AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅದೇ ಕಣ್ಣು’ ಖ್ಯಾತಿಯ ಸತೀಶ್ ಈಗೇನು ಮಾಡುತ್ತಿದ್ದಾರೆ? ಪುನೀತ್ ಭೇಟಿಯೂ ಸಾಧ್ಯವಾಗಲಿಲ್ಲ

1985ರ 'ಅದೇ ಕಣ್ಣು' ಚಿತ್ರದ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದ ನಟ ಸತೀಶ್ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ. ಚೆನ್ನೈನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ ಇವರು ಭಾರ್ಗವ್ ಮೂಲಕ ಚಿತ್ರರಂಗ ಪ್ರವೇಶಿಸಿ, ಹಲವು ಚಿತ್ರಗಳಲ್ಲಿ ನಟಿಸಿದರು. ಸದ್ಯ ತಮಿಳು ಚಿತ್ರಗಳಿಗೆ ಡಬ್ ಮಾಡುತ್ತಿರುವ ಸತೀಶ್ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗುವ ಅವಕಾಶ ಕಳೆದುಕೊಂಡಿದ್ದರು. ಅವರ ವಾಪಸಾತಿಗಾಗಿ ಅನೇಕರ ನಿರೀಕ್ಷೆಯಿದೆ.

‘ಅದೇ ಕಣ್ಣು’ ಖ್ಯಾತಿಯ ಸತೀಶ್ ಈಗೇನು ಮಾಡುತ್ತಿದ್ದಾರೆ? ಪುನೀತ್ ಭೇಟಿಯೂ ಸಾಧ್ಯವಾಗಲಿಲ್ಲ
ಸತೀಶ್-ಪುನೀತ್
ರಾಜೇಶ್ ದುಗ್ಗುಮನೆ
|

Updated on: May 06, 2026 | 5:08 PM

Share

1985ರಲ್ಲಿ ರಿಲೀಸ್ ಆದ ‘ಅದೇ ಕಣ್ಣು’ ಸಿನಿಮಾ ಸಾಕಷ್ಟು ಗಮನ ಸೆಳೆಯಿತು. ಈ ಚಿತ್ರದಲ್ಲಿ ರಾಜ್​​ಕುಮಾರ್, ಗಾಯತ್ರಿ ಮೊದಲಾದವರು ನಟಿಸಿದ್ದರು. ಗಾಯತ್ರಿ ಜೊತೆಗೆ ರಾಜ್​​ಕುಮಾರ್ ನಟಿಸಿದ ಕೊನೆಯ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸತೀಶ್ ಅವರು ಪೊಲೀಸ್ ಇನ್​​ಸ್ಪೆಕ್ಟರ್ ಪಾತ್ರ ಮಾಡಿದ್ದರು. ಅವರು ಇತ್ತೀಚೆಗೆ ಸ್ಯಾಂಡಲ್​ವುಡ್​​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಾದರೆ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಈ ಬಗ್ಗೆ ನಿರ್ದೇಶಕ ರಘುರಾಮ್ ಅವರು ವಿಡಿಯೋ ಮಾಡಿ ಹಾಕಿದ್ದಾರೆ. ಸತೀಶ್​ ಬಗೆಗಿನ ವಿವರವನ್ನು ಅವರು ನೀಡಿದ್ದಾರೆ.

1.ಅಪರೂಪದ ನಟ ಸತೀಶ್

2.‘ಅದೇ ಕಣ್ಣು’ ಚಿತ್ರದಲ್ಲಿ ಪೊಲೀಸ್ ಪಾತ್ರ

3.ಕನ್ನಡ ಚಿತ್ರರಂಗದಿಂದ ದೂರ ಇರೋ ಸತೀಶ್

ಚೆನ್ನೈನ ‘ಸ್ವಾಗತ್’ ಹೋಟೆಲ್​ನಲ್ಲಿ ಸತೀಶ್ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆಗ ನಿರ್ದೇಶಕ ಭಾರ್ಗವ್ ಅವರು ಇದೇ ಹೋಟೆಲ್​​ನಲ್ಲಿ ತಂಗುತ್ತಿದ್ದರು. ಆಗ ಸತೀಶ್ ಪರಿಚಯ ಆಯಿತು. ‘ಒಲವು ಗೆಲುವು’ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಭಾರ್ಗವ್ ಅವರು ಸತೀಶ್​​ಗೆ ನೀಡಿದರು. ಈ ಸಿನಿಮಾದಲ್ಲಿ ಭಾರ್ಗವ್ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದರು. ಅಲ್ಲಿಂದ ಅವರ ಕನ್ನಡ ಸಿನಿಮಾ ಜರ್ನಿ ಆರಂಭ ಆಯಿತು. ಅದಕ್ಕೂ ಮೊದಲೇ ನಟನೆಯನ್ನು ಸತೀಶ್ ಕಲಿತಿದ್ದರು. ‘ಮದುವೆ ಮಾಡು ತಮಾಷೆ ನೋಡು’ ಸೇರಿದಂತೆ ಅನೇಕ ಕನ್ನಡ ಸಿನಿಮಾ ಮಾಡಿದರು. ಆ ಬಳಿಕ ಅವರು ಕನ್ನಡ ಸಿನಿಮಾ ಮಾಡಿಲ್ಲ.

2021ರ ಅಕ್ಟೋಬರ್ 29ರಂದು ಸತೀಶ್ ಅವರು ಪಿಆರ್​ಕೆ ಕಚೇರಿಯಲ್ಲಿ ಇದ್ದರು. ತಮ್ಮನ್ನು ಭೇಟಿ ಮಾಡುವಂತೆ ಸತೀಶ್​ ಅವರಿಗೆ ಅಪ್ಪು ಸೂಚಿಸಿದ್ದರು. ಹೊಸ ಸಿನಿಮಾ ಒಂದರ ಚರ್ಚೆಗೆ ಇವರ ಭೇಟಿ ನಡೆದಿತ್ತು ಎನ್ನಲಾಗಿದೆಯಾದರೂ ಈ ಬಗ್ಗೆ ಸ್ಪಷ್ಟನೆ ಇಲ್ಲ. ಅಂದು ಪುನೀತ್​​ಗೆ ಹೃದಯಘಾತ ಆಯಿತು. ಅವರು ನಿಧನರಾದರು. ಹೀಗಾಗಿ, ಸತೀಶ್-ಪುನೀತ್ ಅವರ ಭೇಟಿ ನಡೆಯಲೇ ಇಲ್ಲ.

ಇದನ್ನೂ ಓದಿ: ಕೊನೆಗೂ ಸೆಟ್ಟೇರಲೇ ಇಲ್ಲ ರಾಜ್​​ಕುಮಾರ್ ನಟಿಸಬೇಕಿದ್ದ ಆ ಸಿನಿಮಾ

ಸದ್ಯ ಸತೀಶ್ ಅವರು ತಮಿಳು ಸಿನಿಮಾಗಳಿಗೆ ಡಬ್ ಮಾಡುವ ಕೆಲಸ ಮಾಡುತ್ತಿದ್ದಾರಂತೆ. ಈ ಮೂಲಕ ಅವರು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ. ಅವರು ಕನ್ನಡಕ್ಕೆ ಕಂಬ್ಯಾಕ್ ಮಾಡಲಿ ಎಂಬುದು ಅನೇಕರ ಕೋರಿಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us