69ನೇ ಫಿಲಂಫೇರ್: ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳ ಪಟ್ಟಿ
69ನೇ ಫಿಲಂಫೇರ್ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ. ಹಲವು ಜನಪ್ರಿಯ ಸಿನಿಮಾಗಳು ನಾಮಿನೇಟ್ ಆಗಿದ್ದವು, ಹೆಚ್ಚಿನ ಪ್ರಶಸ್ತಿ ‘ಕಾಂತಾರ’ ಸಿನಿಮಾದ ಪಾಲಾಗಿದೆ.
ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದು ಎನ್ನಲಾಗುವ ಫಿಲಂಫೇರ್ 69ನೇ ಸಾಲಿನ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಿದೆ. ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳಿಗೆ ಆಯಾ ಭಾಷೆಯ ಸಿನಿಮಾಗಳೊಟ್ಟಿಗೆ ಹೋಲಿಸಿ ನೋಡಿ ಪ್ರಶಸ್ತಿ ಘೋಷಿಸಲಾಗಿದೆ. ಈ ಪ್ರಶಸ್ತಿ ಆನ್ಲೈನ್ ಮತ ಹಾಗೂ ವಿಮರ್ಶಕರ ಆಧಾರದಲ್ಲಿ ನೀಡಲಾಗಿದೆ. ಕನ್ನಡದ ಕೆಲವು ಸಿನಿಮಾಗಳು ಪ್ರಶಸ್ತಿ ಪಡೆದುಕೊಂಡಿದ್ದು, ಹೆಚ್ಚಿನ ಪ್ರಶಸ್ತಿಗಳು ‘ಕಾಂತಾರ’ ಪಾಲಾಗಿವೆ.
ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ- ಚೈತ್ರಾ ಆಚಾರ್ (ತಲೆ ದಂಡ)
ಅತ್ಯುತ್ತಮ ಸಿನಿಮಾ- ಕಾಂತಾರ
ಅತ್ಯುತ್ತಮ ನಿರ್ದೇಶಕ- ಕಿರಣ್ ರಾಜ್ (777 ಚಾರ್ಲಿ)
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ- ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ)
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ- ಸಪ್ತಮಿ ಗೌಡ (ಕಾಂತಾರ)
ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ- ಧರಣಿ ಮಂಡಲ ಮಧ್ಯದೊಳಗೆ
ಅತ್ಯುತ್ತಮ ಪೋಷಕ ನಟ- ಅಚ್ಯುತ್ ಕುಮಾರ್ (ಕಾಂತಾರ)
ಅತ್ಯುತ್ತಮ ಪೋಷಕ ನಟಿ- ಮಂಗಳ ಎನ್ (ತಲೆದಂಡ)
ಇದನ್ನೂ ಓದಿ: 69ನೇ ಫಿಲಂ ಫೇರ್ ಪ್ರಶಸ್ತಿ ಪಡೆದ ಬಾಲಿವುಡ್ ನಟರ ಪಟ್ಟಿ ಇಂತಿದೆ
ಅತ್ಯುತ್ತಮ ಸಂಗೀತ- ಅಜನೀಶ್ ಲೋಕನಾಥ್ (ಕಾಂತಾರ)
ಅತ್ಯುತ್ತಮ ಗೀತ ಸಾಹಿತ್ಯ- ವಿ ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ-ಬನಾರಸ್)
ಅತ್ಯುತ್ತಮ ಹಿನ್ನೆಲೆ ಗಾಯಕ- ವಿಘ್ನೇಶ್ (ವರಾಹ ರೂಪಂ-ಕಾಂತಾರ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ-ವಿಕ್ರಾಂತ್ರೋಣ)
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ