ವಿಚ್ಛೇದನದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳೋಕೆ ರೆಡಿ ಆದ್ರು ಸಮಂತಾ

ಜೆಮಿನಿ ಟಿವಿಯಲ್ಲಿ ‘ಎವರು ಮೀಲೊ ಕೋಟಿಶ್ವರುಲು’ ಶೋ ಪ್ರಸಾರವಾಗುತ್ತಿದೆ. ‘ಕೌನ್​ ಬನೇಗಾ ಕರೋಡ್​​ಪತಿಯ’ ತೆಲುಗು ವರ್ಷನ್​ ಇದು. ಇದನ್ನು ಖ್ಯಾತ ನಟ ಜ್ಯೂ.ಎನ್​ಟಿಆರ್​ ನಡೆಸಿಕೊಡುತ್ತಿದ್ದಾರೆ.

ವಿಚ್ಛೇದನದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳೋಕೆ ರೆಡಿ ಆದ್ರು ಸಮಂತಾ
ಸಮಂತಾ

ಸಮಂತಾ ಅಕ್ಕಿನೇನಿ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಜತೆ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹೊರ ಬಿದ್ದಾಗಿನಿಂದಲೇ ಅವರ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿವೆ. ಈಗ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಇದು ಅವರ ಖಾಸಗಿ ವಿಚಾರದ ಬಗ್ಗೆ ಅಲ್ಲ, ಅವರು ಸುದ್ದಿ ಆಗೋಕೆ ಕಿರುತೆರೆ ಕಾರಣ.

ಜೆಮಿನಿ ಟಿವಿಯಲ್ಲಿ ‘ಎವರು ಮೀಲೊ ಕೋಟಿಶ್ವರುಲು’ ಶೋ ಪ್ರಸಾರವಾಗುತ್ತಿದೆ. ‘ಕೌನ್​ ಬನೇಗಾ ಕರೋಡ್​​ಪತಿಯ’ ತೆಲುಗು ವರ್ಷನ್​ ಇದು. ಇದನ್ನು ಖ್ಯಾತ ನಟ ಜ್ಯೂ.ಎನ್​ಟಿಆರ್​ ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಸಮಂತಾ ಅವರು ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಸಮಂತಾ ವಿಚ್ಛೇದನ ಪಡೆದ ನಂತರ ಒಂದು ಬ್ರೇಕ್​ ಪಡೆದುಕೊಂಡಿದ್ದರು. ಆದರೆ, ಈಗ ಅವರು ಮತ್ತೆ ಕೆಲಸಕ್ಕೆ ಮರಳೋಕೆ ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಅವರು ಇತ್ತೀಚೆಗೆ ಜಾಹೀರಾತಿನ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಇದರ ಜತೆಗೆ ಅವರು ಹೊಸ ಸಿನಿಮಾದ ಕಥೆ ಕೂಡ ಕೇಳುತ್ತಿದ್ದಾರೆ. ಈಗ ಅವರು ಕಿರುತೆರೆ ಶೋನಲ್ಲಿ ಮರಳೋಕೆ ರೆಡಿ ಆಗಿದ್ದಾರೆ ಎನ್ನಲಾಗಿದೆ.

ಚರ್ಚೆ ಆಗುತ್ತಿದೆ ಸಮಂತಾ ಟ್ಯಾಟೂ ವಿಚಾರ

ಸಮಂತಾ ದೇಹದ ಮೇಲೆ ಮೂರು ಟ್ಯಾಟೂಗಳಿವೆ. ಅವರು ಮೊದಲ ಬಾರಿಗೆ ವೈಎಂಸಿ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಇದರ ಅರ್ಥ ‘ಯೇ ಮಾಯಾ ಚೇಸಾವೆ’. ಈ ಸಿನಿಮಾ ರಾತ್ರೋರಾತ್ರಿ ಸಮಂತಾ ಅವರನ್ನು ಸ್ಟಾರ್​ ಆಗಿ ಮಾಡಿತು. ಮತ್ತೊಂದು ಟ್ಯಾಟೂನಲ್ಲಿ ನಾಗ ಚೈತನ್ಯ ಅವರ ಸಹಿ ಇದೆ. ಸಾಕಷ್ಟು ಫೋಟೋಶೂಟ್​​ಗಳಲ್ಲಿ ಈ ಸಹಿ ಎದ್ದು ಕಾಣಿಸಿದೆ. ಮತ್ತೊಂದು ಟ್ಯಾಟೂ ಬಾಣದ ಚಿಹ್ನೆಯನ್ನು ಹೊಂದಿದೆ. ನಾಗ ಚೈತನ್ಯ ಕೂಡ ಇದೇ ಟ್ಯಾಟೂ ಹಾಕಿಸಿಕೊಂಡಿದ್ದರು.

ಬಾಲಿವುಡ್​ ಸ್ಟಾರ್​ ನಟಿ ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್​ ಅವರನ್ನು ಪ್ರೀತಿಸುತ್ತಿದ್ದಾಗ ಆರ್​ಕೆ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಇನ್ನು, ನಯನತಾರಾ ಪಿಡಿ (ಪ್ರಭುದೇವ) ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ, ಇವೆರಡೂ ಸಂಬಂಧ ಉಳಿದಿಲ್ಲ. ನಂತರ ಅವರು ಲೇಸರ್​ ಸಹಾಯದಿಂದ ಈ ಟ್ಯಾಟೂ ತೆಗೆಸಿ ಹಾಕಿದ್ದರು. ಈಗ ಸಮಂತಾ ಕೂಡ ಇದೇ ಮಾರ್ಗ ತುಳಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಭಿಮಾನಿ ವಲಯದಲ್ಲಿ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ಸಮಂತಾರ ಪ್ರತಿಭೆ ಮತ್ತು ಜನಪ್ರಿಯತೆ ಬಗ್ಗೆ ನಾಗ ಚೈತನ್ಯರಲ್ಲಿ ಹುಟ್ಟಿದ ಈರ್ಷ್ಯೆಯೇ ಡಿವೋರ್ಸ್​ಗೆ ಕಾರಣವಾಯಿತೇ?

ಸಮಂತಾ ದೇಹದ ಮೇಲಿರುವ ಟ್ಯಾಟೂ ಗತಿಯೇನು? ಅದರಲ್ಲಿದೆ ನಾಗ ಚೈತನ್ಯ ನೆನಪು

Read Full Article

Click on your DTH Provider to Add TV9 Kannada