Samantha Raj Nidimoru Marriage: ಎರಡನೇ ಮದುವೆ ಆದ ಸಮಂತಾ; ಕೆಲಸ ಮಾಡಿದ ನಿರ್ದೇಶಕನ ಜೊತೆ ಹೊಸಬಾಳು
ಸಮಂತಾ-ರಾಜ್ ನಿಡಿಮೋರು ಮದುವೆ: ನಟಿ ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಈ ಮದುವೆ ನಡೆದಿದೆ. ನಾಗ ಚೈತನ್ಯರೊಂದಿಗಿನ ದಾಂಪತ್ಯ ಮುರಿದು ಬಿದ್ದ ನಂತರ ಸಮಂತಾ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಕೆಲಸ ಮಾಡುವಾಗ ರಾಜ್ ಜೊತೆ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿದೆ.

ನಟಿ ಸಮಂತಾ (Samantha) ಹಾಗೂ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕ ರಾಜ್ ನಿಡಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಈಗ ಇದು ನಿಜವಾಗಿದೆ. ರಾಜ್ ಜೊತೆ ಸಮಂತಾ ವಿವಾಹ ಆಗಿದ್ದಾರೆ. ಇಂದು (ಡಿಸೆಂಬರ್ 1) ಈ ಮದುವೆ ನಡೆದಿದೆ. ಅವರ ಹೊಸ ಬಾಳಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಕೋರುತ್ತಾ ಇದ್ದಾರೆ.
ಸಮಂತಾ ಅವರು ಮೊದಲು ನಾಗ ಚೈತನ್ಯ ಅವರನ್ನು ವಿವಾಹ ಆದರು. ನಾಲ್ಕೇ ವರ್ಷಗಳಲ್ಲಿ ಇವರ ದಾಂಪತ್ಯ ಕೊನೆ ಆಯಿತು. ಆ ಬಳಿಕ ಸಮಂತಾ ಪ್ರತ್ಯೇಕವಾಗಿ ಜೀವನ ನಡೆಸಲು ಆರಂಭಿಸಿದರು. ಕಳೆದ ವರ್ಷಾಂತ್ಯಕ್ಕೆ ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹ ನಡೆದಿತ್ತು. ಈ ವರ್ಷ ಸಮಂತಾ ಮದುವೆ ಆಗಿದ್ದಾರೆ.
ಸಮಂತಾ ಅವರು ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಕ್ಯಾಪ್ಶನ್ನಲ್ಲಿ ವಿವಾಹದ ಡೇಟ್ ಹಾಕಿದ್ದಾರೆ. ಪೂಜಾ ವಿಧಿ-ವಿಧಾನದ ಫೋಟೋ ಜೊತೆಗೆ ರಾಜ್ ಜೊತೆ ಇರುವ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಈ ಮದುವೆ ನಡೆದಿದೆ. ಸಮಂತಾ ಅವರು ಜಗ್ಗಿ ವಾಸುದೇವ್ ಅವರ ಅನುಯಾಯಿ. ಹೀಗಾಗಿ, ಇಶಾದಲ್ಲಿಯೇ ಈ ಮದುವೆ ನಡೆದಿದೆ.
ಸಮಂತಾ ಪೋಸ್ಟ್
View this post on Instagram
‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಸಮಂತಾ ನಟಿಸಿದ್ದರು. ಈ ಸರಣಿಗೆ ರಾಜ್ ಅವರ ನಿರ್ದೇಶನ ಇತ್ತು.‘ಸಿಟಾಡೆಲ್’ ಸರಣಿಯಲ್ಲೂ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಇಬ್ಬರ ನಡುವೆ ಪರಿಚಯ ಆಗುವಾಗ ರಾಜ್ಗೆ ಆಗಲೇ ವಿವಾಹ ಆಗಿತ್ತು. ಅವರು ಶ್ಯಾಮಲಿ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದರು. ಈಗ ಸಮಂತಾ ಅವರು ರಾಜ್ ಜೊತೆಯೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದು ಶ್ಯಾಮಲಿ ಕೋಪಕ್ಕೆ ಕಾರಣ ಆಗಿದೆ. ಶ್ಯಾಮಲಿ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ರಾಜ್ನ ಟೀಕಿಸಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ನಡೀತಿದೆ ಸಮಂತಾ ಎರಡನೇ ಮದುವೆ? ನಿರ್ದೇಶಕನ ಜೊತೆ ವಿವಾಹ
ಸಮಂತಾ ಅವರು ಇತ್ತೀಚೆಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ಅವರು ಸಿನಿಮಾ ಮಾಡೋದನ್ನು ಕಡಿಮೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ರಾಜ್ ಕಡೆಯಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ಈ ಗೆಳೆತನ ಪ್ರೀತಿಯಾಗಿ ಬದಲಾಗಿದೆ. ಈಗ ಪ್ರೀತಿಗೆ ಹೊಸ ಅರ್ಥ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:13 pm, Mon, 1 December 25




