್ಟಿರುವ ಶರ್ಟ್ ಮೇಲೆ ಎಫ್ ವರ್ಡ್ ಇದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಟ್ರೋಲಿಗರಿಗೆ ಸಮಂತಾ ಓಪನ್ ಆಗಿಯೇ ಉತ್ತರ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.
ಸಮಂತಾ ಮುಂಬೈಗೆ ತೆರಳಿದ್ದಾರೆ. ಸಿನಿಮಾ ಕೆಲಸದ ನಿಮಿತ್ತ ಅವರು ಅಲ್ಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಸಮಂತಾ ಕೈಯಲ್ಲಿ ಈಗ ಅನೇಕ ಆಫರ್ಗಳಿವೆ. ಫಿಲಿಪ್ ಜಾನ್ ನಿರ್ದೇಶನದ ‘ಅರೇಂಜ್ಮೆಂಟ್ಸ್ ಆಫ್ ಲವ್’ ಇಂಗ್ಲಿಷ್ ಸಿನಿಮಾದಲ್ಲಿ ದ್ವಿಲಿಂಗಿ ಮಹಿಳೆಯ ಪಾತ್ರ ಮಾಡುತ್ತಿದ್ದಾರೆ. ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಲೈಂಗಿಕ ಆಸಕ್ತಿ ಇರುವ ತಮಿಳು ಮಹಿಳೆಯಾಗಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಗ್ಗೆ ಅವರು ವಿಶೇಷ ಆಸಕ್ತಿ ಇಟ್ಟುಕೊಂಡಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.
ಇತ್ತೀಚೆಗೆ ಅವರು ಸ್ವಿಜರ್ಲೆಂಡ್ಗೆ ತೆರಳಿದ್ದರು. ಅಲ್ಲಿ ಹಾಯಾಗಿ ಸಮಯ ಕಳೆದು ಬಂದಿದ್ದರು. ಹಿಮಚ್ಛಾದಿತ ಪ್ರದೇಶಗಳಲ್ಲಿ ಸ್ಕೀಯಿಂಗ್ ಮಾಡಲಾಗುತ್ತದೆ. ಅಂದರೆ, ಕಾಲಿಗೆ ಉದ್ದನೆಯ ಹಲಗೆ ರೀತಿಯ ವಸ್ತುವನ್ನು ಕಟ್ಟಿಕೊಂಡು, ಕೈನಲ್ಲಿ ಕೋಲು ಹಿಡಿದುಕೊಂಡು ಹಿಮದಲ್ಲಿ ಜಾರಿ ಹೋಗುತ್ತಾರೆ. ಇದನ್ನು ಸಮಂತಾ ಮಾಡಿದ್ದಾರೆ. ಇದಕ್ಕಾಗಿ ಅವರು ದುಬಾರಿ ಜಾಕೆಟ್ ಖರೀದಿಸಿದ್ದರು. ಸಮಂತಾ Toni Sailer ಬ್ರ್ಯಾಂಡ್ನ ಹಳದಿ ಬಣ್ಣದ ಜಾಕೆಟ್ ಖರೀದಿಸಿದ್ದಾರೆ. ಇದಕ್ಕೆ ಅವರು 75 ಸಾವಿರ ರೂಪಾಯಿ ನೀಡಿದ್ದಾರೆ.
ಇದನ್ನೂ ಓದಿ: ‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ
Samantha: ಸಮಂತಾ ಸ್ಕೀಯಿಂಗ್ ಪಯಣ ಎಷ್ಟು ಕಷ್ಟವಿತ್ತು? ವಿಡಿಯೋ ಸಮೇತ ವಿವರಿಸಿದ ನಟಿ