ಮಮ್ಮೂಟಿ ಜೊತೆ ಸಮಂತಾ ಸಿನಿಮಾ; ಆ್ಯಕ್ಷನ್ ಚಿತ್ರ ಒಪ್ಪಿಕೊಂಡ ನಟಿ
ಜೂನ್ 15ರಿಂದ ಚೆನ್ನೈನಲ್ಲಿ ಈ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ದೊಡ್ಡ ಬ್ರೇಕ್ ಬಳಿಕ ಸಮಂತಾ ಅವರು ಕ್ಯಾಮೆರಾ ಎದುರಿಸುತ್ತಿದ್ದಾರೆ. ಮೈಯೋಸಿಟಿಸ್ ಕಾಯಿಲೆ ಕಾಣಿಸಿಕೊಂಡ ಬಳಿಕ ಸಮಂತಾ ಅದರಿಂದ ರಿಕವರಿ ಆಗುವುದರತ್ತವೇ ಗಮನ ನೀಡಿದರು. ಈಗ ಅವರು ಹೊಸ ಸಿನಿಮಾ ಘೋಷಿಸಿದ್ದಾರೆ.
ನಟಿ ಸಮಂತಾ (Samantha) ಅವರು ಮೈಯೋಸಿಟಿಸ್ ಕಾಯಿಲೆಯಿಂದ ಬಳಲಿದ್ದರು. ಹೀಗಾಗಿ ಅವರು ಹೊಸ ಸಿನಿಮಾ ಒಪ್ಪಿಕೊಳ್ಳೋ ಸಾಹಸ ಮಾಡಿರಲಿಲ್ಲ. ಒಪ್ಪಿಕೊಂಡ ಚಿತ್ರಗಳ ಶೂಟಿಂಗ್ನ ಅವರು ಪೂರ್ಣಗೊಳಿಸಿದ್ದರು. ಆ ಬಳಿಕ ದೇಶ-ವಿದೇಶ ಸುತ್ತಿದ್ದರು. ಈಗ ಸಮಂತಾ ‘ಸಿಟಾಡೆಲ್: ಹನಿ ಬಬ್ಬಿ’ ಸೀರಿಸ್ನ ರಿಲೀಸ್ ನಿರೀಕ್ಷೆಯಲ್ಲಿದ್ದಾರೆ. ಅಮೆರಿಕ ‘ಸಿಟಾಡೆಲ್’ ಸೀರಿಸ್ನ ಭಾರತದ ವರ್ಷನ್ ಇದು. ಈಗ ಸಮಂತಾ ಅವರು ಕಮರ್ಷಿಯಲ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಮಲಯಾಳಂ ಸೂಪರ್ಸ್ಟಾರ್ ಮಮ್ಮೂಟಿ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಅವರು ನಟಿಸುತ್ತಿದ್ದಾರೆ. ಇದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಮಂತಾಗೆ ದಕ್ಷಿಣದಲ್ಲಿ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ, ಹಲವು ಭಾಷೆಯಲ್ಲಿ ಸಿನಿಮಾ ಮೂಡಿ ಬರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜೂನ್ 15ರಿಂದ ಚೆನ್ನೈನಲ್ಲಿ ಈ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ದೊಡ್ಡ ಬ್ರೇಕ್ ಬಳಿಕ ಸಮಂತಾ ಅವರು ಕ್ಯಾಮೆರಾ ಎದುರಿಸುತ್ತಿದ್ದಾರೆ. ಮೈಯೋಸಿಟಿಸ್ ಕಾಯಿಲೆ ಕಾಣಿಸಿಕೊಂಡ ಬಳಿಕ ಸಮಂತಾ ಅದರಿಂದ ರಿಕವರಿ ಆಗುವುದರತ್ತವೇ ಗಮನ ನೀಡಿದರು. ಇದು ಅಪರೂಪದ ಕಾಯಿಲೆ ಆಗಿದ್ದು, ಎಲ್ಲಿಯೂ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ, ಅದಕ್ಕೆ ಚಿಕಿತ್ಸೆಯೂ ಕಷ್ಟ.
ಸಿನಿಮಾ ನಿರ್ಮಾಣದತ್ತವೂ ಸಮಂತಾ ಗಮನ ಹರಿಸುತ್ತಿದ್ದಾರೆ. ಅವರು ‘ಬಂಗಾರಂ’ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ನಿರ್ಮಾಪಕಿ ಆಗಿ ಈ ಸಿನಿಮಾ ಪ್ರಾಮುಖ್ಯತೆ ಪಡೆದದಿದೆ. ಸಮಂತಾ ಅವರು ಸೋಶಿಯಲ್ ಮೀಡಿಯಾ ಮೂಲಕ, ಯೂಟ್ಯೂಬ್ ಮೂಲಕ ತಮ್ಮ ಆರೋಗ್ಯದ ಬಗ್ಗೆ, ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ. ಅವರು ತಮ್ಮದೇ ಆದ ಬಟ್ಟೆ ಬ್ರ್ಯಾಂಡ್ ಹೊಂದಿದ್ದು ಅದರ ಪ್ರಚಾರ ಮಾಡುತ್ತಾರೆ.
ಇದನ್ನೂ ಓದಿ: ದೊಡ್ಡ ಪರದೆಮೇಲೆ ಸಮಂತಾ ಸಿನಿಮಾ ನೋಡಿದ ನಾಗ ಚೈತನ್ಯ; ಮಾಜಿ ಪತ್ನಿಯ ಎಂಟ್ರಿಗೆ ನಕ್ಕ ಹೀರೋ
ಸಮಂತಾ ಅವರು ಸಖತ್ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಫೋಟೋಗಳನ್ನು ಫ್ಯಾನ್ಸ್ ಭರ್ಜರಿ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.