ವೆಬ್ ಸೀರಿಸ್​ಗೆ ಗುಡ್ ಬೈ ಹೇಳಿದ ಸಮಂತಾ; ಹುಟ್ಟಿಕೊಂಡ ಅಸಮಾಧಾನ ಏನು?

ಅಮೇಜಾನ್ ಪ್ರೈಮ್ ವೆಬ್ ಸೀರಿಸ್ 'ಸಿಟಾಡೆಲ್: ಹನಿ ಬನಿ'ಯ ಎರಡನೇ ಭಾಗದಲ್ಲಿ ನಟಿಸಲು ಸಮಂತಾ ರುಥ್ ಪ್ರಭು ಅವರು ನಿರಾಕರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೀರ್ಘ ಕಂಟೆಟ್​ಗಳನ್ನು ನೋಡಲು ಜನರು ನಿರಾಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಸಿಟಾಡೆಲ್ ಸರಣಿಯನ್ನು ವೀಕ್ಷಿಸಿದವರೇ ಕಡಿಮೆ ಎಂಬಂತಾಗಿದೆ. ಹೀಗಾಗಿ, ಅವರು ಈ ಸರಣಿ ಮಾಡುತ್ತಿಲ್ಲ.

ವೆಬ್ ಸೀರಿಸ್​ಗೆ ಗುಡ್ ಬೈ ಹೇಳಿದ ಸಮಂತಾ; ಹುಟ್ಟಿಕೊಂಡ ಅಸಮಾಧಾನ ಏನು?
ಸಮಂತಾ

Updated on: Apr 18, 2025 | 7:25 AM

ಸಮಂತಾ ರುಥ್ ಪ್ರಭು (Samantha Ruth Prabhu) ನಟನೆಯ ‘ಖುಷಿ’ ಸಿನಿಮಾ 2023ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರು ನಟಿಸಿದ ಏಕೈಕ ಸೀರಿಸ್ ‘ಸಿಟಾಡೆಲ್: ಹನಿ ಬನಿ’. ಆದರೆ, ಇದು ಪ್ರೇಕ್ಷಕರ ಮನ ಗೆಲ್ಲಲು ವಿಫಲವಾಯಿತು. ಇದಕ್ಕೆ ಕಾರಣ ಹಲವು. ಇದು ಇಂಗ್ಲಿಷ್​ನ ‘ಸಿಟಾಡೆಲ್’ ಸೀರಿಸ್​ನ ರಿಮೇಕ್ ಎಂಬುದು ಒಂದಾದರೆ, ಇದರಲ್ಲಿ ಗ್ರಿಪ್ಪಿಂಗ್ ಸ್ಟೋರಿ ಇರಲಿಲ್ಲ ಎಂಬುದು ಮತ್ತೊಂದು ಕಾರಣ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಹೀಗಿರುವಾಗಲೇ  ಇದಕ್ಕೆ ಎರಡನೇ ಪಾರ್ಟ್ ಮಾಡಲು ಅಮೇಜಾನ್ ಪ್ರೈಮ್ ವಿಡಿಯೋ ಆಸಕ್ತಿ ತೋರಿಸಿದೆ. ಆದರೆ, ಇದಕ್ಕೆ ಸಮಂತಾ ಆಸಕ್ತಿ ತೋರಿಸಿಲ್ಲ.

ಸಮಂತಾ ಅವರು ‘ಸಿಟಾಡೆಲ್’ ಸರಣಿ ಮಾಡಲು ಸಾಕಷ್ಟು ಎಫರ್ಟ್ ಹಾಕಿದ್ದರು. ಅನಾರೋಗ್ಯದ ಮಧ್ಯೆಯೂ ಸಾಕಷ್ಟು ಸ್ಟಂಟ್​ಗಳನ್ನು ಮಾಡಿದ್ದರು. ಶೂಟ್ ಹಾಗೂ ಪ್ರಮೋಷನ್​ಗೆ ಸಿಕ್ಕಾಪಟ್ಟೆ ಓಡಾಡಿದ್ದರು. ವರುಣ್ ಧವನ್ ಕೂಡ ಹೆಚ್ಚಿನ ಶ್ರಮ ಹಾಕಿದ್ದರು. ಈಗ ಸರಣಿಗೆ ಸೀಕ್ವೆಲ್ ಮಾಡಲು ಅಮೇಜಾನ್ ಪ್ರೈಮ್ ವಿಡಿಯೋ ಕಡೆಯವರು ಆಸಕ್ತಿ ತೋರಿಸಿದ್ದಾರೆ. ಆದರೆ, ಸಮಂತಾ ಈ ವೆಬ್ ಸರಣಿ ಬಗ್ಗೆ ನಿರಾಸಕ್ತಿ ತೋರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೀರ್ಘ ಕಂಟೆಟ್​ಗಳನ್ನು ನೋಡಲು ಜನರು ನಿರಾಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಸಿಟಾಡೆಲ್ ಸರಣಿಯನ್ನು ವೀಕ್ಷಿಸಿದವರೇ ಕಡಿಮೆ ಎಂಬಂತಾಗಿದೆ. ಹೀಗಿರುವಾಗ ಮತ್ತೆ ಈ ಸರಣಿ ಮೇಲೆ ಶ್ರಮ ಹಾಕುವುದರಲ್ಲಿ ಅರ್ಥವಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಈ ಕಾರಣಕ್ಕೆ ಅವರು ಈ ವೆಬ್ ಸರಣಿಗೆ ಗುಡ್​ಬೈ ಹೇಳಿದ್ದಾರೆ.

ಇದನ್ನೂ ಓದಿ
ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಸಿನಿಮಾ
ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಸಂಬಂಧ ಈಗ ಹೇಗಿದೆ? ಇಲ್ಲಿದೆ ಉತ್ತರ  
ಪೀರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ನಮಗೆ ಈಗಲೂ ನಾಚಿಕೆಯ ವಿಷಯ; ಸಮಂತಾ
ಚಿತ್ರರಂಗದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಪವನ್ ಕಲ್ಯಾಣ್

ಇದನ್ನೂ ಓದಿ: ನಾಗ ಚೈತನ್ಯ ಮದುವೆಯಿಂದ ಸಮಂತಾಗೆ ದುಃಖ; ಗುರತೇ ಸಿಗದಷ್ಟು ಬದಲಾದ ನಟಿ

ಸಮಂತಾ ರುಥ್ ಪ್ರಭು ಅವರು ವೈಯಕ್ತಿಕ ಜೀವನ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರು ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕ ಏಕಾಂಗಿಯಾಗಿದ್ದರು. ಈಗ ನಿರ್ದೇಶಕ ರಾಜ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೆ. ಇವರು ಶೀಘ್ರವೇ ವಿವಾಹ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಸಮಂತಾ ‘ಮಾ ಇಂಟಿ ಬಂಗಾರಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜ್ ಹಾಗೂ ಡಿಕೆ ನಿರ್ದೇಶನದ ‘ರಕ್ತ ಬ್ರಹ್ಮಾಂಡಂ: ದಿ ಬ್ಲಡಿ ಕಿಂಗ್​ಡಮ್ ಹೆಸರಿನ್ ಸೀರಿಸ್​ನ ಭಾಗವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.