Samantha: ವೈರಲ್ ಆಗ್ತಿದೆ ಸಮಂತಾ-ನಾಗಚೈತನ್ಯ ಮದುವೆ ಫೋಟೋ; ಮತ್ತೆ ಒಂದಾಗ್ತಾರಾ ಮಾಜಿ ದಂಪತಿ?
Naga Chaitanya: ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆದ ಬಳಿಕ ಸಮಂತಾ ರುತ್ ಪ್ರಭು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇದ್ದ ಒಂದಷ್ಟು ಹಳೇ ಫೋಟೋಗಳನ್ನು ತೆಗೆದು ಹಾಕಿದ್ದರು. ಅದರಲ್ಲೂ ಮದುವೆಯ ಫೋಟೋಗಳನ್ನು ಜನರಿಗೆ ಕಾಣದಂತೆ ಮಾಡಿದ್ದರು. ಆದರೆ ಈಗ ಅವರ ಮದುವೆಯ ಫೋಟೋ ಮತ್ತೆ ಕಾಣಿಸಲು ಆರಂಭಿಸಿದೆ.

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಜೀವನದಲ್ಲಿ ಅನೇಕ ಏರುಪೇರುಗಳು ಉಂಟಾಗಿವೆ. ನಾಗ ಚೈತನ್ಯ ಅವರನ್ನು ಹಲವು ವರ್ಷ ಪ್ರೀತಿಸಿ ಮದುವೆ ಆದ ಸಮಂತಾ ಏಕಾಏಕಿ ವಿಚ್ಛೇದನ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 2021ರ ಅಕ್ಟೋಬರ್ನಲ್ಲಿ ಅವರು ಡಿವೋರ್ಸ್ (Divorce) ಪಡೆದುಕೊಂಡಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಆ ನಿರ್ಧಾರಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದರ ಕುರಿತಂತೆ ಅನೇಕ ಅಂತೆ-ಕಂತೆಗಳು ಹರಿದಾಡಿದವು. ಅಚ್ಚರಿ ಏನೆಂದರೆ, ಈಗ ಮತ್ತೆ ಸಮಂತಾ ರುತ್ ಪ್ರಭು ಹಾಗೂ ನಾಗ ಚೈತನ್ಯ (Naga Chaitanya) ಅವರು ಒಂದಾಗುತ್ತಾರಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಮದುವೆ ಫೋಟೋ! ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆದ ಬಳಿಕ ಸಮಂತಾ ರುತ್ ಪ್ರಭು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇದ್ದ ಒಂದಷ್ಟು ಹಳೇ ಫೋಟೋಗಳನ್ನು ತೆಗೆದು ಹಾಕಿದ್ದರು. ಅದರಲ್ಲೂ ನಿರ್ದಿಷ್ಟವಾಗಿ ತಮ್ಮ ಮದುವೆಯ ಫೋಟೋಗಳನ್ನು ಜನರಿಗೆ ಕಾಣದಂತೆ ಮಾಡಿದ್ದರು. ಆದರೆ ಈಗ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಫೋಟೋ ಮತ್ತೆ ಕಾಣಿಸಲು ಆರಂಭಿಸಿದೆ. ಸಮಂತಾ ಹೀಗೆ ಮಾಡಲು ಕಾರಣ ಏನು ಎಂದು ಜನರು ತಲೆ ಕೆಡಿಸಿಕೊಂಡಿದ್ದಾರೆ. ಈ ಮಾಜಿ ದಂಪತಿ ಮತ್ತೆ ಒಂದಾಗಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.
ಇದನ್ನೂ ಓದಿ: ಮಾಜಿ ಸೊಸೆಯ ನೆನಪಿಸಿಕೊಂಡ ನಾಗಾರ್ಜುನ, ‘ಸಮಂತಾ ಎಲ್ಲಿ’ ಎಂದು ಪ್ರಶ್ನೆ
ಡಿವೋರ್ಸ್ ಪಡೆದ ಬಳಿಕ ಸಮಂತಾ ಅವರ ಬದುಕು ಸಂಪೂರ್ಣ ಬದಲಾಯಿತು. ಅವರು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಶೈಲಿ ಕೂಡ ಬದಲಾಯಿತು. ಅನೇಕ ದೇಶಗಳಿಗೆ ಅವರು ಭೇಟಿ ನೀಡಿದರು. ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸಿದರು. ಅದರ ನಡುವೆ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಅದರಿಂದ ಹಲವು ತಿಂಗಳ ಕಾಲ ಅವರು ಸಿನಿಮಾ ಕೆಲಸಗಳಿಂದ ದೂರ ಉಳಿಯಬೇಕಾಯಿತು. ಅತ್ತ, ನಾಗ ಚೈತನ್ಯ ಅವರು ನಟಿ ಶೋಭಿತಾ ದುಳಿಪಾಲಾ ಜೊತೆ ಡೇಟಿಂಗ್ ಮಾಡಲು ಆರಂಭಿಸಿದರು. ಈಗ ನಾಗ ಚೈತನ್ಯ ಮತ್ತು ಶೋಭಿತಾ ದೂರಾಗಿರಬಹುದಾ? ಆ ಕಾರಣದಿಂದ ಸಮಂತಾ ಮತ್ತೆ ನಾಗ ಚೈತನ್ಯಗೆ ಹತ್ತಿರ ಆಗಿರಬಹುದು? ಇಂಥ ಹಲವು ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.
View this post on Instagram
ಸಮಂತಾ ಅವರ ಅಪ್ಪಟ ಅಭಿಮಾನಿಗಳು ಈ ಮಾತುಗಳನ್ನು ಒಪ್ಪಿಕೊಂಡಿಲ್ಲ. ಮತ್ತೆ ನಾಗ ಚೈತನ್ಯ ಜೊತೆ ರಾಜಿ ಅಗುವ ಸಾಧ್ಯತೆ ತುಂಬ ಕಡಿಮೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ‘ಸಮಂತಾ ಅವರು ಜೀವನದಲ್ಲಿ ಮುಂದೆ ಸಾಗಿದ್ದಾರೆ. ಮದುವೆ ಆಗಿತ್ತು, ವಿಚ್ಛೇದನ ಆಯಿತು ಎಂಬುದನ್ನೆಲ್ಲ ಅವರೀಗ ಒಪ್ಪಿಕೊಂಡು ಬಹಳ ಮುಂದೆ ಬಂದಿದ್ದಾರೆ. ಈಗ ಮದುವೆ ಫೋಟೋ ಕಾಣಿಸಿದರೂ ಕಾಣಿಸದೇ ಇದ್ದರೂ ಅವರಿಗೆ ಏನೂ ವ್ಯತ್ಯಾಸ ಆಗಲ್ಲ’ ಎಂದು ಅಭಿಮಾನಿಗಳು ಸಮಂತಾ ಪರ ಬ್ಯಾಟ್ ಬೀಸುತ್ತಿದ್ದಾರೆ. ‘ಖುಷಿ’ ಸಿನಿಮಾದ ಬಳಿಕ ಸಮಂತಾ ಅವರು ಮತ್ತೆ ಬ್ರೇಕ್ ತೆಗೆದುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.