ತೆಲಂಗಾಣ ಸಚಿವನ ಫೋಟೋ ಪೋಸ್ಟ್ ಮಾಡಿ ಡಿಲೀಟ್ ಮಾಡಿದ ಸಮಂತಾ; ಕಾರಣ ಏನು?
ಸಮಂತಾ ಅವರ ಖಾತೆಯಲ್ಲಿ ತೆಲಂಗಾಣ ಸಚಿವ ಕೆ.ಟಿ ರಾಮ್ರಾವ್ ಅವರ ಫೋಟೋ ಪೋಸ್ಟ್ ಮಾಡಲಾಗಿತ್ತು. ಪೋಸ್ಟ್ ಆದ ಕೆಲವೇ ನಿಮಿಷಗಳಲ್ಲಿ ಈ ಫೋಟೋವನ್ನು ಸಮಂತಾ ಖಾತೆಯಿಂದ ಡಿಲೀಟ್ ಮಾಡಲಾಗಿದೆ.
ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ (Social Media) ಖಾತೆ ಮೇಲೆ ಹ್ಯಾಕರ್ಗಳ ಕಣ್ಣು ಆಗಾಗ ಬೀಳುತ್ತಲೇ ಇರುತ್ತದೆ. ಸ್ಟಾರ್ಗಳ ಖಾತೆಗೆ ಕನ್ನ ಹಾಕಿ ಸಂಬಂಧವೇ ಇಲ್ಲದ ಫೋಟೋಗಳನ್ನು ಪೋಸ್ಟ್ ಮಾಡಲಾಗುತ್ತದೆ. ಸಮಂತಾ (Samantha) ಅವರ ಖಾತೆಯಲ್ಲಿ ತೆಲಂಗಾಣ (Telangana) ಸಚಿವರೊಬ್ಬರ ಫೋಟೋ ಪೋಸ್ಟ್ ಆಗಿದೆ. ತಕ್ಷಣಕ್ಕೆ ಅದನ್ನು ಡಿಲೀಟ್ ಮಾಡಲಾಗಿದೆ. ಆದರೆ, ಕೆಲವರು ಇದರ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಂಡು ವೈರಲ್ ಮಾಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ ಎಂದು ಸಮಂತಾ ಹೇಳಿಕೊಂಡಿದ್ದಾರೆ. ಆದರೆ ಫ್ಯಾನ್ಸ್ ವಲಯದಲ್ಲಿ ಬೇರೆಯದೇ ವಿಚಾರ ಓಡಾಡುತ್ತಿದೆ.
ಸಮಂತಾ ಅವರ ಖಾತೆಯಲ್ಲಿ ತೆಲಂಗಾಣ ಸಚಿವ ಕೆ.ಟಿ ರಾಮ್ರಾವ್ ಅವರ ಫೋಟೋ ಪೋಸ್ಟ್ ಮಾಡಲಾಗಿತ್ತು. ಪೋಸ್ಟ್ ಆದ ಕೆಲವೇ ನಿಮಿಷಗಳಲ್ಲಿ ಈ ಫೋಟೋವನ್ನು ಸಮಂತಾ ಖಾತೆಯಿಂದ ಡಿಲೀಟ್ ಮಾಡಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸಮಂತಾ ಅವರ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಅಸಲಿ ಕಾರಣವನ್ನು ಫ್ಯಾನ್ಸ್ ಹುಡುಕಿ ತೆಗೆದಿದ್ದಾರೆ.
ಸಮಂತಾ ಹಾಗೂ ಕೆ.ಟಿ ರಾಮ್ರಾವ್ ಅವರ ಸೋಶಿಯಲ್ ಮೀಡಿಯಾ ಖಾತೆಯನ್ನು ಒಂದೇ ಪಿಆರ್ ಏಜೆನ್ಸಿ ಹ್ಯಾಂಡಲ್ ಮಾಡುತ್ತಿದೆ. ಕೆ.ಟಿ. ರಾಮ್ರಾವ್ ಖಾತೆಗೆ ಪೋಸ್ಟ್ ಆಗಬೇಕಿದ್ದ ಫೋಟೋ ತಪ್ಪಾಗಿ ಸಮಂತಾ ಅವರ ಖಾತೆಯಲ್ಲಿ ಅಪ್ಲೋಡ್ ಆಗಿದೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಬಗ್ಗೆ ಹಲವಾರು ಟ್ವೀಟ್ಗಳನ್ನು ಮಾಡುತ್ತಿದ್ದಾರೆ.
Hmm hmm something is fishy pic.twitter.com/KGiGsFiht5
— Anurag (@Anurag___03) July 5, 2022
ಸಮಂತಾ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. 10 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ನಾಗ ಚೈತನ್ಯ ಹಾಗೂ ಸಮಂತಾ ಮದುವೆ ಆದರು. ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ ಈ ಜೋಡಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಚ್ಛೇದನ ಪಡೆದರು. ‘ಕಾಫಿ ವಿತ್ ಕರಣ್ 7’ ಶೋನಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಇದರ ಪ್ರೋಮೋಗಳು ವೈರಲ್ ಆಗಿವೆ. ವಿಚ್ಛೇದನದ ಬಳಿಕ ಅವರು ಮೊದಲ ಬಾರಿಗೆ ಶೋ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇದಿಕೆ ಮೇಲೆ ಅವರು ವಿಚ್ಛೇದನಕ್ಕೆ ಕಾರಣ ವಿವರಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಮಂತಾ, ಆಲಿಯಾ Etc..: ‘ಕಾಫಿ ವಿತ್ ಕರಣ್’ ಶೋಗೆ ಬರುವ ಸೆಲೆಬ್ರಿಟಿಗಳು ಇವರೇ
Samantha: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಬಹಿರಂಗ ಆಗುವ ಸಮಯ ಬಂತಾ? ಹೆಚ್ಚಿತು ಕೌತುಕ